“ಬೇಕರಿ ಉತ್ಪನ್ನಗಳ”ಕುರಿತು ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ಮಹಾವಿದ್ಯಾಲಯ ಶಿವಮೊಗ್ಗ ಆವರಣದ, ಬೇಕರಿ ಘಟಕದಲ್ಲಿ “ವಿವಿಧ ಬಗೆಯ ಕೇಕ್ ತಯಾರಿಕೆಯ” ಬಗ್ಗೆ ದಿನಾಂಕ: 19.12.2022 ರಿಂದ 21.12.2022 ರವರೆಗೆ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ತರಬೇತಿಯಲ್ಲಿ ಭಾಗವಹಿಸಲಿಚ್ಛಿಸುವವರು, ತರಬೇತಿ ಶುಲ್ಕ ಪ್ರತಿ ದಿನ ರೂ.120/- ರಂತೆ 3 ದಿನಗಳಿಗೆ ಒಟ್ಟು ರೂ. 360/- ಗಳನ್ನು ಪಾವತಿಸಿ, ದಿನಾಂಕ 18.12.2022ರೊಳಗೆ ದೂರವಾಣಿ ಮೂಲಕ ಅಥವಾ ಖುದ್ದಾಗಿ ಈ ಕೆಳಕಂಡ ವಿಳಾಸಕ್ಕೆ ಸಂಪರ್ಕಿಸಿ ಹೆಸರು ನೊಂದಾಯಿಸಬಹುದಾಗಿದೆ.
ಸೂಚನೆ:

  1. ಮೊದಲು ನೊಂದಾಯಿಸಿದ 12 ಜನರಿಗೆ ಮಾತ್ರ ಅವಕಾಶವಿರುತ್ತದೆ.
  2. ತರಬೇತಿಗೆ ಬರುವಾಗ ಕಡ್ಡಾಯವಾಗಿ ನಿಮ್ಮ ಆಧಾರ್‍ಕಾರ್ಡ್‍ನ್ನು ತರಬೇಕು.
  3. ಶಿವಮೊಗ್ಗ ಜಿಲ್ಲೆಯವರಿಗೆ ಮಾತ್ರ ಅವಕಾಶ.
  4. ಕಡ್ಡಾಯವಾಗಿ ಮಾಸ್ಕ ಧರಿಸಬೇಕು
    ಸಂಪರ್ಕಿಸುವ ವಿಳಾಸ:
    ಡಾ. ಶಿವಲೀಲಾ ಪಾಟೀಲ.
    ಕೃಷಿ ಮಹಾವಿದ್ಯಾಲಯ, ನವಿಲೆ, ಶಿವಮೊಗ್ಗ
    ಮೊಬೈಲ್ :7411680410
error: Content is protected !!