ಶಿವಮೊಗ್ಗ, ಜ.೧೪: ರಾಷ್ಟ್ರೀಯ ಯುವಜನೋತ್ಸವದ ಅಂಗವಾಗಿ ಆಯೋಜಿಸಲಾಗುತ್ತಿರುವ ಯೋಗಥಾನ್-2023′ ಸರ್ಕಾರದ ಕಾರ್ಯಕ್ರಮವಾಗಿದ್ದು, ಯೋಗವನ್ನು ಯುವಜನರಲ್ಲಿ ಪ್ರಚುರ ಪಡಿಸುವುದು ಹಾಗೂ ಗಿನ್ನಿಸ್ ದಾಖಲೆ ನಿರ್ಮಿಸುವುದು ಉದ್ದೇಶವಾಗಿರುತ್ತದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ. ಇಲಾಖೆ, ಆಯುಷ್ ಇಲಾಖೆ, ಆಯುಷ್‌ ಟಿ.ವಿ ಇವರ ಸಹಯೋಗದಲ್ಲಿ ‘ಯೋಗಥಾನ್-2023’ ಕಾರ್ಯಕ್ರಮವನ್ನು ಸಂಘಟಿಸಲಾಗುತ್ತಿದೆ.

ದಿನಾಂಕ:15-01-2023 ರಂದು ರಾಜ್ಯದ 35 ಕೇಂದ್ರಗಳಲ್ಲಿ ಏಕಕಾಲದಲ್ಲಿ ಸುಮಾರು 10 ಲಕ್ಷ ಜನರನ್ನು ಸೇರಿಸಿ: ದಾಖಲೆಯ ಯೋಗಾಭ್ಯಾಸ ಮಾಡುವ ಯೋಜನೆಯಾಗಿರುತ್ತದೆ. ಈಗಾಗಲೇ ಕಾರ್ಯಕ್ರಮದ ಯಶಸ್ವಿ ಸಂಘಟನೆಗಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳನ್ನೊಳಗೊಂಡಂತೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ.

ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ದಿನಾಂಕ:15-01-2023 ರಂದು ಸುಮಾರು 10000 ಯೋಗಾಸಕ್ತರಿಂದ ಹಾಗೂ ಯುವಜನರಿಂದ ಯೋಗ ಮಾಡುವ ಉದ್ದೇಶವಿದೆ, ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ವೈಯಕ್ತಿಕ ಅಥವಾ ಸಾಂಸ್ಥಿಕವಾಗಿ ನೊಂದಾಣಿ ಮಾಡಬೇಕಾಗಿರುತ್ತದೆ. ಸದರಿ ಕಾರ್ಯಕ್ರಮಕ್ಕಾಗಿ ರಚಿಸಲಾಗಿರುವ ವೆಬ್‌ಸೈಟ್‌ಗಳ ವಿವರ ಈ ಕೆಳಕಂಡಂತಿದೆ.

  1. ಮೊಬೈಲ್ ಅಪ್ಲಿಕೇಶನ್: yogathon2022
  2. ಆನ್‌ಲೈನ್ ಯುವ ನೋಂದಣಿಗಾಗಿ: register@yogathon2022.com 3. darah: info@yogathon2022.com

ಶಿವಮೊಗ್ಗ ನಗರದ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು ಹಾಗೂ ವಿವಿಧ ಇಲಾಖೆಗಳ ಅಡಿಯಲ್ಲಿ ಬರುವ ವಸತಿ ನಿಲಯಗಳಿಂದ ಹಾಗೂ ಯೋಗಾಸಕ್ತರು ಮತ್ತು ಯೋಗ ಸಂಸ್ಥೆಗಳಿಂದ ಭಾಗವಹಿಸುವವರ ಪಟ್ಟಿ ತಯಾರಿಸಿದ್ದು, ನೊಂದಾಯಿತರಾದ ಪ್ರತಿಯೊಬ್ಬರಿಗೆ ಮೊಬೈಲ್‌ನಲ್ಲಿ ಪ್ರತ್ಯೇಕವಾದ | ಸಾಂಸ್ಥಿಕವಾದ QR Code ನ್ನು ನೀಡಲಾಗಿದೆ. ಕ್ರೀಡಾಂಗಣಕ್ಕೆ ಆಗಮಿಸುವ ಸಮಯದಲ್ಲಿ QR Code ನ್ನು Scan ಮಾಡಿ ಒಳಗೆ ಬಿಡಲಾಗುವುದು.
ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಬಸ್‌ ವ್ಯವಸ್ಥೆ, ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರಿಗೂ ಬೆಳಗಿನ ಉಪಹಾರ ಹಾಗೂ ನೊಂದಣಿಯಾಗಿ ಭಾಗವಹಿಸುವ ಎಲ್ಲರಿಗೂ ಗಿನ್ನಿಸ್ ದಾಖಲೆಯ ಸಮಾ0 ಪತ್ರವನ್ನು ಗಿನ್ನಿಸ್‌ ಸಂಸ್ಥೆಯವರಿಂದ ನೀಡಲಾಗುವುದು ಸ್ಥಳಿಯ ಯೋಗ ಕೇಂದ್ರಗಳು ಎಲ್ಲಾ ಸದಸ್ಯರನ್ನೊಳಗೊಂಡ, ಶಿವಮೊಗ್ಗೆಯಲ್ಲಿ ಆರೋಗ್ಯಯುಕ್ತ ಪರಿಸರವನ್ನು ನಿರ್ಮಿಸಲು ಯೋಗದ ಮಹತ್ವ ಸಾರುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಜಿಲ್ಲಾಡಳಿತದಿಂದ ಅತ್ಯಂತ ಯಶಸ್ವಿಯಾಗಿ ಸಂಘಟಿಸಲಾಗುತ್ತಿದೆ.

ನೆಹರೂ ಕ್ರೀಡಾಂಗಣದ ಹಿಂಭಾಗದಲ್ಲಿರುವ ಒಳಾಂಗಣ ಕ್ರೀಡಾಂಗಣದ ಪ್ರವೇಶ ದ್ವಾರ ಎಲ್ಲರಿಗೂ ಆಗಮನದ ದ್ವಾರವಾಗಿರುತ್ತದೆ. ಸುಯಾಗಿ ಬೆಳಗ್ಗೆ 6.00 ಘಂಟೆಗೆ ಯೋಗಾನ್‌ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರೂ ಪ್ರವೇಶ ದ್ವಾರದಲ್ಲಿ QR Code ನ್ನು Scan ಮಾಡಿ ಒಳಗೆ ಬರಬೇಕಾಗಿರುತ್ತದೆ. ಕಾರ್ಯಕ್ರಮ ಬೆಳಗ್ಗೆ 6,00 ರಿಂದ 900ರ ವರೆಗೆ ನಡೆಯಲಿದೆ, ಈ ಕಾರ್ಯಕ್ರಮವು ಆಯುಷ್ ಟಿವಿ ಯಲ್ಲಿ ನೇರ ಪ್ರಸಾರವಾಗಲಿದೆ ಎಂದು ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ತಿಳಿಸಿದ್ದಾರೆ.

error: Content is protected !!