ಶಿವಮೊಗ್ಗದ ಪಶು ವೈದ್ಯಕೀಯ ಮಹಾವಿದ್ಯಾಲಯವು ಮನ್ ವೆಲ್ತ್ ವೆಟರಿನರಿ ಅಸೋಸಿಯೇಷನ್ ಮತ್ತು ಇಂಡಿಯನ್ ಬ್ಯಯಾಟ್ರಿಶಿಯನ್ಸ್ ಅಸೋಸಿಯೇಷನ್, ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ ಇವರ ಜಂಟಿ ಸಹಯೋಗದಲ್ಲಿ advances in diagnosis and treatment of ruminal disorders of bovines ಎಂಬ ವಿಷಯದ ಕುರಿತು ಇಂದಿನಿಂದ ಎರಡು ದಿನಗಳ ಅಂತರಾಷ್ಟ್ರೀಯ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.

ಎರಡು ದಿನಗಳ ಅಂತರಾಷ್ಟ್ರೀಯ ಕಾರ್ಯಾಗಾರವನ್ನು ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ: ಹೆಚ್.ಡಿ.ನಾರಾಯಣಸ್ವಾಮಿ ಅವರು ದೀಪ ಬೆಳಗಿಸುವುದರ ಮೂಲಕ ಕಾಯ೯ಕ್ರಮಕ್ಕೆ ಚಾಲನೆ ನೀಡಿದರು. ಆಸ್ಟ್ರೇಲಿಯಾದ ವಿಷಯ ತಜ್ಞರಾದ ಡಾ.ನತಾಶಾ ಲೀಸ್ ಹಾಗೂ ಡಾ.ಮಾಕ್ರ್ಸ್ ಬೂತ್ ಇವರ ಮೇಲ್ವಿಚಾರಣೆಯಲ್ಲಿ ಈ ಕಾರ್ಯಾಗಾರ ಜರುಗಿತು. ಈ ಕಾರ್ಯಾಗಾರದಲ್ಲಿ ವಿವಿಧ ರಾಜ್ಯಗಳ 40ಕ್ಕಿಂತ ಹೆಚ್ಚು ಪಶುವೈದ್ಯರು ಪಾಲ್ಗೊಂಡಿದ್ದರು.


error: Content is protected !!