“ಬೇಕರಿ ಉತ್ಪನ್ನಗಳ”ಕುರಿತು ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ

ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯವು ರಾಜ್ಯದಲ್ಲಿನ ಕೃಷಿ ವಿಶ್ವವಿದ್ಯಾಲಯಗಳಲ್ಲಿ 2ನೇ ಸ್ಥಾನವನ್ನು ಹಾಗೂ ರಾಷ್ಟ್ರಮಟ್ಟದಲ್ಲಿ 21ನೇ ಸ್ಥಾನವನ್ನು ಭಾರತೀಯ ಕೃಷಿ ಅನುಸಂಧಾನ ಪರಿಷತ್ತು, ನವದೆಹಲಿ ಇವರು ನೀಡಿರುವ ರ್ಯಾಂಕಿಂಗ್‍ನಲ್ಲಿ ಗಳಿಸಿದ್ದು ಇದನ್ನು ಭಾರತೀಯ ಕೃಷಿ ಅನುಸಂಧಾನ ಪರಷತ್ತಿನ ಸಂಸ್ಥಾಪನಾ ದಿನಾಚಾರಣೆಯಂದು ಘೋಷಿಸಲಾಗಿರುತ್ತದೆ.
ಪ್ರಸ್ತುತ ರ್ಯಾಂಕಿಂಗ್‍ನಲ್ಲಿ ದೇಶದಲ್ಲಿನ ಕೃಷಿ ಹಾಗೂ ಕೃಷಿಗೆ ಸಂಬಂದಪಟ್ಟ ವಿಶ್ವವಿಧ್ಯಾಲಯಗಳ ವಿವಿಧ ಅಂಶಗಳಾದ ರಾಷ್ಟ್ರಮಟ್ಟದಲ್ಲ್ಲಿ ವಿದ್ಯಾರ್ಥಿಗಳ ಸಾಧನೆ, ಪ್ರಾಧ್ಯಾಪಕ / ವಿಜ್ಞಾನಿಗಳ ಸಾಧನೆ, ಸಂಶೋಧನೆ, ವಿಸ್ತರಣೆ, ರೈತ ಉಪಯೋಗಿ ತಂತ್ರಜ್ಞಾನಗಳ ವರ್ಗಾವಣೆ, ವಿವಿಧ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಸಂಸ್ಥೆಗಳ ಜೊತೆಗಿನ ಸಹಭಾಗಿತ್ವ, ಆಂತರಿಕ ಆದಾಯ ಗಳಿಕೆ, ವಿದ್ಯಾರ್ಥಿಗಳ ಉದ್ಯೋಗ ಗಳಿಕೆ ಹಾಗೂ ವಿಶ್ವವಿದ್ಯಾಲಯದ ಉತ್ತಮ ಆಡಳಿತವನ್ನು ಗಮನಿಸಿ ಆಯ್ಕೆ ಮಾಡಲಾಗಿದೆ. ಪ್ರಸ್ತುತ ರಾಜ್ಯದಲ್ಲಿ ಕೃಷಿ ಹಾಗೂ ಕೃಷಿಗೆ ಸಂಬಂದಿಸಿದಂತೆ ಆರು ವಿಶ್ವವಿದ್ಯಾಲಯಗಳಿದ್ದು ಅದರಲ್ಲಿ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯವು 2ನೇ ಸ್ಥಾನ ಗಳಿಸದ್ದಕ್ಕಾಗಿ ಸನ್ಮಾನ್ಯ ಕುಲಪತಿಗಳವರು ಅಧಿಕಾರಿ ವರ್ಗದವರನ್ನು, ಡೀನ್‍ಗಳವರನ್ನು, ನಿರ್ದೇಶಕರನ್ನು, ವಿಜ್ಞಾನಿಗಳನ್ನು, ಪ್ರಾಧ್ಯಾಪಕರನ್ನು, ವಿದ್ಯಾರ್ಥಿಗಳನ್ನು, ಬೋಧಕೇತರ ಸಿಬ್ಬಂದಿಗಳವರನ್ನು ಅಭಿನಂದಿಸುತ್ತಾ ಕಳೆದ ಸಾಲಿನ 51ನೇ ರ್ಯಾಂಕ್‍ನಿಂದ ಈ ವರ್ಷದಲ್ಲಿ 21ನೇ ರ್ಯಾಂಕ್ ಬಂದಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುತ್ತಾರೆ.
ಶೈಕ್ಷಣಿಕ ಕ್ಷೇತ್ರದಲ್ಲಿ ಸಮಗ್ರ ಬೆಳವಣಿಗೆಗಾಗಿ ವಿಶ್ವವಿದ್ಯಾಲಯವು ಒಂದು ಕಾರ್ಯೋನ್ಮುಖ ತಂಡವಾಗಿ ಕಾರ್ಯನಿರ್ವಹಿಸಿದೆ ಎಂದು ಪ್ರೋಫೆಸರ್ ನಾಯ್ಕ್ ರವರು ತಿಳಿಸಿದರು. ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ 7 ಜಿಲ್ಲೆಗಳ ಕೃಷಿ ಹಾಗೂ ಕೃಷಿಗೆ ಸಂಬಂದಪಟ್ಟ ವಿಚಾರಗಳ ಬಗ್ಗೆ ಪುಸ್ತಕವನ್ನು ಪ್ರಕಟಿಸಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ರೈತಬಾಂಧವರಿಗೆ ವಿಶ್ವವಿದ್ಯಾಲಯವು 19 ಲಕ್ಷ ಗುಣಮಟ್ಟದ ಸಸಿಗಳನ್ನು ವಿತರಿಸಿದೆ. ಈ ಹೊಸ ವಿಶ್ವವಿದ್ಯಾಲಯವು ಇನ್ನೂ ಹೆಚ್ಚನ ಸಾಧನೆ ಮಾಡುವ ಸಾಮಥ್ರ್ಯ ಹೊಂದಿದ್ದು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲಿದೆ ಎಂದು ಸನ್ಮಾನ್ಯ ಕುಲಪತಿಗಳವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!