ಲಿಂಬೆ ಎಲೆ ಮತ್ತು ಕಾಯಿಗಳಲ್ಲಿ ಕಜ್ಜಿರೋಗ ಹಾಗೂ ತುದಿ ಭಾಗದ ಎಲೆಗಳು ಸುರಳಿಪೂಚಿ ಕೀಟದ ಹಾವಳಿಯಿಂದ ಮುದುಡುತ್ತಿವೆ. ಎಲೆಗಳಲ್ಲಿ ಕಂದು ಬಣ್ಣದ ಚುಕ್ಕೆಗಳು ಕಂಡು ಬಂದು ನಂತರ ಕಾಯಿ, ಟೊಂಗೆಗಳಿಗೆ ಹರಡುತ್ತವೆ.ಎಲೆ ಒಣಗಿ ಉದುರುತ್ತವೆ ನಂತರ ಹಣ್ಣು ಕೊಳೆಯುವಿಕೆ ಕಂಡು ಬಂದಿದೆ.
ಹತೋಟಿ :-
ಚಾಟನಿ ನಂತರ 3 ಗ್ರಾಂ. ಕಾಪರ್ ಆಕ್ಸಿ ಕ್ಲೋರೈಡ್ ಹಾಗೂ 0.5 ಗ್ರಾಂ. ಸ್ಟೆಪೊಮೈಸಿನ್ ಸಲ್ಫೇಟ್ ನೀರಿಗೆ ಬೆರೆಸಿ ಸಿಂಪಡಿಸುವುದು.
ಜೈವಿಕ ದುಂಡಾಣುನಾಶಕ ಸೋಡೋಮೊನಾಸ್ 8 ಗ್ರಾಂ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದು.
ಎಲೆ ಸುರುಳಿಪೂಚಿ, ಥ್ರಿಪ್ಸ್ ನುಶಿ, ಬಿಳಿನೊಣ ಕಂಡು ಬಂದಲ್ಲಿ ಬೇವಿನ ಎಣ್ಣೆ 2 ಮಿಲಿ ಅಥವಾ ಥಯೋಮಿತಾಕ್ಸಾಂ 0.5 ಗ್ರಾಂ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಎಕರೆಗೆ 8-10 ಹಳದಿ ಅಂಟು ಬಲೆ ಹಾಕುವುದರಿಂದ ರೋಗ ಪ್ರಸಾರಿಸುವ ಕೀಟಗಳನ್ನು ತಡೆಗಟ್ಟಬಹುದು.
ಪ್ರತಿ ವಾರ ಆಗುತ್ತಿರುವ ಹವಾಮಾನ ಬದಲಾವಣೆ, ವಾತಾವರಣದ ಹಾಗೂ ಭೂಮಿಯ ತೇವಾಂಶ ರೋಗದ ತೀವ್ರತೆ ಮೇಲೆ ಪರಿಣಾಮ ಬೀರುತ್ತಿದೆ ಬೇಸಿಗೆಯಲ್ಲಿ ಹೆಚ್ಚಿನ ಬೇಡಿಕೆ ಇರುವುದರಿಂದ ಈಗಾಗಲೇ ಸಮಗ್ರ ಬೆಳೆ ಹಾಗೂ ನೀರು, ಪೋಷಕ್ರಾಂಶ ನಿರ್ವಹಣೆ ಮಾಡಲು ರೈತರಿಗೆ ಕೃಷಿ ಮಾಹಿತಿ ನೀqಲಾಯಿತು.
ಮಾಹಿತಿ : *ಜಹೀರ್ ಅಹಮ್ಮದ್, ಸಸ್ಯರೋಗ ತಜ್ಞರು,