
ಕೇಂದ್ರ ಸರ್ಕಾರ ರಾಜ್ಯದ 8 ನಗರಗಳನ್ನು ಸ್ಮಾರ್ಟ್ ಸಿಟಿ ಯೋಜನೆಗೆ ಗುರುತಿಸಿದ್ದು, ಅದರಲ್ಲಿ ಶಿವಮೊಗ್ಗ ಜಿಲ್ಲೆಯೂ ಒಂದು. ಶಿವಮೊಗ್ಗ ನಗರದ ಮೂಲಭೂತ ಸೌಕರ್ಯಗಳ ಬಗ್ಗೆ ಈ ಯೋಜನೆ ಅತ್ಯಂತ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದ್ದು, ತುಂಗಾನದಿಗೆ ಪ್ರವಾಹ ರಕ್ಷಣಾ ಗೋಡೆ ನಿರ್ಮಿಸಿ ಅದನ್ನು ಮಾದರಿಯಾದ ಪ್ರವಾಸಿ ತಾಣವನ್ನಾಗಿ ಮಾರ್ಪಡಿಸಿದ್ದು, ಕಾಮಗಾರಿಗಳು ಮುಗಿದಿದ್ದು ಶೀಘ್ರ ಲೋಕಾರ್ಪಣೆಗೊಳ್ಳಲಿದೆ.

ಕರ್ನಾಟಕದ ಪ್ರಮುಖ ನದಿಗಳಲ್ಲಿ ತುಂಗಾ ನದಿಯು ಒಂದು “ ಗಂಗಾ ಸ್ನಾನ ತುಂಗಾ ಪಾನ” ಎನ್ನುವ ನಾಣ್ಣುಡಿಯೇ ಇದೆ. ಈ ಪ್ರಮುಖ ನದಿಯ ಉತ್ತರ ದಂಡೆಯಲ್ಲಿ ಅಪರೂಪದ ಪ್ರವಾಸಿ ತಾಣ ನಿರ್ಮಾಣವಾಗಿ ಮೇಳೈಸುತ್ತಿದೆ. ಕೇಂದ್ರ ಸರ್ಕಾರ 103.22 ಕೋಟಿ ವೆಚ್ಚದಲ್ಲಿ ಯೋಜನೆ ಕಾರ್ಯಗತಗೊಳಿಸಿ ಶಿವಮೊಗ್ಗ ನಗರದ ಮೂಲಭೂತ ಸೌಂದರ್ಯದ ಶ್ರೀಮಂತಿಕೆಯನ್ನು ಹೆಚ್ಚಿಸಿ ಒಂದು ಸುಂದರ ಪ್ರವಾಸಿ ತಾಣವನ್ನಾಗಿ ತುಂಗಾ ನದಿಯ ದಂಡೆಯನ್ನು ಪರಿವರ್ತಿಸಿದೆ.ಈ ದಂಡೆಯ ಮೇಲೆ ಪಾದಚಾರಿಗಳಿಗೆ ಮಾರ್ಗ, ಸೈಕಲ್ ಪಥ, ಸಾಹಸಿಗಳು ಹತ್ತುವ ಗೋಡೆ, ಬಯಲು ರಂಗಮAದಿರ, ಮಾಹಿತಿ ಕೇಂದ್ರ, ವೀಕ್ಷಣಾ ಗೋಪುರ, 125 ಅಲಂಕಾರಿಕ ಕಲ್ಲಿನ ಕಂಬಗಳು, ಹಸಿರು ಉದ್ಯಾನ, ಹಸಿರು ನೆಲಹಾಸು, ಹಾಗೆಯೇ ನೋಡುಗರನ್ನು ಕಣ್ಮನ ಸೆಳೆಯುವ ಸಂವಹನ ಕಾರಂಜಿ, ಆಕರ್ಷಣೀಯ ಚಿತ್ರ ಮಾಲಿಕೆಗಳು, ವಾಯುವಿಹಾರ, ಬೋಟಿಂಗ್ ವ್ಯವಸ್ಥೆ ಎಲ್ಲವನ್ನು ಇದು ಒಳಗೊಂಡಿದೆ.

ಕೇ0ದ್ರ ಸರ್ಕಾರ ಇಲ್ಲಿ ನಿರ್ಮಿಸುತ್ತಿರುವ ಆಹಾರ ಮಳಿಗೆ ಮತ್ತು ದೇಶೀಯ ವಸ್ತುಗಳ ಮಾರಾಟದ ಅಂಗಡಿಗಳು ಪ್ರಾದೇಶಿಕ ಮಹತ್ವವನ್ನು ಪರಿಚಯಿಸಲಿದೆ. ಬಹಳ ಮುಖ್ಯವಾಗಿ ನದಿಗೆ ಸೇರುತ್ತಿದ್ದ ಊರಿನ ಕಲ್ಮಶಗಳ ದಿಕ್ಕು ಬದಲಿಸಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಅದನ್ನು ತಲುಪಿಸಿವ ಮತ್ತು ಗೊಬ್ಬರವನ್ನಾಗಿಸುವ ಕೆಲಸಕ್ಕೆ ಸ್ಮಾರ್ಟ್ ಸಿಟಿ ಯೋಜನೆ ಹೆಚ್ಚಿನ ಸಹಕಾರ ನೀಡುತ್ತಿದೆ.
ಎಸ್. ರಂಗನಾಥ ನಾಯಕ, ಮುಖ್ಯ ಅಭಿಯಂತರರು, ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿಮಿಟೆಡ್, ಶಿವಮೊಗ್ಗ
ಶಿವಮೊಗ್ಗವನ್ನು ಒಂದು ಪ್ರವಾಸಿ ತಾಣದಂತೆ ಆಕರ್ಷಣೀಯ ತಾಣವಾಗಿ ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಸ್ಮಾರ್ಟ್ ಸಿಟಿ ಲಿಮಿಟೆಡ್ ತುಂಗಾ ನದಿಯ ಉತ್ತರ ದಂಡೆಯನ್ನು ಅತ್ಯಂತ ವ್ಯವಸ್ಥಿತವಾಗಿ ಬಳಸಿಕೊಂಡು ಇದೊಂದು ಪ್ರವಾಸಿ ತಾಣವನ್ನಾಗಿ ಬದಲಿಸಿದೆ. ಊರಿನ ತ್ಯಾಜ್ಯವನ್ನು ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಳುಹಿಸುವಲ್ಲಿ ವಿಶೇಷ ಪೈಪ್‌ಲೈನ್ ವ್ಯವಸ್ಥೆಯನ್ನು ಮಾಡಿದೆ. ಸುಮಾರು 15 ಎಕರೆ ಪ್ರದೇಶ ವಿಸ್ತೀರ್ಣವನ್ನು 103 ಕೋಟಿ ವೆಚ್ಚದಲ್ಲಿ ಆಕರ್ಷಣೀಯವಾಗಿ ರೂಪಿಸಿ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಅನುದಾನ ನೀಡಿ ಸಹಕರಿಸಿದೆ.
ಸುನೀತಾ ಅಣ್ಣಪ್ಪ, ಕಾರ್ಪೋರೇಟರ್, ಶಿವಮೊಗ್ಗ
ಶಿವಮೊಗ್ಗ ನಗರದ ಕುಡಿಯುವ ನೀರಿನ ಸೆಲೆ ಮತ್ತು ಜೀವ ವಾಹಿನಿ ತುಂಗನದಿ. ಇದು ತ್ಯಾಜ್ಯಗಳ ಮೂಲಕ ಕಲುಶಿತಗೊಳ್ಳುವ ಸಮಸ್ಯೆ ಎದುರಿಸುತ್ತಿತ್ತು, ಸ್ಮಾರ್ಟ್ ಸಿಟಿ ಯೋಜನೆಯಡಿ ನಗರ ಪಾಲಿಕೆಯ ಸಹಕಾರದೊಂದಿಗೆ ಕೇಂದ್ರ ಸರ್ಕಾರ 100 ಕೋಟಿ ವೆಚ್ಚ ಮಾಡಿ ತುಂಗಾ ನದಿಯ ದಂಡೆಯನ್ನೇ ಬಳಸಿ ಇಡೀ ರಾಜ್ಯದ ಗಮನ ಸೆಳೆಯುವ ಪ್ರವಾಸಿ ತಾಣವಾಗಿ ರೂಪಿಸಿದೆ.
ಸಂಗೀತಾ, , ಶಿವಮೊಗ್ಗ ಮಾತನಾಡಿ ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆ ಅತ್ಯಂತ ಉಪಯುಕ್ತವಾಗಿದ್ದು, ತುಂಗಾನದಿ ಉತ್ತರ ದಂಡೆಯನ್ನು ಪ್ರವಾಸಿ ತಾಣವನ್ನಾಗಿ ರೂಪಿಸಿ ರಾಜ್ಯದ ಜನರ ಗಮನ ಸೆಳೆಯುತ್ತಿರುವುದಲ್ಲದೇ ವಿದ್ಯಾವಂತ ನಿರುದ್ಯೋಗಿಗಳಿಗೆ ಈ ಯೋಜನೆಯಲ್ಲಿ ಉದ್ಯೋಗವಾಕಾಶವು ದೊರೆಯುತ್ತದೆ, ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತದೆ.
ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆ ಅತ್ಯಂತ ಉಪಯುಕ್ತವಾಗಿದ್ದು, ತುಂಗಾನದಿ ಉತ್ತರ ದಂಡೆಯನ್ನು ಪ್ರವಾಸಿ ತಾಣವನ್ನಾಗಿ ರೂಪಿಸಿ ರಾಜ್ಯದ ಜನರ ಗಮನ ಸೆಳೆಯುತ್ತಿರುವುದಲ್ಲದೇ ವಿದ್ಯಾವಂತ ನಿರುದ್ಯೋಗಿಗಳಿಗೆ ಈ ಯೋಜನೆಯಲ್ಲಿ ಉದ್ಯೋಗವಾಕಾಶವು ದೊರೆಯುತ್ತದೆ, ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತದೆ.