“ವೈದ್ಯರ ಸೇವೆ ಅನನ್ಯ”

  • ಡಾ|| ರಜನಿ ಪೈ.

ಪ್ರಸ್ತುತ ಸಮಾಜದಲ್ಲಿ ವೈದ್ಯರ ಸೇವೆ ಅತಿಶ್ರೇಷ್ಟವಾಗಿದ್ದು, ಅವರ ಸೇವೆಯನ್ನು ಸ್ಮರಿಸುವುದು ಅತಿಮುಖ್ಯವಾಗಿದೆ. ಇಂದು ಸಮಾಜದಲ್ಲಿ ಹಣಕ್ಕೋಸ್ಕರ ಸೇವೆ ಸಲ್ಲಿಸುವವರ ಸಂಖ್ಯೆ ಅಧಿಕವಾಗಿದ್ದು, ನಿಸ್ವಾರ್ಥ ಸೇವಾ ಮನೋಭಾವ ಕಡಿಮೆಯಾಗುತ್ತಿದ್ದೆ. ಇಂತಹ ಸಂದರ್ಭದಲ್ಲಿ ನಮ್ಮ ಕಣ್ಮುಂದೆ ಹಲವು ವೈದ್ಯರು ತಮ್ಮನ್ನು ತಾವು ತೊಡಗಿಸಿಕೊಂಡು ಜನಹಿತಕ್ಕಾಗಿ ವೈದ್ಯಕೀಯ ವೃತ್ತಿಯನ್ನು ನಡೆಸುತ್ತಿದ್ದಾರೆ. ಇಂತಹವರ ಅಮೂಲ್ಯ ಸೇವೆಯನ್ನು ಪರಿಗಣಿಸಿ ಸನ್ಮಾನಿಸುವುದು ನಮ್ಮೆಲ್ಲರಿಗೂ ಹೆಮ್ಮೆಯ ಎನ್ನಿಸುತ್ತದೆ ಎಂದು ಮಾನಸ ಫೌಂಡೇಷನ್‍ನ ಖ್ಯಾತ ವೈದ್ಯರಾದ ಡಾ|| ರಜನಿ ಪೈ ನುಡಿದರು.
ಅವರು ರೋಟರಿ ಶಿವಮೊಗ್ಗ ಪೂರ್ವ, ರಾಜೇಂದ್ರ ನಗರದಲ್ಲಿ ನಿನ್ನೆ ರಾತ್ರಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ವೈದ್ಯರ ದಿನಾಚರಣೆ, ನಿಸ್ವಾರ್ಥ ಸೇವೆ ಸಲ್ಲಿಸಿದ ವೈದ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಇಂದು ಸಮಾಜದಲ್ಲಿ ವೈದ್ಯರು ತಮ್ಮ ಪರಿಶ್ರಮವನ್ನು ಹಾಕಿ ರೋಗಿಗಳ ಪ್ರಾಣವನ್ನು ಉಳಿಸುವಲ್ಲಿ ಶ್ರಮಿಸುತ್ತಿದ್ದಾರೆ. ಕೆಲವು ತುರ್ತು ಸಂದರ್ಭಗಳಲ್ಲಿ ವೈದ್ಯರ ಕೈಮೀರಿ ಕೆಲವು ಅನಾಹುತಗಳು ಸಂಭವಿಸಬಹುದು. ಅದಕ್ಕೆ ವೈದ್ಯರು ಹೊಣೆಗಾರರಾಗಿರುವುದಿಲ್ಲ. ಅಂತಹ ಸಂದರ್ಭದಲ್ಲಿ ಸಂಬಂಧಪಟ್ಟವರು ನಿಜವಾದ ವಿಷಯವನ್ನರಿತು ಸ್ಪಂದಿಸುವುದು ಅತಿಮುಖ್ಯ ಎಂದು ನುಡಿದರು. ಇದೇ ಸಂದರ್ಭದಲ್ಲಿ ಡಾ|| ರಘುನಂದನ್, ಡಾ|| ಹರ್ಷ, ಡಾ|| ಪರಮೇಶ್ವರ್ ಶಿಗ್ಗಾಂವ್, ಡಾ|| ಗುಡದಪ್ಪ ಕಸಬಿ, ಡಾ|| ಎಸ್.ಟಿ.ಅರವಿಂದ್, ಡಾ|| ಸುಧೀಂದ್ರ, ಡಾ|| ರವಿಕಿರಣ್, ಡಾ|| ಸ್ವಾತಿ ಹಾಗೂ ಡಾ|| ರಜನಿ ಪೈರವರುಗಳನ್ನು ಸಂಸ್ಥೆಯ ಅಧ್ಯಕ್ಷರಾದ ಎಂ.ಪಿ.ನಾಗರಾಜ್‍ರವರು ಆತ್ಮೀಯವಾಗಿ ಸ್ವಾಗತಿಸಿದರು. ಇದೇ ಸಂದರ್ಬದಲ್ಲಿ ವಲಯ-11ರ ಅಸಿಸ್ಟೆಂಟ್ ಗವರ್ನರ್ ಜಿ.ವಿಜಯಕುಮಾರ್‍ರವರು ಮಾತನಾಡುತ್ತಾ ವೈದ್ಯರು ನಮ್ಮ ಹಾಗೆ ಮನುಷ್ಯರು. ತಾವು ಕಲಿತ ವಿದ್ಯೆಯಿಂದ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಲು ಪ್ರಾಮಾಣಿಕ ಪ್ರಯತ್ನದಲ್ಲಿ ತೊಡಗುವುದು ಗಮನಾರ್ಹ. ಆದ್ದರಿಂದ ವೈದ್ಯರ ಸೇವೆ ಎಂದೆಂದೂ ಅವಿಸ್ಮರಣೀಯ ಎಂದು ನುಡಿದರು.

ವೇದಿಕೆಯಲ್ಲಿ ಕಾರ್ಯದರ್ಶಿ ಮಂಜುನಾಥ್ ರಾವ್ ಕದಂ, ಮಾಜಿ ಜಿಲ್ಲಾ ಗವರ್ನರ್ ಹೆಚ್.ಎಲ್.ರವಿ, ಇನ್ನರ್ ವ್ಹೀಲ್ ಅಧ್ಯಕ್ಷರಾದ ವೇದಾನಾಗರಾಜ್, ಕಾರ್ಯದರ್ಶಿ ಜ್ಯೋತಿ ಸುಬ್ಬೇಗೌಡ, ವಸಂತ್‍ಹೋಬ್ಳಿದಾರ್, ಎ.ಒ.ಮಹೇಶ್, ಹೆಚ್.ಎಂ.ಮಧು, ಹೆಚ್.ಬಿ. ಆದಿಮೂರ್ತಿ, ಪುರುಷೋತ್ತಮ್, ಪ್ರತಾಪ್, ಶ್ರೀಕಾಂತ್, ಬಸವರಾಜ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.

error: Content is protected !!