ಶಿವಮೊಗ್ಗ, ಮೇ-31, : ಕೈಗಾರಿಕೆ ತರಬೇತಿ ಮತ್ತು ಉದ್ಯೋಗ ಇಲಾಖೆಯ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯು ವಿವಿಧ ವೃತ್ತಿಗಳ ಪ್ರವೇಶಕ್ಕಾಗಿ ಮೆರಿಟ್ ಕಂ ರಿಸರ್ವೇಷನ್ ಆಧಾರಿತ ಸರ್ಕಾರಿ ಸೀಟುಗಳಿಗೆ ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಂದ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ.
2 ವರ್ಷಗಳ ವೃತ್ತಿ ತರಬೇತಿಗಳಾದ ಎಲೆಕ್ಟ್ರೀಷಿಯನ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಫಿಟ್ಟರ್, ಟರ್ನರ್. ಉದ್ಯೋಗ ಯೋಜನೆಯಡಿ ಲಭ್ಯವಿರುವ ವೃತ್ತಿಗಳಾದ (2 ವರ್ಷಗಳ ತರಬೇತಿ) ಮೆಕ್ಯಾನಿಕ್ ಎಲೆಕ್ಟ್ರಿಕ್ ವೆಹಿಕಲ್, ಅಡ್ವಾನ್ಸ್ ಸಿ.ಎನ್.ಸಿ. ಮೆಷಿನಿಂಗ್ ಟೆಕ್ನಿಷಿಯನ್, ಬೇಸಿಕ್ ಡಿಸೈನರ್ ಮತ್ತು ವರ್ಚುಯಲ್ ವೆರಿಫೈಯರ್ (ಮೆಕ್ಯಾನಿಕಲ್), (1 ವರ್ಷಗಳ ತರಬೇತಿ) ಇಂಡಸ್ಟ್ರೀಯಲ್ ರೋಬೋಟಿಕ್ಸ್ ಮತ್ತು ಡಿಜಿಟಲ್ ಮ್ಯಾನಿಫ್ಯಾಕ್ಚರಿಂಗ್ ಟೆಕ್ನಿಷಿಯನ್, ಆರ್ಟಿಸನ್ ಯೂಸಿಂಗ್ ಅಡ್ವಾನ್ಸ್ ಟೂಲ್, ಮ್ಯಾನ್ಯುಫ್ಯಾಕ್ಚರಿಂಗ್ ಪ್ರೋಸಸ್ ಕಂಟ್ರೋಲ್ ಮತ್ತು ಆಟೋಮಿಷನ್ ಹಾಗೂ ಐಎಂಸಿ-ಪಿಪಿಪಿ/ಮ್ಯಾನೇಜ್ಮೆಂಟ್ ಸೀಟ್‍ಗಳಲ್ಲಿ 2 ವರ್ಷಗಳ ತರಬೇತಿಗಳಾದ ಎಲೆಕ್ಟ್ರೀಷಿಯನ್, ಫಿಟ್ಟರ್, ಮೋಟಾರ್ ಮೆಕ್ಯಾನಿಕಲ್ ವೆಹಿಕಲ್ ಹಾಗೂ 1 ವರ್ಷ ತರಬೇತಿಯ ವೆಲ್ಡರ್ ಕೋರ್ಸ್‍ಗಳಿಗೆ ಪ್ರವೇಶಗಳು ಲಭ್ಯವಿದೆ.

ಆಸಕ್ತರು ಸಂಸ್ಥೆಯ ವೆಬ್‍ಸೈಟ್ www.cite.karnataka.gov.in ಮೂಲಕ ಜೂನ್ 09 ರೊಳಗಾಗಿ ಅರ್ಜಿ ಸಲ್ಲಿಸಿ, ಆಯ್ಕೆ ಮಾಡಿಕೊಂಡ ಸರ್ಕಾರಿ ಐಟಿಐಗಳಲ್ಲಿ ಮೂಲ ದಾಖಲಾತಿಗಳನ್ನು ನಿಗಧಿತ ದಿನಾಂಕಗಳೊಳಗೆ ಪರಿಶೀಲನೆ ಮಾಡಿಕೊಳ್ಳುವಂತೆ ಹಾಗೂ ಪಿಪಿಪಿ ಸೀಟುಗಳ ಪ್ರವೇಶಕ್ಕಾಗಿ ಖುದ್ದಾಗಿ ಅಥವಾ ದೂ.ಸಂ.: 08187-295040 ನ್ನು ಸಂಪರ್ಕಿಸುವಂತೆ ಶಿಕಾರಿಪುರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

error: Content is protected !!