ಇತ್ತೀಚೆಗೆ ನಮಗೆಲ್ಲ ಕಾಡುತ್ತಿರುವ ಕೋವಿಡ್-19 ಸಮಸ್ಯೆಯಿಂದ ಹೊರಬರಲು ನಾವುಗಳು ಮೊದಲನೆಯದಾಗಿ ಆರೋಗ್ಯ ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಂಡು ಸಾಮಾಜಿಕ ಅಂತರÀವನ್ನು ಕಾಯ್ದುಕೊಳ್ಳುವುದು ಮುಖ್ಯವಾಗಿದೆ. ಹಾಗೆಯೇ ಮುಖಕ್ಕೆ ಮಾಸ್ಕ್ ಧರಿಸುವುದು, ಪದೇ ಪದೇ ಸಾಬೂನಿನಿಂದ ಕೈ ತೊಳೆಯುವುದು ಬಹಳ ಮುಖ್ಯ. ಆದಷ್ಟು ಮನೆಯಲ್ಲಿಯೇ ಇದ್ದು, ಸುರಕ್ಷಿತವಾಗಿ ಇರೋಣ ಎಂಬುದು ಎಲ್ಲರಲ್ಲಿ ಒಂದು ಮನವಿ. ನಾವೆಲ್ಲಾ ಭಾರತೀಯರು, ಒಂದಾಗಿ ಈ ಭಯಾನಕ ಸಾಂಕ್ರಾಮಿಕ ರೋಗ ನಿರ್ಮೂಲನೆ ಮಾಡಲು ಎಲ್ಲರೂ ಸಹಕರಿಸೋಣ.
ಕೆಲವು ಪೌಷ್ಠಿಕ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ನಮ್ಮಲ್ಲಿ ರೋಗ ನಿರೋಧಕ ಸಾಮಥ್ರ್ಯವನ್ನು ಹೆಚ್ಚಿಸಬಹುದಾಗಿದೆ. ಅವು ಯಾವುವೆಂದರೆ;
• ಸಿಟ್ರಸ್ ಅಂಶ ಇರುವ ಹಣ್ಣುಗಳನ್ನು ಸೇವಿಸುವುದರಿಂದ ಇದರಲ್ಲಿ ವಿಟಮಿನ್ ‘ಸಿ’ ರೋಗ ನಿರೋಧಕ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ.
• ಅಣಬೆಯ ಸೇವನೆಯಿಂದ ಇದರಲ್ಲಿರುವ ಪೋಷಕಾಂಶಗಳು ಸೋಂಕಾಣು ಮತ್ತು ಬ್ಯಾಕ್ಟೀರಿಯಾದ ವಿರುದ್ದ ಹೋರಾಡಲು ಸಹಾಯ ಮಾಡುತ್ತದೆ.
• ಬೆಳ್ಳುಳ್ಳಿಯನ್ನು ಅಡುಗೆಯಲ್ಲಿ ಬಳಸುವುದರಿಂದ ದೇಹದಲ್ಲಿ ಪೋಷಕಾಂಶಗಳನ್ನು ದೊರೆಯುವಂತೆ ಸಹಾಯ ಮಾಡುತ್ತದೆ ಅಲ್ಲದೆ ಇದಕ್ಕೆ ಕ್ಯಾನ್ಸರ್ ವಿರುದ್ದ ಹೋರಾಡುವ ಆ್ಯಂಟಿ ಆಕ್ಸಿಡೆಂಟ್ ಇರುತ್ತದೆ.
• ಮೊಸರಲ್ಲಿ ಪ್ರೋಬಯೋಟಿಕ್ ಬ್ಯಾಕ್ಟೀರಿಯಾವು ಹೊಟ್ಟೆಯ ಆರೋಗ್ಯವನ್ನು ಹೆಚ್ಚಿಸಿ ಸೋಂಕು ತಗಲದಂತೆ ಕಾಪಾಡುತ್ತದೆ.
• ಅರಿಶಿಣದಲ್ಲಿ ಕುಕ್ರ್ಯುಮಿನ್ ಇರುವುದರಿಂದ ಇದರಲ್ಲಿ ಹೆಚ್ಚಿನ ಆ್ಯಂಟಿ ಆಕ್ಸಿಡೆಂಟ್ ಇರುತ್ತದೆ.
• ಕಾಳು ಮೆಣಸಿನಲ್ಲಿ ಪೆಪರಿನ್ ಇದ್ದು ಇದು ಕುಕ್ರ್ಯುಮಿನ್‍ನ್ನು ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ.
• ಶುಂಠಿಯು ಒಣ ಕೆಮ್ಮನ್ನು ತಡೆಯಲು ಮತ್ತು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ.
• ನಿಂಬೆ ಮತ್ತು ಸಿಟ್ರಸ್ ಹಣ್ಣುಗಳಲ್ಲಿ ವಿಟಮಿನ್ ‘ಸಿ’ ಸಮೃದ್ಧವಾಗಿದ್ದು ಇದು ಉತ್ಕರ್ಷಣಾ ನಿರೋಧಕ ಮತ್ತು ರೋಗ ನಿರೋಧಕ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ.
• ಬದಾಮಿಯಲ್ಲಿ ವಿಟಮಿನ್ ‘ಇ’ ಮತ್ತು ಆ್ಯಂಟಿ ಆಕ್ಸಿಡೆಂಟ್‍ಗಳು ಹೆಚ್ಚಿನ ಪ್ರಮಾಣದಲ್ಲಿರುತ್ತದೆ.
ಮನೆಯಲ್ಲಿಯೇ ಲಭ್ಯವಿರುವ ಆಹಾರ ಪದಾರ್ಥಗಳನ್ನು ಬಳಸಿ ಸುಲಭವಾಗಿ ವಿವಿಧ ಪಾನೀಯಗಳಾದ
• ಶುಂಠಿ, ಅರಿಶಿಣ ಮತ್ತು ಕ್ಯಾರೆಟ್ ಪಾನೀಯ.
• ಶುಂಠಿ ಚಹಾ / ಕಷಾಯ
• ಶುಂಠಿ, ನಿಂಬೆ ಮತ್ತು ಜೇನುತುಪ್ಪ ಕಾಕ್‍ಟೇಲ್
• ಕಾಳುಮೆಣಸು, ಜೀರಿಗೆ, ಧನಿಯಾ ಕಷಾಯ
• ಹೆಚ್ಚಿನ ಪ್ರಮಾಣದಲ್ಲಿ ಶುದ್ಧ ನೀರನ್ನೂ ಸಹ ಕುಡಿಯಬೇಕು
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಇತರೆ ಆಹಾರ ಪದಾರ್ಥಗಳು ಯಾವುವೆಂದರೆ ಮೊಸರು, ಕೋಳಿಮಾಂಸ, ದೊಣ್ಣೆ ಮೆಣಸಿನಕಾಯಿ, ಒಣಹಣ್ಣುಗಳಾದ ಬದಾಮಿ, ಗೋಡಂಬಿ, ಒಣದ್ರಾಕ್ಷಿ, ಪಿಸ್ತಾ, ಅಕ್ರೋಟ್, ಖರ್ಜೂರ, ಅಂಜೂರ, ವಾಲ್‍ನಟ್‍ಗಳು.
• ನಿಯಮಿತವಾಗಿ ವ್ಯಾಯಾಮ ಮತ್ತು ಧ್ಯಾನ ಮಾಡುವುದು
• 7-8 ತಾಸು ನಿದ್ರೆ ಮಾಡುವುದು
• ದೇಹದ ತೂಕವನ್ನು ಕಾಪಾಡಿಕೊಳ್ಳುವುದು
• ಮದ್ಯಪಾನ ಸೇವನೆ ಮಾಡದಿರುವುದು ಮತ್ತು
• ಧೂಮಪಾನ ಮಾಡದಿರುವುದು
ಈ ಮೇಲಿನ ಎಲ್ಲಾ ಸಲಹೆಗಳನ್ನು ತಪ್ಪದೇ ಅನುಸರಿಸಿ ಸದಾಕಾಲ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.
ಡಾ. ಜ್ಯೋತಿ ಎಂ. ರಾಠೋಡ್, ವಿಜ್ಞಾನಿ (ಗೃಹ ವಿಜ್ಞಾನ), ಕೆ.ವಿ.ಕೆ., ಶಿವಮೊಗ್ಗ ಮೊಬೈಲ್ ನಂ: 9353978995