ಐ.ಸಿ.ಎ.ಆರ್. ಕೃಷಿ ವಿಜ್ಞಾನ ಕೇಂದ್ರ ಶಿವಮೊಗ್ಗದ ವತಿಯಿಂದ ಕೃಷಿಯತ್ತ ಯುವಜನರನ್ನು ಆಕರ್ಷಿಸುವ ಹಾಗೂ ಉಳಿಸಿಕೊಳ್ಳುವ ಯೋಜನೆಯಡಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಲ್ಲಿ ಮೌಲ್ಯವರ್ಧನೆ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ದಿನಾಂಕ 28.02.2023 ರಿಂದ 02.03.2023 ರವರೆಗೂ ಹಮ್ಮಿಕೊಳ್ಳಲಾಗಿತ್ತು.
ಈ ಮೂರು ದಿನದ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಡಾ. ಜ್ಯೋತಿ ಎಂ. ರಾಠೋಡ್, ವಿಜ್ಞಾನಿ (ಗೃಹ ವಿಜ್ಞಾನ), ಕೆ.ವಿ.ಕೆ., ಶಿವಮೊಗ್ಗ ರವರು ಮಾತಾನಾಡಿ ಸ್ವಚ್ಛತೆ ಮತ್ತು ಆರೋಗ್ಯದ ಮಹತ್ವ, ಸಿರಿಧಾನ್ಯಗಳು ಮತ್ತು ಹಣ್ಣುಗಳ ಆರೋಗ್ಯ ಪ್ರಯೋಜನಗಳು ಮತ್ತು ವಿವಿಧ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಲ್ಲಿ ಮೌಲ್ಯವರ್ಧನೆ ಬಗ್ಗೆ ಮಾಹಿತಿ ನೀಡಿ ವಿವಿಧ ಬೆಳೆಯ ಉತ್ಪನ್ನಗಳಾದ ರಾಗಿ ನಿಪ್ಪಟ್ಟು, ಶೇವ್, ಉಂಡೆ ಹಾಗೂ ವಿವಿಧ ಹಣ್ಣುಗಳ ಜಾಮ್, ಲೆದರ್ ಮತ್ತು ಸ್ಕ್ವಾಷ್ ತಯಾರಿಕೆಯನ್ನು ಪ್ರಾತ್ಯಕ್ಷಿಕೆಯ ಮೂಲಕ ಹೇಳಿಕೊಟ್ಟರು.
ಡಾ. ಬಿ. ಸಿ. ಹನುಮಂತಸ್ವಾಮಿ, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಕೆ.ವಿ.ಕೆ., ಶಿವಮೊಗ್ಗ ರವರು ಆರ್ಯ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಡಾ. ಭರತ್ ಕುಮಾರ್, ಎಂ. ವಿ. ವಿಜ್ಞಾನಿ (ತೋಟಗಾರಿಕೆ) ರವರು ತೋಟಗಾರಿಕಾ ಬೆಳೆಗಳ ಕೊಯ್ಲುತ್ತರ ತಾಂತ್ರಿಕತೆ ಮತ್ತು ಸಂಸ್ಕರಣೆ ಬಗ್ಗೆ ಹಾಗೂ ಡಾ. ಪೂಜಾ, ಜಿ. ಕೆ., ಹಿರಿಯ ಸಹಾಯಕ ಸಂಶೋಧಕರು (ಆರ್ಯ ಯೋಜನೆ) ರವರು ವಿವಿಧ ಹಣ್ಣು ಬೆಳೆಗಳ ಸಂಸ್ಕರಣೆ ಮತ್ತು ಶೇಖರಣೆ ಬಗ್ಗೆ ಮಾಹಿತಿ ನೀಡಿದರು.
ಮುಂದುವರೆದು, ಶಿವಮೊಗ್ಗ ಜಿಲ್ಲೆಯ ಒಂದು ಜಿಲ್ಲೆ ಒಂದು ಉತ್ಪನ್ನದ ಸಂಪನ್ಮೂಲ ವ್ಯಕ್ತಿಯಾದ ಡಾ. ಲಕ್ಷ್ಮೀನಾರಾಯಣ ರವರು, ವಾಣಿಜ್ಯೋದ್ಯಮಿಗಳಾದ ಡಾ. ರೋಹಿಣಿ, ಶ್ರೀಮತಿ ಲೀಲಾವತಿ ಹಾಗೂ ಶ್ರೀ ನಾಗಲಿಂಗರವರು ತಮ್ಮ ಅನುಭವವನ್ನು ಹಂಚಿಕೊಂಡರು. ಕಾರ್ಯಕ್ರಮದ ಕೊನೆಯಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಣೆ ಮಾಡಲಾಯಿತು. ಶಿವಮೊಗ್ಗ ಜಿಲ್ಲೆಯ ಒಟ್ಟು 16 ಗ್ರಾಮೀಣ ಯುವಕರು ಮತ್ತು ಯುವತಿಯರು ತರಬೇತಿಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡರು.