ಶಿವಮೊಗ್ಗ, ಫೆಬ್ರವರಿ 25 : ಶಿವಮೊಗ್ಗದ ಪಶು ವೈದ್ಯಕೀಯ ಮಹಾವಿದ್ಯಾಲಯವು ಕಾಮನ್ ವೆಲ್ತ್ ವೆಟರಿನರಿ ಅಸೋಸಿಯೇಷನ್ ಮತ್ತು ಇಂಡಿಯನ್ ಬ್ಯಯಾಟ್ರಿಶಿಯನ್ಸ್ ಅಸೋಸಿಯೇಷನ್, ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ ಇವರ ಜಂಟಿ ಸಹಯೋಗದಲ್ಲಿ ಇವರುಗಳ ಸಂಯುಕ್ತಾಶ್ರಯದಲ್ಲಿ ಫೆಬ್ರವರಿ 27 ಮತ್ತು 28ರಂದು ವಿವಿಯ ಸಭಾಂಗಣದಲ್ಲಿ advances in diagnosis and treatment of ruminal disorders of bovines ಎಂಬ ವಿಷಯದ ಕುರಿತು ಎರಡು ದಿನಗಳ ಅಂತರಾಷ್ಟ್ರೀಯ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಾಗಾರದಲ್ಲಿ ವಿವಿಧ ರಾಜ್ಯಗಳ 40ಕ್ಕಿಂತ ಹೆಚ್ಚು ಪಶುವೈದ್ಯರು ಪಾಲ್ಗೊಳ್ಳಲಿದ್ದಾರೆ.
ಈ ಕಾರ್ಯಾಗಾರವು ವಿವಿಧ ಶಸ್ತ್ರಚಿಕಿತ್ಸೆಗಳನ್ನು ಕೈಗೊಳ್ಳುವಲ್ಲಿ, ಕ್ಷೇತ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಪಶುವೈದ್ಯರ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ ಅಲ್ಲದೆ ರೈತರಿಗೆ ದೊರಕುವ ಸೇವೆಗಳ ಗುಣಮಟ್ಟವನ್ನು ಹೆಚ್ಚಿಸಲಿದೆ. ಈ ಕಾರ್ಯಕ್ರಮವನ್ನು ಏರ್ಪಡಿಸುತ್ತಿರುವುದರಿಂದ ವಿಶ್ವವಿದ್ಯಾಲಯದ ಧ್ಯೇಯ ವಾಕ್ಯ ರೈತ ಸ್ನೇಹಿ ಹಾಗೂ ಗ್ರಾಮೀಣಾಭಿವೃದ್ದಿಯ ಧ್ಯೇಯ ಎಂಬ ಉದ್ದೇಶ ಈಡೇರಿದಂತಾಗಲಿದೆ.
ಆಸ್ಟ್ರೇಲಿಯಾದಿಂದ ವಿಷಯ ತಜ್ಞರಾದ ಡಾ.ನತಾಶಾ ಲೀಸ್ ಹಾಗೂ ಡಾ.ಮಾಕ್ರ್ಸ್ ಬೂತ್ ಇವರ ಮೇಲ್ವಿಚಾರಣೆಯಲ್ಲಿ ಈ ಕಾರ್ಯಾಗಾರ ಜರುಗಲಿದೆ. ಇದೇ ಸಂದರ್ಭದಲ್ಲಿ ಪ್ರಾಣಿಗಳಲ್ಲಿ ಹುಚ್ಚುನಾಯಿ ಕಾಯಿಲೆ ರೋಗಪತ್ತೆಯ ಬಗ್ಗೆಯೂ ಸಹ ಪ್ರತ್ಯೇಕ ಕಾರ್ಯಾಗಾರ ನಡೆಯಲಿದೆ.
ಈ ಕಾರ್ಯಾಗಾರಗಳನ್ನು ಬೀದರ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ: ಹೆಚ್.ಡಿ.ನಾರಾಯಣಸ್ವಾಮಿ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ:ಕೆ.ಸಿ.ವೀರಣ್ಣ, ಸಿವಿಎ ಕಾರ್ಯಕಾರಿ ನಿರ್ದೇಶಕರಾದ ಡಾ: ಅಬ್ದುಲ್ ರಹಮಾನ್, ಐಬಿಎ ಅಧ್ಯಕ್ಷರಾದ ಡಾ: ಎಸ್. ಯತಿರಾಜ್ ಆಗಮಿಸುವರು. ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್, ಡಾ: ಪ್ರಕಾಶ್ ನಡೂರ್ ಅಧ್ಯಕ್ಷತೆ ವಹಿಸುವರು. ಈ ಕಾರ್ಯಾಗಾರದ ಸಂಘಟಕರಾದ ಡಾ: ಎನ್.ಬಿ.ಶ್ರೀಧರ ಹಾಗೂ ಡಾ: ಶ್ರೀಕೃಷ್ಣ ಇಸಳೂರು ಮತ್ತು ಸಹ ಸಂಘಟಕ ಡಾ: ರವಿ ರಾಯದುರ್ಗ ಹಾಗೂ ಡಾ: ಅರುಣ್ ಎಸ್.ಜೆ. ಮತ್ತಿತರರು ಉಪಸ್ಥಿತರಿರುವರು.

error: Content is protected !!