ನವೆಂಬರ್ 09, ರಾಷ್ಟ್ರೀಯ ಮಕ್ಕಳ ದಿನಾಚರಣೆ ನವೆಂಬರ್ 14ರ ಅಂಗವಾಗಿ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವತಿಯಿಂದ ನವೆ0ಬರ್ 13 ರ (ಭಾನುವಾರ0ದದು) 1 ರಿಂದ 7ನೇ ತರಗತಿ ಮಕ್ಕಳಿಗೆ ಮೂರು ಹಂತದಲ್ಲಿ (1-2ನೇ, 3-4 ಮತ್ತು 5ನೇ ಹಾಗೂ 6-7ನೇ ತರಗತಿ) ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಸ್ಪರ್ದೆಯಲ್ಲಿ ಶಿವಮೊಗ್ಗ ಸೇರಿದಂತೆ ಸುತ್ತಮುತ್ತಲಿನ ಪೋಷಕರು ತಮ್ಮ ಮಕ್ಕಳನ್ನು ಸ್ಪರ್ದೆಯಲ್ಲಿ ಭಾಗವಹಿಸುವುದರ ಮುಖಾಂತರ ಮಕ್ಕಳಲ್ಲಿ ಅಡಗಿರುವ ಕಲಾ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕಾಗಿ ವಿನಂತಿ.
ಸ್ಪರ್ದೆಯಲ್ಲಿ ಭಾಗವಹಿಸುವ ಮಕ್ಕಳಿಗೆ ಡ್ರಾಯಿಂಗ್ ಶೀಟ್ ಮತ್ತು ಸರ್ಟಿಫಿಕೇಟ್‍ಅನ್ನು ನೀಡಲಾಗುವುದು. ಉಳಿದಂತೆ ಸ್ಪರ್ದೆಗೆ ಬೇಕಾಗಿರುವ ಸಾಮಗ್ರಿಗಳನ್ನು ಮಕ್ಕಳೇ ತರಬೇಕು. ಸ್ಪರ್ದೆಯ ಸಮಯವು ಬೆಳಿಗ್ಗೆ 10:00 ರಿಂದ 12:00 ರ ವರೆಗೆ ಆಸ್ಪತ್ರೆಯ ಕ್ಯಾಂಟೀನ್ ಆವರಣದಲ್ಲಿ ನಡೆಯುತ್ತದೆ.
ಸ್ಪರ್ದೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಳಿಗಾಗಿ ಮತ್ತು ಪೂರ್ವ ನೊಂದಣಿಗಾಗಿ 9916401958 ದೂರವಾಣಿಗೆ (9AM to 5PM) ಕರೆ ಮಾಡಲು ಸೂಚಿಸಲಾಗಿದೆ. (ಸ್ಥಳ ನೊಂದಣಿಗೆ ಆಧ್ಯತೆ ಇರುವುದಿಲ್ಲ) ಈ ವಿನೂತನ ಕಾರ್ಯಕ್ರಮದಲ್ಲಿ ಮಕ್ಕಳನ್ನು ಭಾಗವಹಿಸಲು ಪ್ರೋತ್ಸಾಹ ನೀಡುವಂತೆ ಆಸ್ಪತ್ರೆಯ ಆಡಳಿತ ಮಂಡಳಿಯು ಕೋರಿದೆ.
ಸೂಚನೆ : ಪೂರ್ವ ನೊಂದಣಿಯನ್ನು ದಿನಾಂಕ 12-11-2022 ಶನಿವಾರ ಸಂಜೆ 5:00 ರ ವರೆಗೆ ನಿಗದಿಪಡಿಸಲಾಗಿದೆ.