ಶಿವಮೊಗ್ಗ ಅಕ್ಟೋಬರ್ 31: ರಾಷ್ಟ್ರದ ಐಕ್ಯತೆ, ಸಮಗ್ರತೆ ಮತ್ತು ಭದ್ರತೆಯನ್ನು ಕಾಪಾಡಲು ನಮ್ಮನ್ನು ಅರ್ಪಿಸಿಕೊಳ್ಳೋಣ ಹಾಗೂ ಸ್ವಚ್ಛತೆಗೆ ಮೊದಲ ಆದ್ಯತೆ ನೀಡೋಣ ಎಂದು ವಿಧಾನ ಪರಿಷತ್ ಶಾಸಕರಾದ ಡಿ.ಎಸ್.ಅರುಣ್‍ರವರು ನುಡಿದರು.
ಭಾರತ ಸರ್ಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ಶಿವಮೊಗ್ಗ ಮಹಾನಗರ ಪಾಲಿಕೆ, ಪಶುವೈದ್ಯಕೀಯ ಮಹಾವಿದ್ಯಾಲಯ, ಎನ್.ಎಸ್.ಎಸ್. ಘಟಕ, ರೋಟರಿ ಉತ್ತರ, ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ದಿನಾಂಕ 31.10.2022 ರಂದು ಕಾಶಿಪುರ ಸರ್ಕಲ್‍ನಲ್ಲಿ ಹಮ್ಮಿಕೊಳ್ಳಲಾದ “ರಾಷ್ಟ್ರೀಯ ಏಕತಾ ದಿವಸ “ಹಾಗೂ “ಯುನಿಟಿ ರನ್” ಮತ್ತು ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸರ್ದಾರ್ ವಲ್ಲಭಬಾಯಿ ಪಟೇಲ್‍ರವರ ದೂರದೃಷ್ಟಿ ಮತ್ತು ಕಾರ್ಯಕ್ಷಮತೆಯಿಂದ ಭಾರತದ ಏಕೀಕರಣ ಸಾಧಿಸಲಾಯಿತು ಹಾಗೂ ರಾಷ್ಟ್ರದ ಆಂತರಿಕ ಭದ್ರತೆಯನ್ನು ಖಾತರಿಪಡಿಸಿ, ಅಖಂಡತೆಗೆ ನಿಜವಾದ ವ್ಯಾಖ್ಯಾನ ನೀಡಿದ ಅವರ ತ್ಯಾಗ, ಸೇವೆ, ಹೋರಾಟ ಅವಿಸ್ಮರಣೀಯ.
ಅಖಂಡ ಭಾರತದ ಪರಿಕಲ್ಪನೆಯ ರೂವಾರಿಗಳು, ದೇಶದ ಪ್ರಥಮ ಉಪಪ್ರಧಾನಿ ಹಾಗೂ ಗೃಹ ಸಚಿವರಾಗಿ ಭಾರತಾಂಬೆಯ ಸೇವೆಗೈದ ಉಕ್ಕಿನ ಮನುಷ್ಯ, ಧೀಮಂತ ನಾಯಕ ಸರ್ದಾರ್ ವಲ್ಲಭಬಾಯಿ ಪಟೇಲ್‍ರವರ ಜಯಂತಿ ದಿನದ ಅಂಗವಾಗಿ ಎಲ್ಲಾ ಸಂಘ ಸಂಸ್ಥೆಯವರು ಇಂದು ಅರ್ಥಪೂರ್ಣ ಕಾರ್ಯಕ್ರಮ ಆಚರಣೆ ಮಾಡುತ್ತಿದ್ದಾರೆ ಎಂದು ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮೇಯರ್ ಶಿವಕುಮಾರ್ ಮಾತನಾಡಿ, ಈಗಾಗಲೇ ಸ್ವಚ್ಛತೆಯ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದೇವೆ. ಸಾರ್ವಜನಿಕರು ಎಲ್ಲೆಂದರಲ್ಲಿ ಕಸವನ್ನು ಬಿಸಾಡಬಾರದು ಹಾಗೂ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸಿ ಪರಿಸರವನ್ನು ಕಾಪಾಡುವಲ್ಲಿ ನಮ್ಮ ಜೊತೆ ಕೈಜೋಡಿಸಬೇಕೆಂದು ನುಡಿದರು.
ಮಹಾನಗರ ಪಾಲಿಕೆಯ ಸದಸ್ಯೆ ಅನಿತಾ ರವಿಶಂಕರ್ ಮಾತನಾಡಿ, ಈಗಾಗಲೇ ಪ್ರಧಾನಿಯವರ ಕನಸಿನಂತೆ ಸ್ವಚ್ಛತೆ ಬಗ್ಗೆ ಸಾಕಷ್ಟು ಅರಿವು ಮೂಡಿಸಿದರೂ ಸಹ ಜನರು ಇಂದಿಗೂ ತಮ್ಮ ಮನೆಯನ್ನು ಮಾತ್ರ ಸ್ವಚ್ಛವಾಗಿಟ್ಟುಕೊಂಡು ಕಸವನ್ನು ಎಲ್ಲೆಂದರಲ್ಲಿ ಹಾಕುತ್ತಿರುವುದು ತುಂಬಾ ವಿμÁಧನೀಯ. ಹಾಗಾಗಿ ಮಕ್ಕಳಲ್ಲಿ ಈ ಜಾಗೃತಿಯನ್ನು ಮೂಡಿಸಿದರೆ ಪೆÇೀಷಕರಿಗೆ ತಲುಪುತ್ತದೆ ಎಂದು ನುಡಿದರು.
ನೆಹರು ಯುವ ಕೇಂದ್ರದ ಅಧಿಕಾರಿ ಉಲ್ಲಾಸ್ ಕೆ.ಟಿ.ಕೆ ಯವರು ಮಾತನಾಡಿ 31 ದಿನಗಖ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಂದಡಿದ್ದು ಇಂದು ಅಭಿಯಾನದ ಕೊನೆಯ ದಿನವನ್ನು ಕಾಶಿಪುರ ಸರ್ಕಲ್‍ನಿಂದ ಪ್ರಾರಂಭಿಸಿ ವಿವಿಧ ಬಡಾವಣೆಗಳಲ್ಲಿ, ಗ್ರಾಮಗಳಲ್ಲಿ ನೆರವೇರಿಸಲಾಗುವುದು. ಹಾಗೂ ಇಂದು ಪಶುವೈದ್ಯಕೀಯ ಮಹಾವಿದ್ಯಾಲಯದ ಎನ್.ಎಸ್.ಎಸ್. ಘಟಕದ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಬಡಾವಣೆಗಳಲ್ಲಿ ಸ್ವಚ್ಛತೆಯನ್ನು ಮಾಡುವುದರ ಮುಖಾಂತರ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದ್ದಾರೆ. ಎಂದರು.
ಅಭಿಯಾನದಲ್ಲಿ ಪಶುವೈದ್ಯಕೀಯ ಮಹಾವಿದ್ಯಾಲಯದ ಪೆÇ್ರ. ಗಣೇಶ್ ಉಡುಪ, ಪಶು ವೈದ್ಯಕೀಯ ಮಹಾವಿದ್ಯಾಲಯ ಎನ್.ಎಸ್.ಎಸ್. ಸಂಯೋಜಕ ಡಾ. ಧೂಳಪ್ಪ ಡಾ, ಹರೀಶ್ ಎಮ್.ಎನ್. ರೋಟರಿ ಕ್ಲಬ್ ಶಿವಮೊಗ್ಗ ಉತ್ತರ ಅಧ್ಯಕ್ಷ ಜಗದೀಶ್ ಸರ್ಜಾ, ಪೆÇ್ರ ಏ.ಎಸ್.ಚಂದ್ರಶೇಖರ್, ವಾರೀಜಾ ಜಗದೀಶ್, ಜಿ.ವಿಜಯಕುಮಾರ್, ಕಾರ್ಯದರ್ಶಿ ವೆಂಕಟೇಶ್, ಉμÁ, ಭಾರತಿ ಚಂದ್ರಶೇಖರ್ ಹಾಗೂ ಸಾರ್ವಜನಿಕರು, ಮಹಾನಗರ ಪಾಲಿಕಯ ಕಾರ್ಮಿಕರು, ಅಂಚೆ ಇಲಾಖೆ ಸಿಬ್ಬಂದಿ ವರ್ಗದವರು, ನೆಹರು ಯುವ ಕೇಂದ್ರದ ಯುವ ಕಾರ್ಯಕರ್ತರು, ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
(ಫೋಟೊ ಇದೆ)