ಶಿವಮೊಗ್ಗ: ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಕುಂಸಿ ಗ್ರಾಮದಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕು ಪತ್ರಗಳನ್ನು ಕೊಡಿಸುವ ವಿಚಾರ ಕುರಿತು ಹಾಗು ಕಾಂಗ್ರೇಸ್ ಪಕ್ಷದ ರಾಜ್ಯದ ನಾಯಕರೊಂದಿಗೆ ಪಾದಯಾತ್ರೆ ಹಾಗೂ ಸಂತ್ರಸ್ತರ ಧ್ವನಿಯಾಗಿ ಹೋರಾಟ ಮಾಡುವ ಪೂರ್ವಭಾವಿ ಸಭೆ ಇಂದು ನಡೆಸಲಾಯಿತು

ಸಭೆಯಲ್ಲಿ KPCC, OBC ಘಟಕದ ಕಾರ್ಯಾಧ್ಯಕ್ಷರಾದ ಮಧು ಬಂಗಾರಪ್ಪನವರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಸುಂದರೇಶ್ ರವರು ಮಾಜಿ ಎಂ.ಎಲ್.ಸಿ ಪ್ರಸನ್ನ ಕುಮಾರ್ ರವರು, ಕಲಗೋಡು ರತ್ನಾಕರ್ ಅವರು, ಬ್ಲಾಕ್ ಅಧ್ಯಕ್ಷರಾದ ನಾಗರಾಜ್ ಅವರು, ಮಾಜಿ ಅಧ್ಯಕ್ಷರಾದ ತೀನ ಶ್ರೀನಿವಾಸ್ ಹಾಗೂ ಮುಖಂಡರು ಕಾರ್ಯಕರ್ತರು ಹಾಜರಿದ್ದರು.