ಶಿವಮೊಗ್ಗ, ಜನವರಿ-4 ರಾಜ್ಯಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸಿರುವ ಯುವ ಪ್ರತಿಭೆಗಳು ಶನಿವಾರ ವಿವಿಧ ಪ್ರಕಾರದ ನೃತ್ಯ, ಗಾಯನ, ವೈವಿಧ್ಯಮಯ ವಾದ್ಯ ಸಂಗೀತದ ಮೋಡಿಯ ಮೂಲಕ ಸಾಂಸ್ಕøತಿಕ ಕಲಾ ಕೌಶಲ್ಯ ಮೆರೆದರು.
ಶಿವಮೊಗ್ಗ ನಗರದಲ್ಲಿ ಜನವರಿ 5ರವರೆಗೆ ನಡೆಯಲಿರುವ ರಾಜ್ಯ ಮಟ್ಟದ ಯುವಜನೋತ್ಸವದ ಎರಡನೇ ದಿನವಾದ ಶನಿವಾರ ರಾಜ್ಯದ ವೈವಿಧ್ಯಮಯ ಸಾಂಸ್ಕøತಿಕ ಸೊಬಗು ಅನಾವರಣಗೊಂಡಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕಲಾನಿಧಿ ಯೂತ್ ಅಸೋಸಿಯೇಷನ್, ಮೈಸೂರು ಮತ್ತು ಜಿಲ್ಲಾ ಯುವ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಯುವಜನೋತ್ಸವದಲ್ಲಿ ವಿವಿಧ ಶಾಲಾ-ಕಾಲೇಜುಗಳ ಯುವ ಜನರು ತಮ್ಮ ಕಲಾ ನೈಪುಣ್ಯತೆ ಮೆರೆದರು.
ಶನಿವಾರ ರಾಜ್ಯ ಸರ್ಕಾರಿ ನೌಕರರ ಭವನದ ಪಿ.ಲಂಕೇಶ್ ವೇದಿಕೆಯಲ್ಲಿ ಭರತನಾಟ್ಯ, ಒಡಿಸ್ಸಿ, ಕಥಕ್, ಕೂಚುಪುಡಿ, ಮಣಿಪುರಿಗಳಂತಹ ಶಾಸ್ತ್ರೀಯ ನೃತ್ಯ, ನೆಹರೂ ಕ್ರೀಡಾಂಗಣದ ಕುವೆಂಪು ವೇದಿಕೆಯಲ್ಲಿ ಜಾನಪದ ಗೀತೆ, ಜಾನಪದ ನೃತ್ಯ, ಕುವೆಂಪು ರಂಗಮಂದಿರದ ಜಿ.ಎಸ್.ಶಿವರುದ್ರಪ್ಪ ವೇದಿಕೆಯಲ್ಲಿ ಹಿಂದುಸ್ತಾನಿ, ಕರ್ನಾಟಿಕ್  ಸಂಗೀತ, ಆಂಬೇಡ್ಕರ್ ಭವನದ ಕೆ.ವಿ. ಸುಬ್ಬಣ ವೇದಿಕೆಯಲ್ಲಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಯ ಏಕಾಂಕ ನಾಟಕ ಹಾಗೂ ಆಶುಭಾಷಣ ಸ್ಪರ್ಧೆಗಳು ನಡೆದವು. ಶಾಸ್ತ್ರೀಯ  ವಾದ್ಯಗಳಾದ ವೀಣೆ, ಸಿತಾರ್, ತಬಲಾ ಮೃದಂಗಂ, ಕೊಳಲು, ಹಾರ್ಮೋನಿಯಂ, ಗಿಟಾರ್ ವಾದನ ಸಂಭ್ರಮವನ್ನೂ ಸೃಷ್ಟಿಸಿತ್ತು.
ಭರತ ನಾಟ್ಯ, ಜಾನಪದ ನೃತ್ಯ ಪ್ರದರ್ಶನ, ಜನಪದ ಗೀತೆ ಗಾಯನ, ಶಾಸ್ತ್ರೀಯ ಸಂಗೀತ ಗಾಯನ ಮತ್ತು ಸಂಗೀತ ವಾದ್ಯಗಳ ನಾದಮಯ ಲೋಕ ಅನಾವರಣಗೊಂಡಿತು.  ಶಾಸ್ತ್ರೀಯ ನೃತ್ಯಗಳಾದ ಭರತ ನಾಟ್ಯ, ಒಡಿಸ್ಸಿ, ಮಣಿಪುರಿ, ಕೂಚುಪುಡಿ, ಕಥಕ್ ಪ್ರದರ್ಶನ ಗಮನ ಸೆಳೆದವು. ಶಾಸ್ತ್ರೀಯ ವಾದ್ಯಗಳಾದ ಸೀತಾರ್, ಕೊಳಲು, ತಬಲ, ವೀಣೆ, ಮೃದಂಗ, ಹಾರ್ಮೋನಿಯಂ, ಗಿಟಾರ್ ವಾದನ ಹಾಗೂ ಶಾಸ್ತ್ರೀಯ ಗಾಯನ ಕಲೆಯ ಸಂಭ್ರಮವನ್ನು ಸೃಷ್ಠಿಸಿತು.
15ರಿಂದ 29ವರ್ಷದೊಳಗಿನ ಎಲ್ಲಾ ಯುವಕ, ಯುವತಿಯರು, ಶಾಲಾ , ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮತ್ತು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ನೋಂದಣಿಯಾದ ಯುವಕ, ಯುವತಿಯರಿಗೆ ಯುವಜನೋತ್ಸವದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಭಾನುವಾರ ಸಹ ಸ್ಪರ್ಧೆಗಳು ಮುಂದುವರೆಯಲಿವೆ.
ಮೈಸೂರು, ಚಿತ್ರದುರ್ಗ, ಹಾವೇರಿ, ಬೆಳಗಾವಿ, ಬೆಂಗಳೂರು, ವಿಜಯಪುರ, ಹಾಸನ, ಬಾಗಲಕೋಟೆ, ಚಾಮರಾಜ ನಗರ, ದಾವಣಗೆರೆ, ಯಾದಗಿರಿ, ಕೊಡಗು, ತುಮಕೂರು, ಕಲಬುರಗಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಾವಿರಕ್ಕಿಂತ ಅಧಿಕ ಸ್ಪರ್ಧಿಗಳು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ.
ಸಮಾರೋಪ ಸಮಾರಂಭ: ಯುವಜನೋತ್ಸವದ ಬಹುಮಾನ ವಿತರಣಾ ಸಮಾರಂಭ ಭಾನುವಾರ ಸಂಜೆ 4ಗಂಟೆಗೆ ನೆಹರೂ ಕ್ರೀಡಾಂಗಣದಲ್ಲಿ ನಡೆಯಲಿದೆ.
ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಎಂ.ಶಾಂತರಾಜು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಲ್.ವೈಶಾಲಿ, ಉಪ ಕಾರ್ಯದರ್ಶಿ ಶ್ರೀಧರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಹೆಚ್.ಟಿ. ಶೇಖರ್, ಅಪರ ಜಿಲ್ಲಾಧಿಕಾರಿ ಅನುರಾಧ, ಮಹಾನಗರ ಪಾಲಿಕೆ ಚಿದಾನಂದ ವಠಾರೆ ಭಾಗಹಿಸಲಿದ್ದಾರೆ.

error: Content is protected !!