ಬಾಗಲಕೋಟೆ: ಡಿಸೆಂಬರ 20 : ಪ್ರಾಕೃತಿಕವಾಗಿ, ಸಾಂಸ್ಕøತಿಕ ಪರಂಪರೆಗೆ, ಶಿಲ್ಪ ವರ್ಗಕ್ಕೆ, ಕಲಾಕೃತಿಗಳಿಗೆ ಹೆಸರುವಾಸಿಯಾಗಿರುವ ಬಾಗಲಕೋಟೆ ಜಿಲ್ಲೆಯಲ್ಲೀಗ ದ್ವಿಬಣ್ಣದ ಹೂವುಗಳು ರಾರಾಜಿಸುತ್ತಿವೆ. ತಿಳಿ ಗುಲಾಬಿ ಹಾಗೂ ಹಳದಿ ಬಣ್ಣದ ಸಣ್ಣ ಸಣ್ಣ ಎಸಳುಗಳ ಎಳೆ ಎಳೆಯಾಗಿ ಗುಚ್ಛವಾಗಿರುವ ಈ ಹೂವುಗಳು ಕ್ರಮೇಣ ವಯಸ್ಸಾದಂತೆ ಗುಲಾಬಿ ಬಣ್ಣ ಬಿಳಿಯ ಬಣ್ಣಕ್ಕೆ ತಿರುಗುತ್ತದೆ. ಕನ್ನಡದ ಆಡುಭಾಷೆಯಲ್ಲಿ ವಧುವರ ಸಸ್ಯಯೆನ್ನುತ್ತಾರೆ. ಇಂಗ್ಲೀಷನಲ್ಲಿ ಡೈಕ್ರೊಸ್ಟಾಕಿಸ್ ಸಿನೆರಾ ಎಂಬ ಹೆಸರಿದ್ದು, ವೈಮೋಸೆ ಕುಟುಂಬಕ್ಕೆ ಸೇರಿದೆ. ಮುಟ್ಟಿದರೆ ಮುನಿಯೆಂಬ ಸಣ್ಣ ಸಸ್ಯ ಅಥವಾ ಚಿಕ್ಕ ಬಳ್ಳಾರಿ ಜಾಲಿಯ ಕುಟುಂಬಕ್ಕೆ ಸೇರಿರುವ ಈ ಸಸ್ಯ ಚಿಕ್ಕ ಚಿಕ್ಕ ಮುಳ್ಳುಗಳನ್ನು ಹೊಂದಿದೆ. ಉಷ್ಣವಲಯದ ಒಣ ಮುಳ್ಳು ಗಿಡಗಂಟಿಯ ವಿಭಾಗಕ್ಕೆ ಸೇರುವ ಈ ಸಸ್ಯ ಜಿಲ್ಲೆಯ ಒಣ ಪ್ರದೇಶದ ಕಲು ಬಂಡೆಗಳ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಬಾಗಲಕೋಟೆ, ಬಾದಾಮಿ, ಹುನಗುಂದ, ಬೀಳಗಿ, ಮುಧೋಳ ಸುತ್ತಲೂ ಹೆಚ್ಚಾಗಿ ಕಂಡುಬರುತ್ತದೆ