ಮಲೆನಾಡು ಶ್ರೀಗಂಧದ ನಾಡು. ಇತ್ತೀಚಿನ ದಿನಗಳಲ್ಲಿ ಶ್ರೀಗಂಧ ಮಾಯವಾಗುತ್ತಿದೆ. ಭದ್ರತೆಯ ದೃಷ್ಟಿಯಿಂದಲೂ ಶ್ರೀಗಂಧ ಬೆಳೆಯುವುದು ಸುಲಭವಲ್ಲ. ಆದರೆ ಶಿವಮೊಗ್ಗ ಜಿಲ್ಲೆಯಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಶ್ರೀಗಂಧ ಬೆಳೆಯುವ ಬೆಳೆಗಾರರಿಗೆ ಪ್ರೋತ್ಸಾಹಧನವನ್ನು ನೀಡಿ ಬೆನ್ನು ತಟ್ಟುತ್ತಿದೆ. ಮುಖ್ಯಮಂತ್ರಿಗಳ ತವರು ಕ್ಷೇತ್ರವಾದ ಶಿಕಾರಿಪುರದಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಶ್ರೀಗಂಧವನ್ನು ಬೆಳೆಯುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಸಾಮಾಜಿಕ ಅರಣ್ಯ ಇಲಾಖೆಯು ಸಾಥ್ ನೀಡಿದೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ರಾಜು ತಮ್ಮ ಸಹೋದರರೊಡಗೂಡಿ ಬರೋಬ್ಬರಿ 37 ಎಕರೆ ಶ್ರೀಗಂಧ ಬೆಳೆದಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಬೆಳೆದ ಮರಗಳನ್ನು ಕಾಪಾಡಿದ್ದಾರೆ. ಭತ್ತ, ರಾಗಿ, ಜೋಳ ಮುಂತಾದ ದವಸ ಧಾನ್ಯಗಳನ್ನು ಬೆಳೆಯುವುದನ್ನು ನಾವು ಕಂಡಿದ್ದೇವೆ. 25 ವರ್ಷಗಳ ಕಾಲ ಯಾವುದೇ ಫಲವನ್ನು ನೀಡದ ಶ್ರೀಗಂಧವನ್ನು ಬೆಳೆದು ಕಾಪಾಡಿಕೊಳ್ಳುವುದು ಸುಲಭದ ಮಾತಲ್ಲ. ಆದರೆ ಮಲೆನಾಡು ಶ್ರೀಗಂಧದ ನೆಲೆಬೀಡಾಗಿತ್ತು. ಈ ನೆಲದ ಮಣ್ಣಿನ ಮಹತ್ವವನ್ನು ಮತ್ತೆ ಬೆಳಗಲು ರಾಜು ಮತ್ತು ಸಹೋದರರು ಆರಂಭಿಸಿದ್ದಾರೆ.
ಸಾಮಾಜಿಕ ಅರಣ್ಯ ಇಲಾಖೆ ಒಂದು ಸಸಿಗೆ 12ರೂಗಳಂತೆ ಇವರಿಗೆ ಪ್ರೋತ್ಸಾಹಧನ ನೀಡುತ್ತಿದೆ. ಇದನ್ನು ಮೂರು ವರ್ಷಗಳ ಕಾಲ ನೀಡಲಾಗುತ್ತದೆ. ಇವರ ಜಾಗದಲ್ಲಿ ಒಟ್ಟು 14 ಸಾವಿರ ಶ್ರೀಗಂಧದ ಸಸಿಗಳು ಮರವಾಗುತ್ತಿವೆ.
ಅಷ್ಟೇ ಅಲ್ಲದೆ ಶಿಕಾರಿಪುರ ತಾಲ್ಲೂಕಿನ ಹನುಮಂತಪ್ಪ ನರೇಗಾ ಯೋಜನೆಯಲ್ಲಿ ಇಲ್ಲಿ ಶ್ರೀಗಂಧ ಬೆಳೆದೊದ್ದಾರೆ. ಭಾರತ ಸರ್ಕಾರದ ಯೋಜನೆಯಲ್ಲಿ ಸಸಿ ನೆಟ್ಟು ಯಶಸ್ಸಿನತ್ತ ಮುಂದೆ ಸಾಗಿದ್ದಾರೆ. ಶಿವಮೊಗ್ಗ ತಾಲ್ಲೂಕಿನ ಹಾಗಲಮನೆ ರೈತ ಅಶ್ರಫ್ ಸುಮಾರು 35ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಶ್ರೀಗಂಧ ಕಳೆದ ಒಂದು ವರ್ಷದಿಂದ ಬೆಳೆದು ಪೋಷಿಸಿದ್ದಾನೆ. ಹೀಗೆ ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ಶ್ರೀಗಂಧ ಶಕೆ ಆರಂಭವಾಗಿದೆ.
ಶಿವಮೊಗ್ಗದ ಸಾಮಾಜಿಕ ಅರಣ್ಯ ಇಲಾಖೆಯ ಡಿಎಫ್ ಓ ಆಲ್ವಿನ್ ಮಾತನಾಢಿ ಶಿವಮೊಗ್ಗ ಜಿಲ್ಲೆಯಲ್ಲಿ ರೈತರು ಶ್ರೀಗಂಧ ಬೆಳೆಯಲು ಆರಂಭಿಸಿದ್ದಾರೆ. ಇದಕ್ಕೆ ಪ್ರೋತ್ಸಾಹಧನವಾಗಿ ಪ್ರತಿ ಗಿಡಕ್ಕೆ 12 ರೂಗಳಂತೆ 3 ವರ್ಷಗಳ ಕಾಲ ನೀಡುತ್ತೇವೆ. ಸಸಿಯನ್ನು ಕಾಪಾಡಲೂ ಕೂಡ ನೋಂದಾಯಿತ ರಐತರಿಗೆ ಸಹಕಾರ ನೀಡಲಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರ ಶ್ರೀಗಂಧವನ್ನು ಉಳಿಸಿಕೊಳ್ಳುವಲ್ಲಿ ಮತ್ತೆ ಅದನ್ನು ಬೆಳೆಸುವಲ್ಲಿ ಹೆಚ್ಚಿನ ಪ್ರೋತ್ಸಾಹವನ್ನು ರೈತರಿಗೆ ನೀಡುತ್ತಿದೆ ಎಂದು ತಿಳಿಸಿದರು.
ಹನುಮಂತಪ್ಪ,ಪ್ರಗತಿಪರ ಕೃಷಿಕ ಶಿಕಾರಿಪುರ: ಮಾತನಾಡಿ ಕೇಂದ್ರ ಸರ್ಕಾರದ ನರೇಗಾ ಯೋಜನೆಯಲ್ಲಿ ಶ್ರೀಗಂಧವನ್ನು ಬೆಳೆಯುತ್ತಿದ್ದೇನೆ. ಸರ್ಕಾರದ ಈ ಯೋಜನೆ ನನ್ನ ತೋಟದಲ್ಲಿ ನಾನು ನೆಡುವ ಸಸಿ ಮತ್ತು ಕರಷಿಗೆ ಸಂಬಂಧಿಸಿದಂತೆ ಸರ್ಕಾರ ನನಗೆ ಆರ್ಥಿಕ ಸಹಕಾರ ನೀಡಿದೆ. ಎಲ್ಲಾ ರೈತರು ಈ ರೀತಿಯ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಪವನ್‍ಕುಮಾರ್, ವಲಯ ಅರಣ್ಯಾಧಿಕಾರಿ, ಶಿಕಾರಿಪುರ ಮಾತನಾಡಿ ಸಾಮಾಜಿಕ ಅರಣ್ಯ ವಿಭಾಗದಲ್ಲಿ ಶಿಕಾರಿಪುರ ತಾಲ್ಲೂಕಿನಲ್ಲಿ ರೈತರಿಗೆ ಸಸಿಗಳನ್ನು ನೆಡಲು ವಿಶೇಷ ಸಹಕಾರವನ್ನು ನೀಡುತ್ತಿದ್ದೇವೆ. 8ಲಕ್ಷಕ್ಕೂ ಅಧಿಕ ಪ್ರೋತ್ಸಾಹಧನವನ್ನು ಈ ಭಾಗದ ರೈತರಿಗೆ ನೀಡಲಾಗಿದೆ. ಶ್ರೀಘಂದ ಬೆಳೆಯುವಲ್ಲಿ ಶಿಕಾರಿಪುರದ ರೈತರು ಹೆಚ್ಚು ಮನಸ್ಸು ಮಾಡುತ್ತಿದ್ದಾರೆ ಎಂದು ತಿಳಿಸಿದರು.
ರಾಜು, ಶ್ರೀಗಂಧ ಬೆಳೆಗಾರ, ಶಿಕಾರಿಪುರ ಶಿವಮೊಗ್ಗ ಜಿಲ್ಲೆಯ ಮಲೆನಾಡು ಮತ್ತೆ ಶ್ರೀಗಂಧದ ನಾಡಾಗಬೇಕು. 37 ಎಕರೆ ನಮ್ಮ ಜಾಗದಲ್ಲಿ ಸಂಪೂರ್ಣ ಶ್ರೀಗಂಧ ಬೆಳೆದಿದ್ದೇವೆ. ಸಾಮಾಜಿಕ ಅರಣ್ಯ ಇಲಾಖೆ ನಮ್ಮ ಈ ಕಾಯಕಕ್ಕೆ ಆರ್ಥಿಕ ಸಹಕಾರವನ್ನು ನೀಡಿ ಪ್ರೋತ್ಸಾಹಿಸುತ್ತಿದೆಎಂದರು.
ವೆಂಕಟೇಶ, ರೈತಮಾತನಾಡಿ ಬೆಳೆದ ಶ್ರೀಗಂಧವನ್ನು ಕಾಪಾಡಿಕೊಳ್ಳುವುದು ಸುಲಭವಲ್ಲ. ನಾವು 37 ಎಕರೆಯ ಸುತ್ತಲೂ ಐಬೆಕ್ಸ್ ಬೇಲಿ ಮಾಡಿದ್ದೇವೆ. ಭದ್ರತೆಗೆ ನಾಯಿಗಳನ್ನು ಸಾಕಿದ್ದೇವೆ. ನಮ್ಮ ಈ ಕೆಲಸಗಳಿಗೆ ಅರಣ್ಯ ಇಲಾಖೆ ಪ್ರೋತ್ಸಾಹ ನೀಡಿ ಸಹಕರಿಸುತ್ತಿದೆ ಎಂದು ತಿಳಿಸಿದರು
ವಲಯ ಅರಣ್ಯ ಅಧಿಕಾರಿ ಪುರುಷೋತ್ತಮ ಮಾತನಾಡಿ ಸಾಮಾಜಿಕ ಅರಣ್ಯ ತಾಲ್ಲೂಕಿನಲ್ಲಿ ರೈತರಿಗೆ ಸಸಿಗಳನ್ನು ನೆಡಲು ವಿಶೇಷ ಸಹಕಾರವನ್ನು ನೀಡಿ ಜಿಲ್ಲೆಯ ಹಲವು ತಾಲ್ಲೂಕುಗಳಲ್ಲಿ ಗಂಧ ಬೆಳೆಗಾರರಿಗೆ ಉತ್ತೇಜ ನೀಡಲಾಗುತ್ತಿದೆ. ಹಲವು ರೈತರುಗಳು ಈಗಾಗಲ ಮುಂದೆ ಬರುತ್ತಿದ್ದಾರೆ.
ಪ್ರಗತಿ ಪರ ಕೃಷಿಕರಾದ ಆಶ್ರಫ್ ಮಾತನಾಡಿ ಮೊದಲು ಮುಸುಕಿನ ಜೋಳ ಬೆಳೆಯುತ್ತಿದ್ದೆವು ಅಂಥ ಲಾಭದಾಯಕ ಅನಿಸುಲಿಲ್ಲ ಸಾಮಾಜಿಕ ಅರಣ್ಯ ಇಲಾಖೆಯವರು ಅರಣ್ಯ ಕೃಷಿಯ ಬಗ್ಗೆ ಮಾಹಿತಿ ನೀಡಿದರು. ತಮ್ಮ 40 ಎಕರೆ ಪ್ರದೇಶದಲ್ಲಿ ಶ್ರೀಗಂಧ, ಮಹಾಘನಿ, ಅರಣ್ಯ ಸಸಿಗಳನ್ನು ಅಂತರ ಬೆಳೆಯಾಗಿ ಹಾಗು ಬದುಗಳಲ್ಲಿ ಇನ್ನಿತರ ಪ್ರದೇಶಗಳಲ್ಲಿ ಕಳೆದ ಒಂದು ವಷ೯ದಿಂದ ಮಾಡಿದ್ದೇನೆ. ಉತ್ತಮವಾಗಿ ಬಂದಿದೆ. ಅರಣ್ಯ ಕೃಷಿ ಮಾಡುವುದರಿಂದ ಖಚು೯ ಕಡಿಮೆ ಅದಾಯ ಜಾಸ್ತಿ ಎಂದು ತಿಳಿಸಿದರು.