ಪ್ರಸ್ತುತ ಎಲ್ಲಾ ಕ್ಷೇತ್ರಗಳಲ್ಲಿ ರೇಟಿಗ್ ನೀಡುವುದೇ ಈಗಿನ ಟ್ರೇಂಡ್. ಅದರ ಆಧಾರದ ಮೇಲೆಯೇ ಉತ್ಪಾದನೆಗಳ ಬೇಡಿಕೆ ನಿರ್ಧಾರವಾಗುತ್ತದೆ. ಆದ್ದರಿಂದ ಕೈಗಾರಿಕೆಗಳು ಗ್ರಾಹಕ ಕೇಂದ್ರಿಕೃತವಾಗಿದ್ದು ಸ್ಪರ್ಧೆಗೆ ಒಡ್ಡಿಕೊಳ್ಳಬೇಕು ಎಂದು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ನಿವೃತ್ತ ಅಪರ-ನಿರ್ದೇಶಕ ಎಚ್. ಎಸ್. ಪ್ರಕಾಶ್ ಸಲಹೆ ನೀಡಿದರು.
ನಗರದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥ್ಥೆಯ ಶಾಂತಲಾ ಸ್ಪೇರೋಕಾಸ್ಟ್ ಸಭಾಂಗಣದಲ್ಲಿ ಕಾಂಪಿಟೇಶನ್ ಕಾಯಿದೆ, ಸಾರ್ವಜನಿಕ ಸಂಗ್ರಹಣೆ ಹಾಗೂ ಜೆಡ್‍ಇಡಿ(ಜೀರೋ ಡಿಫೆಕ್ಟ್) ಪ್ರಮಾಣ ಪತ್ರ ಕುರಿತು ಸೋಮವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.
ಸ್ಪರ್ಧೆಯನ್ನು ನಿಗ್ರಹಿಸುವುದಕ್ಕಾಗಿಯೇ ಕಾಂಪಿಟೇಶನ್ ಕಮಿಷನ್ ಆಫ್ ಇಂಡಿಯಾ ಇದೆ. ಇದು ಕಲಂ 18ರಡಿ ಸ್ಪರ್ಧೆಯ ಪ್ರತಿಕೂಲ ಪರಿಣಾಮಗಳನ್ನು ನಿಯಂತ್ರಿಸುವುದಲ್ಲದೇ ಮಾರುಕಟ್ಟೆಯಲ್ಲಿ ಗ್ರಾಹಕ ಕೇಂದ್ರಿತ ಮತ್ತು ವಹಿವಾಟಿನ ಸ್ವಾಂತಂತ್ರ್ಯವನ್ನು ಗಮನದಲ್ಲಿಟ್ಟುಕೊಂಡು ನಿಗ್ರಹಿಸುತ್ತದೆ ಎಂದು ತಿಳಿಸಿದರು.
ಸ್ಫರ್ಧೆಯ ಕಾನೂನು ಬರಿ ಭಾರತ ಮಾತ್ರವಲ್ಲದೇ ಅಂತರರಾಷ್ಟ್ರೀಯ ಮಟ್ಟದಲ್ಲೂ ಇದೆ. ಕೆನಡಾದಲ್ಲಿ 1889, ಯುಎಸ್ 1890, ಯರೋಪಿಯನ್ ಯೂನಿಯನ್ 1957, ಬ್ರಿಜಿಲ್ 1994 ದಕ್ಷಿಣ ಆಫ್ರಿಕಾ 1998, ಭಾರತ 2002, ರಷ್ಯಾ 2006 ಮತ್ತು ಚೀನಾದಲ್ಲಿ 2008ರಲ್ಲಿ ಜಾರಿಗೆ ಬಂದಿದೆ ಎಂದರು.
ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಕೈಗಾರಿಕಾ ಸಂಘದ ಜೋಯಿಸ್ ರಾಮಾಚಾರ್ ಜೆಡ್‍ಇಡಿ ಕಾಯಿದೆ ಎಂ.ಎಸ್.ಎಂ.ಇ ಗಳಿಗೆ ಸಹಕಾರಿಯಾಗಿದೆ. ಎಲ್ಲರೂ ಇದರ ಪ್ರಮಾಣ ಪತ್ರವನ್ನು ಪಡೆದುಕೊಳ್ಳುವುದು ಉತ್ತಮ ಎಂದರು.
ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ನಿವೃತ್ತ ಅಪರ ನಿರ್ದೇಶಕ ಡಾ. ಮಹಾಂತೇಶ್ ಎನ್. ಕರೂರ್ ಮಾತನಾಡಿ ದೇಶದಲ್ಲಿ ಕೈಗಾರಿಕೆ ಸಂಬಂಧ ಹಲವು ಕಾನೂನುಗಳು ಜಾರಿಗೆ ತರಲಾಗಿದೆ. ಆದರೆ, ಅದರ ಬಗ್ಗೆ ಕೈಗಾರಿಕೋದ್ಯಮಿಗಳಿಗೆ ಮಾಹಿತಿಯೇ ಇಲ್ಲ. ಉದ್ಯಮಿಗಳು ಈ ಕಾನೂನುಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಾಚೇನಹಳ್ಳಿ ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಎಂ.ಎ. ರಮೇಶ್ ಹೆಗ್ಡೆ, ಕೆ.ಎಸ್.ಐ.ಡಿ.ಸಿ ಕೈಗಾರಿಕಾ ವಸಹಾತುವಿನ ಅಧ್ಯಕ್ಷ ಉಮೇಶ್ ಶಾಸ್ತ್ರೀ, ಜಿಲ್ಲ್ಲಾ ಕೈಗಾರಿಕಾ ಸಂಘದ ಕಾರ್ಯದರ್ಶಿ ಎಸ್. ವಿಶ್ವೇಶ್ವರಾಯ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟೀ ನಿರ್ದೆಶಕ ಆರ್. ಗಣೇಶ್, ಉಪ-ನಿರ್ದೇಶಕ ವಿರೇಶ್ ನಾಯ್ಕ್ಕ ಕಾಸಿಯಾ ಉಪಸಮಿತಿಯ ಎಚ್.ಎಸ್. ಲಿಂಗೇಶ, ಜಿಲ್ಲಾಕೈಗಾರಿಕಾ ಸಂಘದ ಸಹ-ಕಾರ್ಯದರ್ಶಿ ಜಿ. ವಿಜಯಕುಮಾರ್, ನಿರ್ದೇಶಕ ಗಣೇಶ ಎಂ. ಅಂಗಡಿ ಮತ್ತಿತರರು ಹಾಜರಿದ್ದರು.