ಕೃಷಿ ಸಚಿವರಾದ ಶ್ರೀ ಬಿ.ಸಿ.ಪಾಟೀಲ್ ಇವರು ಕೋವಿಡ್ ಸಮಯದಲ್ಲಿ ರೈತರ ನೆರವಿಗೆ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವತಿಯಿಂದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸ್ಥಾಪಿಸಿರುವ ‘ಅಗ್ರಿ ವಾರ್ ರೂಂ’ಗೆ ಭೇಟಿ ನೀಡಿದರು. ಕೋವಿಡ್ ಸಮಯದಲ್ಲಿ ‘ಅಗ್ರಿ ವಾರ್ ರೂಂ’ ಮುಖಾಂತರ ರೈತರಿಗೆ ಕೈಗೊಂಡಿರುವ ತರಬೇತಿ ಕಾರ್ಯಕ್ರಮಗಳು, ಮಣ್ಣು ಮತ್ತು ನೀರು ಪರೀಕ್ಷೆ, ಸಾಮಾಜಿಕ ಜಾಲತಾಣಗಳ ಮುಖಾಂತರ ತಾಂತ್ರಿಕ ಮಾಹಿತಿ, ಬಿತ್ತನೆ ಬೀಜ, ತೋಟಗಾರಿಕಾ ಸಸಿಗಳನ್ನು ವಿತರಿಸಿರುವುದರ ಬಗ್ಗೆ ವಿಶ್ವವಿದ್ಯಾಲಯದ ಅಧಿಕಾರಿಗಳು ಮತ್ತು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗÀಳಿಂದ ಮಾಹಿತಿಯನ್ನು ಪಡೆದರು.

ಕೋವಿಡ್ ಸಮಯದಲ್ಲಿ ರೈತರಿಗೆ ಅಗತ್ಯ ಮಾಹಿತಿಗಳಿಗೆ ಸ್ಪಂದಿಸಲು ಈ ಅಗ್ರಿ ವಾರ್ ರೂಂ ನೆರವಾಗುತ್ತಿರುವ ಬಗ್ಗೆ, ಮಾರಾಟ ವ್ಯವಸ್ಥೆಗೆ ಸಂಪರ್ಕ ಸೇತುವಾಗಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಹಾಗೂ ರೈತರಲ್ಲಿ ಕೋವಿಡ್-19ರ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿರುವ ಬಗ್ಗೆ, ಬಿತ್ತನೆ ಬೀಜ, ತೋಟಗಾರಿಕಾ ಸಸಿಗಳು ಲಭ್ಯವಿರುವ ಮಾಹಿತಿ ನೀಡಲಾಗುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಪ್ರಗತಿಪರ ರೈತರಾದ ಶ್ರೀ ದುರ್ಗಪ್ಪ ಅಂಗಡಿ, ಸಹಸ್ರವಳ್ಳಿ, ಶಿಕಾರಿಪುರ ತಾ||, ಶ್ರೀ ರವಿಕುಮಾರ್, ಸಂಪಗೋಡು, ಸೊರಬ ತಾ|| ಇವರೊಂದಿಗೆ ಚರ್ಚಿಸಿದರು.

ಭೇಟಿಯ ಸಮಯದಲ್ಲಿ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾದ ಡಾ. ಎಂ.ಕೆ.ನಾಯಕ್, ಅಧಿಕಾರಿಗಳಾದ ಡಾ. ಕೆ.ಸಿ.ಶಶಿಧರ, ವಿಸ್ತರಣಾ ನಿರ್ದೇಶಕರು, ಡಾ. ಎಂ. ಹನುಮಂತಪ್ಪ, ಸಂಶೋಧನಾ ನಿರ್ದೇಶಕರು, ಡಾ.ಹೆಚ್.ಡಿ.ಮೋಹನ್‍ಕುಮಾರ್, ವಿಶೇಷ ಅಧಿಕಾರಿ (ಬೀಜ ಘಟಕ), ಡಾ. ಬಸವರಾಜ ನಾಯಕ್, ಹಿರಿಯ ಕ್ಷೇತ್ರಾಧಿಕಾರಿ, ಡಾ. ಬಿ. ಸಿ. ಹನುಮಂತಸ್ವಾಮಿ, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಕೆ.ವಿ.ಕೆ., ವಿಜ್ಞಾನಿಗಳು ಸೇರಿದಂತೆ ನವಿಲೆ ಆವರಣದ ಇತರೆ ಅಧಿಕಾರಿಗಳು ಉಪಸ್ಥಿತರಿದ್ದು, ವಿಶ್ವವಿದ್ಯಾಲಯದ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿದರು.

error: Content is protected !!