ಪ್ರಸ್ತುತ ಕೃಷಿ ಕ್ಷೇತ್ರದತ್ತ ಮಹಿಳೆಯರ ಒಲವು ಹೆಚ್ಚಳ- ಪದ್ಮಶ್ರೀ ಡಾ.ವಿ ಪ್ರಕಾಶ್

ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ರೈತರ ನೆರವಿಗೆ ‘ಅಗ್ರಿ ವಾರ್ ರೂಂ’ ಮತ್ತು ಜಿಲ್ಲಾ ಸಮನ್ವಯ ಸಮಿತಿಗಳನ್ನು ಪ್ರಾರಂಭಿಸಿದೆ.
ಕೋವಿಡ್ ಸಂಕಟದಲ್ಲಿ ರೈತರಿಗೆ ತಾಂತ್ರಿಕ ಮಾಹಿತಿ, ಸಲಹೆ ಹಾಗೂ ಕ್ಷೇತ್ರ ಭೇಟಿ ಅಗತ್ಯಗಳಿಗೆ ಸ್ಪಂದಿಸಲು ಈ ವಾರ್ ರೂಂ ನೆರವಾಗಲಿದೆ ಹಾಗೂ ಸಂಪರ್ಕ ಮಾಹಿತಿ, ಮಾರಾಟ ವ್ಯವಸ್ಥೆಗೆ ಸಂಪರ್ಕ ಸೇತುವಾಗಿ ಕಾರ್ಯ ನಿರ್ವಹಿಸಲಿದ್ದು, ಶಿವಮೊಗ್ಗ ನವುಲೆ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪ್ರತಿದಿನ ಬೆಳಗ್ಗೆ 10 ರಿಂದ ಸಂಜೆ 4ರವರೆಗೆ ಕಾರ್ಯನಿರ್ವಹಿಸಲಿದೆ ಎಂದು ವಿ.ವಿ.ಯ ಕುಲಪತಿಗಳು ತಿಳಿಸಿದ್ದಾರೆ.
ಈ ಕೇಂದ್ರವು ರೈತರಲ್ಲಿ ಕೋವಿಡ್ 19ರ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಬೀಜ, ನರ್ಸರಿಗಳು ಲಭ್ಯವಿರುವ ಮಾಹಿತಿ ನೀಡಲಾಗುತ್ತಿದೆ. ಡಾ. ಎಂ. ಕೆ. ನಾಯಕ್, ಕುಲಪತಿಗಳು, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ ಇವರು ವಾರ್ ರೂಂ ಉದ್ಘಾಟನೆ ಮಾಡಿದರು. ಡಾ. ಹೆಚ್. ಆರ್. ಯೋಗೀಶ್, ಉಪನಿರ್ದೇಶಕರು, ತೋಟಗಾರಿಕೆ ಹಾಗೂ ವಿಶ್ವವಿದ್ಯಾಲಯದ ಅಧಿಕಾರಿಗಳು ಉಪಸ್ಥಿತರಿದ್ದರು. ಅಗ್ರಿ ವಾರ್ ರೂಂ ಸಂಪರ್ಕ ಸಂಖ್ಯೆ : 9480838967, 9480838976, 8277932600, 9448999216, 08182-267017.
ಪ್ರತಿ ಜಿಲ್ಲಾ ಹಂತದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಶಿವಮೊಗ್ಗ -9480838976, ಚಿತ್ರದುರ್ಗ-9480838201, ಉಡುಪಿ 9480458083, ಚಿಕ್ಕಮಗಳೂರು-9480838203, ದಾವಣಗೆರೆ-9449856876, ಕೊಡಗು-9945035707, ದಕ್ಷಿಣ ಕನ್ನಡ – 8794706468 ರೈತರು ತಮ್ಮ ಸಮಸ್ಯೆಗಳಿಗೆ ಸಂಕಷ್ಟ ಸಮಯದಲ್ಲಿ ಈ ಸೌಲಭ್ಯ ಬಳಸಿಕೊಳ್ಳಬಹುದು ಎಂದು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ವಿಸ್ತರಣಾ ನಿರ್ದೇಶಕ ಡಾ. ಕೆ.ಸಿ. ಶಶಿಧರ್ ಇವರು ತಿಳಿಸಿದ್ದಾರೆ.

error: Content is protected !!