ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ರೈತರ ನೆರವಿಗೆ ‘ಅಗ್ರಿ ವಾರ್ ರೂಂ’ ಪ್ರಾರಂಭಿಸಲಾಗಿದೆ. ಕೋವಿಡ್ ಸಂಕಟದಲ್ಲಿ ರೈತರಿಗೆ ತಾಂತ್ರಿಕ ಮಾಹಿತಿ, ಸಲಹೆ ಹಾಗೂ ಕ್ಷೇತ್ರ ಭೇಟಿ ಅಗತ್ಯಗಳಿಗೆ ಸ್ಪಂದಿಸಲು ಈ ವಾರ್ ರೂಂ ನೆರವಾಗಲಿದೆ ಹಾಗೂ ಸಂಪರ್ಕ ಮಾಹಿತಿ, ಮಾರಾಟ ವ್ಯವಸ್ಥೆಗೆ ಸಂಪರ್ಕ ಸೇತುವಾಗಿ ಕಾರ್ಯ ನಿರ್ವಹಿಸಲಿದೆ. ಈ ಕೇಂದ್ರವು ರೈತರಲ್ಲಿ ಕೋವಿಡ್ 19ರ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಬೀಜ, ನರ್ಸರಿಗಳು ಲಭ್ಯವಿರುವ ಮಾಹಿತಿ ನೀಡಲಾಗುತ್ತಿದೆ. ಡಾ. ಎಂ. ಕೆ. ನಾಯಕ್, ಕುಲಪತಿಗಳು, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ ಇವರು ವಾರ್ ರೂಂ ಉದ್ಘಾಟನೆ ಮಾಡಿದರು.
ಡಾ. ಹೆಚ್. ಆರ್. ಯೋಗೀಶ್, ಉಪನಿರ್ದೇಶಕರು, ತೋಟಗಾರಿಕೆ ಹಾಗೂ ವಿಶ್ವವಿದ್ಯಾಲಯದ ಅಧಿಕಾರಿಗಳು ಉಪಸ್ಥಿತರಿದ್ದರು. ಅಗ್ರಿ ವಾರ್ ರೂಂ ಸಂಪರ್ಕ ಸಂಖ್ಯೆ : 9480838967, 9480838976, 8277932600, 9448999216, 08182-267017, ಸ್ಥಳ : ಕೃಷಿ ವಿಜ್ಞಾನ ಕೇಂದ್ರ, ನವಿಲೆ, ಶಿವಮೊಗ್ಗ, ಸಮಯ : ಪ್ರತಿದಿನ ಬೆಳಗ್ಗೆ 10:00 ರಿಂದ ಸಂಜೆ 4:00ರವರೆಗೆ
ಡಾ. ಮೋಹನ್ ಕುಮಾರ್, ಹೆಚ್.ಡಿ., ಸಹ ಸಂಶೋಧನಾ ನಿರ್ದೇಶಕರು ಹಾಗೂ ವಿಶೇಷ ಅಧಿಕಾರಿ, ಬೀಜ ಘಟಕ ಇವರು ಅಗ್ರಿ ವಾರ್ ರೂಂನ ಅಧ್ಯಕ್ಷರಾಗಿರುತ್ತಾರೆ. ಡಾ. ಎಂ. ಸುಧೀಂದ್ರ, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಕೃಷಿ ವಿಸ್ತರಣೆ ವಿಭಾಗ ಇವರು ಉಪಾಧ್ಯಕ್ಷರಾಗಿರುತ್ತಾರೆ. 12 ಜನ ವಿಜ್ಞಾನಿಗಳ ತಂಡ ಕಾರ್ಯನಿರ್ವಹಿಸುತ್ತಿದೆ. ಸಂಚಾಲಕರಾಗಿ ಕೃಷಿ ವಿಜ್ಞಾನ ಕೇಂದ್ರದ ಪಶು ವಿಜ್ಞಾನಿಯಾದ ಡಾ. ಎಂ., ಅಶೋಕ್ ಇವರು ಕಾರ್ಯನಿರ್ವಹಿಸುತ್ತಾರೆ. ನಿತ್ಯ 2 ರಿಂದ 3 ಜನ ವಿಜ್ಞಾನಿಗಳು ಈ ಅಗ್ರಿ ವಾರ್ ರೂಂ ನಲ್ಲಿ ಕಾರ್ಯನಿರ್ವಹಿಸುತ್ತಾರೆ. ಜೊತೆಗೆ ಪ್ರತಿ ಜಿಲ್ಲಾ ಹಂತದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಅವರ ವಿವರಗಳು;
ಕ್ರ.ಸಂ. ನೋಡಲ್ ಅಧಿಕಾರಿ ಹೆಸರು ಜಿಲ್ಲೆ ದೂರವಾಣಿ ಸಂಖ್ಯೆ
- ಡಾ. ಬಿ. ಸಿ. ಹನುಮಂತಸ್ವಾಮಿ ಶಿವಮೊಗ್ಗ 94808 38976
- ಡಾ. ಎಸ್. ಓಂಕಾರಪ್ಪ ಚಿತ್ರದುರ್ಗ 94808 38201
- ಡಾ. ಹೆಚ್. ಎಸ್. ಚೈತನ್ಯ ಉಡುಪಿ 94804 58083
- ಡಾ. ಟಿ. ಪಿ. ಭರತ್ ಕುಮಾರ್ ಚಿಕ್ಕಮಗಳೂರು 94808 38203
- ಡಾ. ಟಿ. ಎನ್. ದೇವರಾಜ ದಾವಣಗೆರೆ 94498 56876
- ಡಾ. ಸಾಜು ಜಾರ್ಜ್ ಕೊಡಗು 99450 35707
- ಡಾ. ಟಿ. ಜೆ. ರಮೇಶ್ ದಕ್ಷಿಣ ಕನ್ನಡ 87947 06468
ರೈತರು ತಮ್ಮ ಸಮಸ್ಯೆಗಳಿಗೆ ಸಂಕಷ್ಟ ಸಮಯದಲ್ಲಿ ಈ ಸೌಲಭ್ಯ ಬಳಸಿಕೊಳ್ಳಬಹುದು ಎಂದು ವಿಶ್ವವಿದ್ಯಾಲಯದ ಡಾ. ಕೆ.ಸಿ. ಶಶಿಧರ್, ವಿಸ್ತರಣಾ ನಿರ್ದೇಶಕರು, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ ಇವರು ತಿಳಿಸಿದ್ದಾರೆ.
ಅಗ್ರಿ ವಾರ್ ರೂಂ ಉದ್ಘಾಟನೆ ಸಂದರ್ಭದಲ್ಲಿ ಕುಲಪತಿಗಳು, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವತಿಯಿಂದ 76 ಲೀಟರ್ ಹಾಲನ್ನು 150 ಕುಟುಂಬಗಳಿಗೆ ಉಚಿತವಾಗಿ ವಿತರಿಸಲು ಶ್ರೀ ವಿಶ್ವಾಸ್, ಕಾರ್ಪೋರೇಟರ್ ಇವರಿಗೆ ತಲುಪಿಸಲಾಯಿತು. ಅಲ್ಲದೆ ಮುಂಗಾರು ಹಂಗಾಮಿನಲ್ಲಿ ನೆಡಲು ಮುಂಗಡವಾಗಿ ಕಾಯ್ದಿರಿಸಿದ 3 ಜನರ ರೈತರಿಗೆ ಪ್ರತಿ ಸಸಿಗೆ ರೂ.15/-ರಂತೆ ಒಟ್ಟು 1500 ಪಪ್ಪಾಯ ಥೈವಾನ್ ರೆಡ್ ಲೇಡಿ ತಳಿಯ ಸಸಿಗಳನ್ನು ನೀಡಲಾಯಿತು.