ಇಂದು ಶಿಕಾರಿಪುರ ತಾಲ್ಲೂಕಿನ ಹೊಸೂರು ಹೋಬಳಿಯ, ಪುರ್ತಿಗೆರೆ, ಮಾರ್ವಳ್ಳಿ, ಕೇತದಹಳ್ಳಿ, ಮಟ್ಟಿಕೋಟೆ, ದಿಂಡದಹಳ್ಳಿ ಮತ್ತು ನಿಂಬೆಗೊಂದಿ ಹಳ್ಳಿಗಳಲ್ಲಿ “ಏತ ನೀರಾವರಿ ಯೋಜನೆ” (Lift Irrigation project) ಗೆ ಸಂಬಂಧಿಸಿದಂತೆ, ಡಾ.ಕೆ.ಸಿ.ಶಶಿಧರ್, ವಿಸ್ತರಣಾ ನಿರ್ದೇಶಕರು, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ ಹಾಗೂ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡದೊಂದಿಗೆ ಭೇಟಿ ನೀಡಿ ನೀರಾವರಿ ಯೋಜನೆ ಬಗ್ಗೆ ಮಾಹಿತಿ ಪಡೆದುಕೊಂಡರು .