ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಭದ್ರಾವತಿಯಲ್ಲಿ ಇಂದು “ಸಾವಯವ ಸಿರಿ” ಯೋಜನೆ ಅಡಿ ಧರ್ಮ ಚಕ್ರ ಸಂಸ್ಥೆ ಬೆಂಗಳೂರು ಇವರ ಸಹಯೋಗದೊಂದಿಗೆ ರೈತರಿಗೆ “ಸಾವಯವ ಕೃಷಿ” ,”ಸಾವಯವ ಪ್ರಮಾಣೀಕರಣ” ಹಾಗೂ ಮೌಲ್ಯವರ್ಧನೆ ಬಗ್ಗೆ ತರಬೇತಿಯನ್ನು ಆಯೋಜಿಸಲಾಯಿತು

ಕೃಷಿ ವಿಜ್ಞಾನ ಕೇಂದ್ರದ ಆಹಾರ ತಜ್ಞರಾದ ಶ್ರೀಮತಿ ಡಾ.ಜ್ಯೋತಿ ರಾಥೋಡ್ ರವರು ಮಾತನಾಡಿ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಬಗ್ಗೆ ಮಾಹಿತಿ ನೀಡಿದರು ಹಾಗೆ ಸಾವಯವ ಪ್ರಮಾಣಿಕರಣ ಬಗ್ಗೆ ಶ್ರೀಮತಿ ನಯನ ರವರು ಮಾಹಿತಿ ನೀಡಿದರು

ನಂತರ ಸಹಾಯಕ ಕೃಷಿ ನಿರ್ದೇಶಕರಾದ ಶ್ರೀ ಬಿ.ಸಿ ಶಶಿಧರ್ ರವರು ಮಾತನಾಡಿ ರೈತ ಬಾಂಧವರು ಪಿಎಂ ಕಿಸಾನ್ ಯೋಜನೆ ಅಡಿ ತಮ್ಮ 12ನೇ ಕಂತಿನ ಸಹಾಯಧನ ಪಡೆಯಬೇಕಾದಲ್ಲಿ ದಿನಾಂಕ 14. 9. 2022ರ ಒಳಗೆ ಇ ಕೆವೈಸಿ ಮಾಡಿಸಿಕೊಳ್ಳಲು ಕೋರಿದರು. ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿಯಾದ ಶ್ರೀಮತಿ ಸುನಿತಾ, ಸಂದೀಪ್ ಕುಮಾರ್ ತಾಲೂಕು ವ್ಯವಸ್ಥಾಪಕರಾದ ಶ್ರೀ ಬಿ. ರಾಕೇಶ್ ಹಾಗೂ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.

error: Content is protected !!