ಶಿವಮೊಗ್ಗ, ನ.29 : ವಿಧಾನ ಪರಿಷತ್ ಸದಸ್ಯರ ಒಂದು ಸ್ಥಾನಕ್ಕೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ನಡೆಯಲಿರುವ ಚುನಾವಣೆಯಲ್ಲಿ 4180ಮಂದಿ ಮತದಾನದ ಹಕ್ಕು ಹೊಂದಿದ್ದಾರೆ.
ಕ್ಷೇತ್ರದಲ್ಲಿ 2175 ಪುರುಷ ಹಾಗೂ 2005 ಮಹಿಳಾ ಮತದಾರರು ಇದ್ದಾರೆ. ಸೊರಬ ತಾಲೂಕಿನಲ್ಲಿ 295 ಪುರುಷರು 24 ಮಹಿಳೆಯರು ಸೇರಿದಂತೆ 319 ಮಂದಿ, ಶಿಕಾರಿಪುರ ತಾಲೂಕಿನಲ್ಲಿ 259 ಪುರುಷರು 243 ಮಹಿಳೆಯರು ಸೇರಿ 502 ಮಂದಿ, ಹೊನ್ನಾಳಿ ತಾಲೂಕಿನಲ್ಲಿ 169 ಪುರುಷರು ಮತ್ತು 175 ಮಹಿಳೆಯರು ಸೇರಿ 344ಮಂದಿ, ನ್ಯಾಮತಿ ತಾಲೂಕಿನಲ್ಲಿ 103 ಪುರುಷರು 87 ಮಹಿಳೆಯರು ಸೇರಿ 190 ಮಂದಿ, ಚನ್ನಗಿರಿ ತಾಲೂಕಿನಲ್ಲಿ 365 ಪುರುಷರು ಮತ್ತು 396 ಮಹಿಳೆಯರು ಸೇರಿ 761 ಮಂದಿ, ಭದ್ರಾವತಿಯಲ್ಲಿ 225 ಪುರುಷರು ಮತ್ತು 254 ಮಹಿಳೆಯರು ಸೇರಿ 479ಮಂದಿ, ಶಿವಮೊಗ್ಗದಲ್ಲಿ 237 ಪುರುಷರು ಮತ್ತು 265 ಮಹಿಳೆಯರು ಸೇರಿ 502, ಸಾಗರದಲ್ಲಿ 204 ಪುರುಷರು ಮತ್ತು 215 ಮಹಿಳೆಯರು ಸೇರಿ 419 ಮಂದಿ, ಹೊಸನಗರದಲ್ಲಿ 148 ಪುರುಷರು ಮತ್ತು 163 ಮಹಿಳೆಯರು ಸೇರಿ 311ಮಂದಿ, ತೀರ್ಥಹಳ್ಳಿಯಲ್ಲಿ 170 ಪುರುಷರು ಮತ್ತು 183 ಮಹಿಳೆಯರು ಸೇರಿ 353 ಮತದಾರರು ಇದ್ದಾರೆ.
ಒಟ್ಟು 365 ಮತಗಟ್ಟೆಗಳಿವೆ. ಸೊರಬ 28, ಶಿಕಾರಿಪುರ 43, ಹೊನ್ನಾಳಿ 29, ನ್ಯಾಮತಿ 17, ಚನ್ನಗಿರಿ 62, ಭದ್ರಾವತಿ 38, ಶಿವಮೊಗ್ಗ 41, ಸಾಗರ 37, ಹೊಸನಗರ 31 ಮತ್ತು ತೀರ್ಥಹಳ್ಳಿಯಲ್ಲಿ 39 ಮತಗಟ್ಟೆಗಳಿವೆ. ಮಾದರಿ ನೀತಿ ಸಂಹಿತೆ ಅನುಷ್ಟಾನಕ್ಕಾಗಿ 33 ನೋಡಲ್ ಅಧಿಕಾರಿಗಳು, ಚುನಾವಣಾ ಪ್ರಕ್ರಿಯೆಗಳ ಮೇಲುಸ್ತವಾರಿಗಾಗಿ 28 ನೋಡಲ್ ಅಧಿಕಾರಿಗಳು, 34 ಫ್ಲೈಯಿಂಗ್ ಸ್ಕ್ವಾಡ್‍ಗಳನ್ನು ರಚಿಸಲಾಗಿದೆ. ಸುಗಮ ಮತದಾನಕ್ಕಾಗಿ 365 ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿಗಳ ತಂಡ ರಚಿಸಲಾಗಿದೆ. 65 ತಂಡಗಳನ್ನು ಕಾಯ್ದಿರಿಸಲಾಗಿದ್ದು, ಒಟ್ಟು 430 ಮತಗಟ್ಟೆ ಅಧಿಕಾರಿ ತಂಡಗಳಿವೆ.
ಚುನಾವಣೆಯಲ್ಲಿ ಸ್ಪರ್ಧಿಸಲು ಜಿಲ್ಲೆಯಲ್ಲಿ 04 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಆರ್. ಪ್ರಸನ್ನ ಕುಮಾರ್ (ಕಾಂಗ್ರೆಸ್), ಡಿ.ಎಸ್.ಅರುಣ್ (ಬಿ.ಜೆ.ಪಿ), ಶಶಿಕುಮಾರ್ ಬಿ.ಕೆ (ಜೆಡಿಯು) ಮತ್ತು ರವಿ ಪಿ.ವೈ (ಪಕ್ಷೇತರ). ಕಣದಲ್ಲಿದ್ದಾರೆ.