ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರನ ಮುಖ್ಯ ಆವರಣದಲ್ಲಿ ದಿನಾಂಕ 05-11-2022 ರಿಂದ 07-11-2022 ರವರೆಗೆ ನಡೆದ “ಕಲಾಕಾರಂಜಿ” 16ನೇ ಅಂತರ-ಮಹಾವಿದ್ಯಾಲಯಗಳ ಯುವಜನೋತ್ಸವದಲ್ಲಿ ಪಶುವೈದ್ಯಕೀಯ ಮಹಾವಿದ್ಯಾಲಯ ಶಿವಮೊಗ್ಗದ 22 ವಿದ್ಯಾರ್ಥಿಗಳ ತಂಡ 21 ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ದೇಶಭಕ್ತಿಗೀತೆ, ರಸಪ್ರಶ್ನೆ, ತೇಪೆಚಿತ್ರ, ಭಿತ್ತಿಪತ್ರ, ಏಕಪಾತ್ರಾಭಿನಯ, ವ್ಯಂಗ್ಯಚಿತ್ರ, ಮಣ್ಣಿನಾಕೃತಿ, ರಂಗೋಲಿ, ಜನಪದ ನೃತ್ಯ (ಡೊಳ್ಳು ಕುಣಿತ), ಕನ್ನಡ ಹಾಗೂ ಇಂಗ್ಲೀಷ್‍ನಲ್ಲಿ ಚರ್ಚೆ, ಆಶು ಭಾಷಣ, ಭಾಷಣ ಸೇರಿದಂತೆ 14 ಸ್ಪರ್ಧೆಗಳಲ್ಲಿ ಪದಕಗಳನ್ನು ಜಯಿಸುವುದರ ಮೂಲಕ “ಸಮಗ್ರ ಚಾಂಪಿಯನ್” ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಈ ಕುರಿತು ಹಮ್ಮಿಕೊಳ್ಳಲಾದ ಅಭಿನಂದನಾ ಕಾರ್ಯಕ್ರಮದಲ್ಲಿ ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗದ ಡೀನ್ ರವರಾದ ಡಾ. ಎನ್. ಪ್ರಕಾಶ್‍ರವರು “ವಿದ್ಯಾಭ್ಯಾಸದ ಜೊತೆಗೆ ಸಾಂಸ್ಕøತಿಕ ಹಾಗೂ ಕಲಾ ಚಟುವಟಿಕೆಗಳು ಹುಮ್ಮಸ್ಸು ನೀಡುವುದರೊಂದಿಗೆ ಹೆಚ್ಚಿನ ಯಶಸ್ಸು ಪಡೆಯಲು ಸಾಧ್ಯವಾಗುತ್ತವೆ” ಎಂದು ಅಭಿಪ್ರಾಯಪಟ್ಟರು. ಇವರು ಸ್ಪರ್ಧಿಗಳು, ತಂಡದ ನಿರ್ವಾಹಕರಾದ ಡಾ. ಮಾಲತೇಶ ಡಿ.ಎಸ್. ಮತ್ತು ಡಾ. ಭರತ್‍ಭೂಷಣ್ ಎಮ್. ಹಾಗೂ ತಂಡದ ಮಾರ್ಗದರ್ಶಕರಾದ ಡಾ. ಪವನ್ ಎಮ್. ಇವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಲಹೆಗಾರರಾದ ಡಾ. ಸತೀಶ್ ಜಿ.ಎಮ್. ಮತ್ತು ಡಾ. ಲಕ್ಷ್ಮಿಶ್ರೀ ಕೆ.ಟಿ. ಹಾಗೂ ಮಹಾವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವೃಂದ ಉಪಸ್ಥಿತರಿದ್ದು, “ಸಮಗ್ರ ಚಾಂಪಿಯನ್ ರೋಲಿಂಗ್ ಟ್ರೋಫಿಯನ್ನು” ಆಕರ್ಷಕ ಡೊಳ್ಳು ಕುಣಿತ ನೃತ್ಯದ ಮೆರವಣಿಗೆಯೊಂದಿಗೆ ಮಹಾವಿದ್ಯಾಲಯಕ್ಕೆ ಬರಮಾಡಿಕೊಳ್ಳಲಾಯಿತು. ಈ ತಂಡದಿಂದ ರಾಷ್ಟ್ರ ಮಟ್ಟದ ಅಂತರ ವಿಶ್ವವಿದ್ಯಾಲಯಗಳ ಯುವಜನೋತ್ಸವಕ್ಕೆ 6 ಜನ ವಿದ್ಯಾರ್ಥಿಗಳಾದ ಹರೀಶ್ ಎಮ್. ಸಿರ್ಸಿ, ಕೃಷ್ಣ ಕೊಟ್ಟಾಳ, ಇಸ್ಮಾಯಿಲ್ ಮಿರ್ಜಾನಾಯ್ಕ್, ಮೇಘನಾ.ವಿ., ಭರತ್.ಕೆ.ಟಿ ಹಾಗೂ ಶ್ರೇಷ್ಠ ಸಿ. ಆಯ್ಕೆಯಾಗಿರುತ್ತಾರೆ.

error: Content is protected !!