ಇಂದು ಕೇಂದ್ರ ವಿತ್ತೀಯ ಮಂತ್ರಿಗಳಾದ ಸನ್ಮಾನ್ಯ ಶ್ರೀ ಪಿಯೂಷ್ ಗೋಯಲ್ ರವರು ಮಂಡಿಸಿದ 2019ನೇ ಸಾಲಿನ ಬಡ್ಜೆಟ್ ಮಧ್ಯಂತರ ಬಡ್ಜೆಟ್ ಆಗಿದ್ದರೂ ಕೂಡ ರೈತರಿಗೆ, ಜನಸಾಮಾನ್ಯರಿಗೆ, ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದವರಿಗೆ, ಮಹಿಳೆಯರಿಗೆ, ಯುವಕರಿಗೆ, ಕಾರ್ಮಿಕರಿಗೆ ಹೀಗೆ ಪ್ರತಿಯೊಬ್ಬರಿಗೂ ಅನುಕೂಲವಾಗುವಂತಹ “ಸ್ನೇಹ ಜೀವಿ ಬಡ್ಜೆಟ್”ನ್ನು ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ವಿತ್ತ ಸಚಿವರಾದ ಸನ್ಮಾನ್ಯ ಶ್ರೀ ಪಿಯೂಷ್ ಗೋಯಲ್‍ರವರು ಮಂಡಿಸಿರುವುದಕ್ಕೆ ಜನರ ಪರವಾಗಿ ಅಭಿನಂದನೆಗಳು.
ಪ್ರಧಾನ ಮಂತ್ರಿ ಕಿಸಾನ್ ಬೋರ್ಡ್ ಸ್ಥಾಪನೆ ಮಾಡುವ ಮೂಲಕ ಅನೇಕ ರೈತಪರ ಯೋಜನೆಗಳನ್ನು ರೈತರ ಭವಿಷ್ಯದ ದೃಷ್ಟಿಯಿಂದ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ. 5 ಎಕರೆವರೆಗಿನ ರೈತರಿಗೆ ಪ್ರತಿ ವರ್ಷ ರೂ. 6000.00ಗಳನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡುವುದರ ಮೂಲಕ ಸಕಾಲದಲ್ಲಿ ಬಿತ್ತನೆ ಬೀಜ, ಗೊಬ್ಬರ ಇತ್ಯಾದಿಗಳನ್ನು ಖರೀದಿಸಲು ನೆರವಾಗುವ ದೃಷ್ಟಿಯಿಂದ ಈ ಮಂಡಳಿಯನ್ನು ಸ್ಥಾಪಿಸಲಾಗುವುದು.
ಜನಸಾಮಾನ್ಯರಿಗೆ ಹಾಗೂ ನೌಕರರಿಗೆ ಆದಾಯ ತೆರಿಗೆ ಮಿತಿಯನ್ನು ರೂ. 5.00 ಲಕ್ಷದವರೆಗೆ ಹೆಚ್ಚಿಸಿರುವುದು ಈ ವರ್ಗದವರು ನೆಮ್ಮದಿಯ ಬದುಕನ್ನು ಬಾಳಲು ಅನುವು ಮಾಡಿಕೊಟ್ಟಿದ್ದಾರೆ.
ರೂ. 50ಸಾವಿರ ಕೋಟಿ ಮತ್ತು ರೂ. 76ಸಾವಿರ ಕೋಟಿವರೆಗೆ ಅನುದಾನ ಒದಗಿಸುವುದರ ಮೂಲಕ ಕ್ರಮವಾಗಿ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದವರ ಅಭಿವೃದ್ಧಿಗಾಗಿ ಮಹತ್ತರ ಹೆಜ್ಜೆಯನ್ನು ಇಟ್ಟಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರ ವೇತನವನ್ನು ಶೇಕಡ 50%ರಷ್ಟು ಹೆಚ್ಚಿಸಲಾಗಿದೆ ಮತ್ತು ಅಸಂಘಟಿತ ಕಾರ್ಮಿಕರಿಗೆ ಕನಿಷ್ಟ ವೇತನವನ್ನು ರೂ. 21ಸಾವಿರಕ್ಕೆ ಏರಿಕೆ ಮಾಡಿದ್ದಾರೆ. ಯುವಕರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲು ಒತ್ತು ನೀಡಲಾಗಿದೆ.
ಭ್ರಷ್ಟಾಚಾರದಲ್ಲಿ ಕಳೆದ 5 ವರ್ಷಗಳ ಹಿಂದೆ 3ನೇ ಸ್ಥಾನದಲ್ಲಿದ್ದ ಅಂತರ್ ರಾಷ್ಟ್ರೀಯ ಮಟ್ಟವು ಪ್ರಸ್ತುತ 20ನೇ ಸ್ಥಾನಕ್ಕೆ ಇಳಿದಿರುವುದು, ಭ್ರಷ್ಟಾಚಾರ ಮುಕ್ತ ದೇಶವನ್ನು ಸ್ಥಾಪಿಸುವ ಕೇಂದ್ರ ಎನ್.ಡಿ.ಎ. ಸರ್ಕಾರದ ಆಶಯ ಈಡೇರಿದಂತೆ ಆಗುತ್ತಿದೆ.
ಈ ರೀತಿ ದೇಶದ ಆರ್ಥಿಕ ಶಿಸ್ತನ್ನು ಗಮನದಲ್ಲಿಟ್ಟುಕೊಂಡು ಯಾರಿಗೂ ಹೊರೆಯಾಗದ ರೀತಿ ಮಂಡಿಸಿರುವ ಈ ಮಧ್ಯಂತರ ಬಡ್ಜೆಟ್‍ಗೂ ನಿಜಕ್ಕೂ ಸ್ನೇಹ ಜೀವಿ ಬಡ್ಜೆಟ್ ಆಗಿದೆ.

error: Content is protected !!