ಶಿವಮೊಗ್ಗ: ನಗರದ ಕುವೆಂಪು ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ವತಿಯಿಂದ ಡಿ. 29ರಂದು ರಾಜ್ಯಮಟ್ಟದ ಪ್ರಥಮ “ವೈಜ್ಞಾನಿಕ ಸಮ್ಮೇಳನ”, ವಿಶ್ವಮಾನವ ದಿನಾಚರಣೆ, ರಾಜ್ಯಮಟ್ಟದ “ಎಚ್.ಎನ್.ಪ್ರಶಸ್ತಿ” ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್‍ನ ರಾಜ್ಯಾಧ್ಯಕ್ಷ ಡಾ. ಹುಲಿಕಲ್ ನಟರಾಜ್ ಹೇಳಿದರು.
2020 ಡಿ. 29ರಂದು ಸಮಾಜಮುಖಿ ಚಿಂತಕರ ಜತೆಗೂಡಿ ಆರಂಭಿಸಿದ ಸಂಸ್ಥೆಯು ಒಂದು ವರ್ಷ ಪೂರೈಸುತ್ತಿರುವ ವಿಶೇಷ ಸಂದರ್ಭದಲ್ಲಿ ರಾಜ್ಯಮಟ್ಟದ ಪ್ರಥಮ ವೈಜ್ಞಾನಿಕ ಸಮ್ಮೇಳನ ಹಮ್ಮಿಕೊಳ್ಳಲಾಗಿದ್ದು, ರಾಜ್ಯಾದ್ಯಂತ ಜಿಲ್ಲಾ ಹಾಗೂ ತಾಲೂಕು ಸಮಿತಿ ಹೊಂದಿರುವ ಪರಿಷತ್‍ನಲ್ಲಿ ಐವತ್ತು ಸಾವಿರಕ್ಕೂ ಹೆಚ್ಚಿನ ಸದಸ್ಯರು ಇದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜನಸಾಮಾನ್ಯರಲ್ಲಿ ವ್ಶೆಜ್ಞಾನಿಕ ಹಾಗೂ ವೈಚಾರಿಕ ಚಿಂತನೆಗಳ ಜಾಗೃತಿ ಮೂಡಿಸುವುದು, ಮೌಢ್ಯವನ್ನು ದೂರ ಮಾಡುವುದು, ವಿಜ್ಞಾನ, ಸಾಮಾಜಿಕ, ಸಾಂಸ್ಕøತಿಕ, ಸಾಹಿತ್ಯ ಶಿಕ್ಷಣ ಹೀಗೆ ಹತ್ತು ಹಲವಾರು ಜನಪರ ಕಾರ್ಯಯೋಜನೆಗಳೊಂದಿಗೆ ವಿಶ್ವ ಗಮನ ಸೆಳೆಯುವ “ವಿಜ್ಞಾನ ಗ್ರಾಮ” ನಿರ್ಮಾಣ ಮಾಡುವ ಕನಸು ಹೊತ್ತ ಸಂಸ್ಥೆಗೆ ಅನೇಕರು ಕೈ ಜೋಡಿಸಿದ್ದಾರೆ. ರಾಜ್ಯಮಟ್ಟದ ಪ್ರಥಮ ವೈಜ್ಞಾನಿಕ ಸಮ್ಮೇಳನ ಶಿವಮೊಗ್ಗ ಜಿಲ್ಲೆಯಿಂದ ಆರಂಭವಾಗುತ್ತಿರುವುದು ವಿಶೇಷ ಎಂದರು.
ಸಿಎಂ ಉದ್ಘಾಟನೆ: ಡಿ. 29ರ ಬೆಳಗ್ಗೆ 10ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮೇಳನ ಉದ್ಘಾಟಿಸುವರು. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ನಾಗಮೋಹನ್ ದಾಸ್ ಆಶಯ ನುಡಿಗಳನ್ನಾಡುವರು. ಇಸ್ರೋ ಮಾಜಿ ಅಧ್ಯಕ್ಷ, ವಿಜ್ಞಾನಿ ಡಾ. ಎ.ಎಸ್.ಕಿರಣ್ ಕುಮಾರ್ ಸಮ್ಮೇಳನದ ಸರ್ವಾಧ್ಯಕ್ಷರ ನುಡಿಗಳನ್ನಾಡುವರು. ಬೆಕ್ಕಿನ ಕಲ್ಮಠದ ಡಾ. ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಜ್ಞಾನ ಸಿರಿ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸಂಸ್ಥೆಯ ಸದಸ್ಯತ್ವ ಅಪ್ಲಿಕೇಷನ್ ಬಿಡುಗಡೆ ಮಾಡುವರು. ಗೃಹ ಸಚಿವ ಆರಗ ಜ್ಞಾನೇಂದ್ರ ಅವರು 2022ರ ದಿನಚರಿ ಬಿಡುಗಡೆಗೊಳಿಸುವರು. ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ ಅವರು ವಿಜ್ಞಾನ ಗ್ರಾಮಕ್ಕೆ ಚಾಲನೆ ನೀಡುವರು. ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ ಪರಿಷತ್‍ನ ವೆಬ್‍ಸೈಟ್ ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಹೇಳಿದರು.
ರಾಜ್ಯಮಟ್ಟದ ವಿಚಾರಗೋಷ್ಠಿ: ಮಧ್ಯಾಹ್ನ 2ಕ್ಕೆ ವಿಶ್ವ ಕವಿ ಕುವೆಂಪು ಹಾಗೂ ಎಚ್.ನರಸಿಂಹಯ್ಯ ಅವರ ಕುರಿತ ರಾಜ್ಯಮಟ್ಟದ ವಿಚಾರಗೋಷ್ಠಿ ಆಯೋಜಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಉದ್ಘಾಟಿಸುವರು. ನೆಲದ ಕವಿ ಕುವೆಂಪು ಹಾಗೂ ಎಚ್.ಎನ್ ಕುರಿತು ಸಾಹಿತಿ ಡಾ. ಕುಂ.ವೀರಭದ್ರಪ್ಪ ಮಾತನಾಡುವರು. ಶಿವಮೊಗ್ಗ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಅಧ್ಯಕ್ಷತೆ ಸಹಿಸುವರು. ಸಂಜೆ 4ಕ್ಕೆ ರಾಜ್ಯ ಮಟ್ಟದ ಮಹಾ ಅಧಿವೇಶನ ನಡೆಯಲಿದೆ. ಈ ಸಭೆಯಲ್ಲಿ ರಾಜ್ಯ ಕಾರ್ಯಕಾರಿ ಸಮಿತಿ ಹಾಗೂ ರಾಜ್ಯದ ಎಲ್ಲ ಜಿಲ್ಲೆ, ತಾಲ್ಲೂಕು ಅಧ್ಯಕ್ಷರು ಭಾಗವಹಿಸುವರು ಎಂದು ತಿಳಿಸಿದರು.
ವ್ಶೆಜ್ಞಾನಿಕ ಸಂಶೋಧನಾ ಪರಿಷತ್ತಿನ ರಾಜ್ಯ ಸಂಘಟನಾ ಕಾರ್ಯದರ್ಶಿ ವಿ.ಟಿ.ಸ್ವಾಮಿ, ಜಿಲ್ಲಾಧ್ಯಕ್ಷ ರಾಜೇಂದ್ರ ಆವಿನಹಳ್ಳಿ, ರಾಜ್ಯ ಸಮಿತಿಯ ಹನುಮಂತೇಗೌಡ, ಮೋಹನ್‍ಕುಮಾರ್, ರೇಣುಕಾ ಪ್ರಸಾದ್, ಗೌರಿ ಪ್ರಸನ್ನಕುಮಾರ್, ನಾಗರಾಜ್ ಸಂಗಮ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.
ರಾಜ್ಯಮಟ್ಟದ ಪ್ರಥಮ “ವೈಜ್ಞಾನಿಕ ಸಮ್ಮೇಳನ”ದ ಸಮಾರೋಪ ಸಮಾರಂಭ ಡಿ. 29ರ ಸಂಜೆ 5ಕ್ಕೆ ನಡೆಯಲಿದೆ. ಚಿತ್ರದುರ್ಗ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾಶರಣರು ಸಾನ್ನಿಧ್ಯ ವಹಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಸುನಿಲ್‍ಕುಮಾರ್ ಅವರು ರಾಜ್ಯಮಟ್ಟದ “ಎಚ್.ಎನ್” ಪ್ರಶಸ್ತಿ ಪ್ರದಾನ ಮಾಡುವರು. ಕುವೆಂಪು ವಿಶ್ವವಿದ್ಯಾಲಯ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ಸಮಾರೋಪ ನುಡಿಗಳನ್ನಾಡುವರು.
ರಾಜ್ಯ ಮಟ್ಟದ ಎಚ್.ಎನ್. ಪ್ರಶಸ್ತಿ ಪುರಸ್ಕøತರು: ಇದೇ ಮೊದಲ ಬಾರಿಗೆ ರಾಜ್ಯಮಟ್ಟದಲ್ಲಿ “ಹೆಚ್.ಎನ್” ಪ್ರಶಸ್ತಿ ನೀಡಲಾಗುತ್ತಿದೆ. ಚಿತ್ರದುರ್ಗ ಮುರುಘಾಮಠದ ಡಾ. ಶಿವಮೂರ್ತಿ ಶರಣರು ಹಾಗೂ ಮರಣೋತ್ತರವಾಗಿ ಪುನಿತ್ ರಾಜ್‍ಕುಮಾರ್ ಅವರಿಗೆ ನೀಡಲಾಗುತ್ತಿದೆ. ಶೈಕ್ಷಣಿಕ ಜಿಲ್ಲಾವಾರು ಎಚ್.ಎನ್.ಪ್ರಶಸ್ತಿ ನೀಡಲಾಗುತ್ತಿದೆ. ಡಿ. 29ರ ಸಂಜೆ 6ಕ್ಕೆ ಹರಟೆ ಖ್ಯಾತಿ ಇಂದುಮತಿ ಸಾಲಿಮಠ ಅವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ಆಯೋಜಿಸಿದೆ. ಡಿ. 29ರ ಬೆಳಗ್ಗೆ ಕುಪ್ಪಳ್ಳಿಯಲ್ಲಿ ಕುವೆಂಪು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ರಾಮಾಯಣ ದರ್ಶನಂ ಕೃತಿಯೊಂದಿಗೆ ವ್ಶೆಜ್ಞಾನಿಕ ಜಾತಾ ಆಗಮಿಸಲಿದೆ. ಇದು ರಾಜ್ಯಾದ್ಯಂತ ಸಂಚರಿಸಲಿದೆ. ಈ ಸಮ್ಮೇಳನದಲ್ಲಿ ಸುಗಮ ಸಂಗೀತ, ಜಾನಪದ, ಮೊದಲಾದ ಸಾಂಸ್ಕøತಿಕ ಕಾರ್ಯಕ್ರಮ ಆಯೋಜಿಸಿದೆ.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಕಾರ್ಯಕಾರಿ ಸಮಿತಿಗಳನ್ನು ರಚಿಸಿದೆ. ಈಗಾಗಲೆ ಐವತ್ತು ಸಾವಿರಕ್ಕೂ ಹೆಚ್ಚು ಸದಸ್ಯತ್ವನ್ನು ಹೊಂದಿದ ಹೆಗ್ಗಳಿಕೆ ಸಂಸ್ಥೆಯದ್ದಾಗಿದೆ. ಸಂಸ್ಥೆಯು ಡಿಜಟಲೀಕರಣವಾಗಿದ್ದು, ಆನ್‍ಲೈನ್ ಸದಸ್ಯತ್ವ, ಆನ್‍ಲೈನ್ ಸಭೆ, ಸಮಾರಂಭ, ವಿಚಾರ ಸಂಕಿರಣಗಳು, ಆನ್‍ಲೈನ್ ಪೇಮೆಂಟ್ ಹಾಗೂ ಆಫ್ ಲೈನ್ ಕಾರ್ಯ ಚಟುವಟಿಕೆಗಳನ್ನು ನಿರಂತರವಾಗಿ ಸಮಾಜಮುಖಿಯಾಗಿ ನಡೆಸುತ್ತ ಬಂದಿದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ದೊಡ್ಡಣ್ಣ, ಸಮಾಜ ಸೇವಕ ಡಾ. ಶ್ರೀಧರ್ ಕುಮಾರ್ ತಿಪಟೂರು, ಪದ್ಮನಾಭ ಗೌಡ ಬೆಂಗಳೂರು, ಜಿ.ಡಿ.ನಂದಿನಿ ಮೋಹನ್‍ಕುಮಾರ್ ತುಮಕೂರು, ವೈದ್ಯ ಡಾ. ಟಿ.ಹೆಚ್.ಆಂಜನಪ್ಪ ಬೆಂಗಳೂರು, ತುಮಕೂರಿನ ದಿಲೀಪ್ ಕುಮಾರ್ ಅವರಿಗೆ “ರಾಜ್ಯಮಟ್ಟದ ಸಾಧನಾ ಪ್ರಶಸ್ತಿ” ನೀಡಿ ಗೌರವಿಸಲಾಗುವುದು.
ಡಿ. 29ರ ಕಾರ್ಯಕ್ರಮದ ವಿವರಗಳು
ಬೆಳಗ್ಗೆ 9.30ಕ್ಕೆ : ಗೀತಗಾಯನ
ಬೆಳಗ್ಗೆ 10ಕ್ಕೆ : ಮುಖ್ಯಮಂತ್ರಿಗಳಿಂದ ಕಾರ್ಯಕ್ರಮಕ್ಕೆ ಚಾಲನೆ
ಮಧ್ಯಾಹ್ನ 1ಕ್ಕೆ : ಜಾನಪದ ಗಾಯನ
ಮಧ್ಯಾಹ್ನ 2ಕ್ಕೆ : ರಾಜ್ಯಮಟ್ಟದ ವಿಚಾರಗೋಷ್ಠಿ
ಸಂಜೆ 4ಕ್ಕೆ : ರಾಜ್ಯಮಟ್ಟದ ಮಹಾ ಅಧಿವೇಶನ
ಸಂಜೆ 5ಕ್ಕೆ : ಸಮಾರೋಪ ಸಮಾರಂಭ
ಸಂಜೆ 7ಕ್ಕೆ : ಹಾಸ್ಯ ಸಂಜೆ
ವೈಜ್ಞಾನಿಕ ಸಮ್ಮೇಳನದ ಸರ್ವಾಧ್ಯಕ್ಷ : ವಿಜ್ಞಾನಿ ಡಾ. ಎ.ಎಸ್.ಕಿರಣ್‍ಕುಮಾರ್
ಅಧ್ಯಕ್ಷತೆ: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ರಾಜ್ಯಾಧ್ಯಕ್ಷ ಡಾ. ಹುಲಿಕಲ್ ನಟರಾಜ್