ಎತ್ತರ ಜಿಗಿತದಲ್ಲಿ 1.58 ದಾಖಲೆಯ ಇತಿಹಾಸ ನಿರ್ಮಿಸಿದ ಕ್ರೀಡಾ ಪ್ರತಿಭೆ.

 ಶಿವಮೊಗ್ಗ ನಗರದ ಪ್ರತಿಷ್ಠಿತ ಶ್ರೀಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ನ ಶರಾವತಿ ನಗರದ ಶ್ರೀ ಆದಿಚುಂಚನಗಿರಿ ಸಂಯುಕ್ತ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ೧೦ನೇ ತರಗತಿಯಲ್ಲಿ ಓದುತ್ತಿರುವ   ಗೌತಮಿಗೌಡ ಎತ್ತರ ಜಿಗಿತದಲ್ಲಿ ಉತ್ತಮ ಸಾಧನೆ ಮಾಡಿರುವ ಪ್ರತಿಭೆ. 

2022 - 23 ನೇ  ಸಾರ್ವಜನಿಕ ಶಿಕ್ಷಣ ಇಲಾಖೆ, ಮೈಸೂರು ಇವರ ಆಶ್ರಯದಲ್ಲಿ ಆಯೋಜಿಸಲಾಗಿದ್ದ,ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಪೆಬ್ರವರಿ 19 ರಿಂದ 22 ರ ವರೆಗೆ  ರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಅತ್ಯುತ್ತಮ ಆಟದ ಪ್ರದರ್ಶನ ನೀಡಿ. 17 ವರ್ಷ ವಯೋಮಿತಿ ಒಳಗಿನ ವಿಭಾಗದ ಎತ್ತರ ಜಿಗಿತದಲ್ಲಿ 1.58 ದಾಖಲೆಯ  ಇತಿಹಾಸ ನಿರ್ಮಿಸಿ ,ಬಂಗಾರದ ಪದಕ ಮುಡಿಗೇರಿಸಿಕೊಂಡ  ಶಿವಮೊಗ್ಗದ  ಹೆಮ್ಮೆಯ ಪ್ರತಿಭಾನ್ವಿತ ಕ್ರೀಡಾಪಟು ಗೌತಮಿ ಗೌಡ.
  ಈ ಪ್ರತಿಭೆಯು ನಗರದ ಕೆ.ಯು.ವಿಷ್ಣುವರ್ಧನ ಮತ್ತು ಸುಷ್ಮಾ ಇವರ ದಂಪತಿಗಳ ಪುತ್ರಿಯಾಗಿರತ್ತಾಳೆ.

ಕ್ರೀಡೆಯ ಜೊತೆಗೆ ಓದಿನಲ್ಲೂ ಮುಂದಿದ್ದು,
ರಾಷ್ಟ್ರ ಮಟ್ಟದ ಎತ್ತರ ಜಿಗಿತದಲ್ಲಿ ಭಾಗವಹಿಸಲಿದ್ದಾರೆ.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ.ಶ್ರೀ.ಪ್ರಸನ್ನನಾಥ ಸ್ವಾಮೀಜಿಯವರು, ಆಡಳಿತ ಮಂಡಳಿ ಸದಸ್ಯರು ಹಾಗೂ ಪ್ರಾಂಶುಪಾಲರಾದ ಶ್ರೀಮತಿ ಹೇಮಾ ಎಸ್.ಆರ್., ಈ ಕ್ರೀಡಾಪ್ರತಿಭೆಯ ಸಾಧನೆಯನ್ನು ಮೆಚ್ಚಿ ದ್ದಾರೆ.

error: Content is protected !!