ಯಾವುದೇ ದೇಶದ ಆರ್ಥಿಕ ಶಿಸ್ತ£ಯಾವುದೇ ಒಂದು ದೇಶ ಸುಸ್ತಿರವಾಗಿ ಮತ್ತು ತನ್ನ ಆರ್ಥಿಕತೆಯ ಸಮನ್ವಯತೆಯನ್ನು ಕಾಪಾಡಿಕೊಳ್ಳಲು ಆ ದೇಶದ ಬಜೆಟ್ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಎಂದು ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತಅರ್ಥಶಾಸ್ತ್ರ ಪ್ರಾಧ್ಯಾಪಕರಾದ ಡಾ||ಟಿ.ಆರ್ ಮಂಜುನಾಥ್‍ರವರು ನುಡಿದರು. ಅವರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕ ಸಂಘದ ಆವರಣದಲ್ಲಿ ಶಿವಮೊಗ್ಗ ಎಕಾನಾಮಿಕ್ಸ್ ಫೋರಂ ಹಾಗೂ ಡಿ.ವಿ.ಎಸ್ ಸಂಜೆ ಕಾಲೇಜ್ ಮತ್ತು ವಾಣಿಜ್ಯ ಕೈಗಾರಿಕ ಸಂಘದ ಸಂಯುಕ್ತ ಆಶ್ರಯದಲ್ಲಿ “ಕೇಂದ್ರ ಬಜೆಟ್-2019” ಒಂದು ವಿಶ್ಲೇಷಣೆ ಕಾರ್ಯಕ್ರಮದ ಮುಖ್ಯ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದರು.

ಇಂದಿನ ಈ ಬಜೆಟ್ ಮದ್ಯಂತರ ಬಜೆಟ್ ಆಗಿದೆ. ಚುನಾವಣಾ ಸಮಯದಲ್ಲಿ ಬಂದಂತಹ ಎಲ್ಲಾ ಬಜೆಟ್ ಗಳು ಜನಸ್ನೇಹಿ ಆಗಿರುತ್ತವೆ. ಈ ಬಜೆಟ್‍ನ್ನು ಮುಂದೆ ಬರುವ ಸರ್ಕಾರ ಪುನಃ ಅನುಮೋದಿಸಬೇಕಾಗುತ್ತದೆ. ಇಂದಿನ ಈ ಬಜೆಟ್‍ನಲ್ಲಿ ಸಾಲ ಮನ್ನಾದಿಂದ 25 ಲಕ್ಷಜನ ಅನರ್ಹರು ಲಾಭ ಪಡೆದಿದ್ದಾರೆ. ಅಲ್ಲದೇ ರೈತರ ಖಾತೆಗೆ ನೇರವಾಗಿ 6000ರೂ.ಗಳನ್ನು ಹಣ ಸಂದಾಯ ಮಾಡಲು ತೀರ್ಮಾನಿಸಲಾಗಿದೆ. ರೈತ ಸಂಘಗಳಿಂದ ಈ ವಿಚಾರದಲ್ಲಿ ಸಾಕಷ್ಟು ಟೀಕೆ ಬಂದಿದೆ. ಆರ್ಥಿಕ ಶಿಸ್ತನ್ನು ಕಾಪಾಡುವ ಸಂಧರ್ಭದಲ್ಲಿ ಈ ರೀತಿಯ ನೇರ ಲಾಭಗಳು ಬಜೆಟ್‍ನ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಈ ಬಜೆಟ್ ನಲ್ಲಿ ಮುಂದಿನ 5 ವರ್ಷಗಳಲ್ಲಿ 1 ಲಕ್ಷ ಹಳ್ಳಿಗಳನ್ನು ಡಿಜಿಟಲ್ ವ್ಯವಸ್ಥೆ ಮಾಡಲು ತೀರ್ಮಾನಿಸಿದೆ.

ಇದೇ ಸಂಧರ್ಭದಲ್ಲಿ ವಾಣಿಜ್ಯ ಮತ್ತು ಕೈಗರಿಕಾ ಸಂಘದ ತೆರಿಗೆ ಸಲಹಾ ಸಮಿತಿಯ ಅಧ್ಯಕ್ಷರು ಹಾಗೂ ಇಂದಿನ ಸಭೆಯ ಸಮನ್ವಯಕಾರರು ಆದ ಯು. ಮಧುಸೂದನ್ ಐತಾಳ್ ಅವರು ಮಾತನಾಡುತ್ತಾ ಬಜೆಟ್‍ನಲ್ಲಿರು ವ ತೆರಿಗಾ ಸುಧಾರಣೆಯು ಸಣ್ಣ ಹಾಗೂ ಮಧ್ಯಮ ವರ್ಗದ ಉದ್ಯೋಗಿಗಳಿಗೆ ಬಹಳಷ್ಟು ಆಶಾದಾಯಕವಾಗಿದ್ದು ಸಾಕಷ್ಟು ಪ್ರೋತ್ಸಾಹದಾಯಕವಾಗಿದೆ ಹಾಗೂ ಒಟ್ಟಾರೆ ಬಜೆಟ್‍ನಲ್ಲಿ ಜನಪ್ರಿಯತೆಯನ್ನು ಪ್ರತಿಪಾದಿಸುವ ದೂರದೃಷ್ಟಿಯನ್ನು ಹೊರತುಪಡಿಸಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು. ಪೂರ್ತಿ ಪ್ರಮಾಣದಲ್ಲಿ ಉದ್ಯೋಗಸೃಷ್ಟಿಸುವಲ್ಲಿ ಹಾಗೂ ಹಿಂದಿನ ಬಜೆಟ್‍ನ ಪ್ರಗತಿಯನ್ನು ಪ್ರತಿಪಾದಿಸುವಲ್ಲಿ ಸರ್ಕಾರದ ನಿಲುವು ಇನ್ನಷ್ಟು ಸದೃಢವಾಗಿರಬೇಕೆನ್ನುವ ನಿಲುವನ್ನು ವ್ಯಕ್ತಪಡಿಸಿದರು.ಈ ಬಜೆಟ್‍ನಲ್ಲಿ ಕಾರ್ಮಿಕರಿಗೆ ಸಾಕಷ್ಟು ಪ್ರೋತ್ಸಹಾದಾಯಕ ಅಂಶಗಳಿರುವುದನ್ನು ವ್ಯಕ್ತಪಡಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಜೆ.ಆರ್ ವಾಸುದೇವ್‍ಅವರು ವಹಿಸಿ ಇಂದಿನ ಬಜೆಟ್ ಸಾಕಷ್ಟು ಜನಪಯೋಗಿ ಕಾರ್ಯಕ್ರಮಗಳನ್ನು ಹಾಗೂ ಆದಾಯ ತೆರಿಗೆಯಲ್ಲಿ ವಿಶೇಷ ಬದಲಾವಣೆ ಮತ್ತು ಹತ್ತು-ಹಲವಾರು ಸಾರ್ವಜನಿಕ ಮತ್ತು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ನುಡಿದರು.

ವಿಶ್ಲೇಷಣೆ ಕಾರ್ಯಕ್ರಮದಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಜಿ.ವಿಜಯ್‍ಕುಮಾರ್ ಉಪಾಧ್ಯಕ್ಷರಾದ.ಎಸ್.ಎಸ್ ಉದಯಕುಮಾರ್, ಕಾರ್ಯದರ್ಶಿಗಳಾದ ಗೋಪಿನಾಥ್, ಬಿ.ಆರ್ ಸಂತೋಷ್, ನಿರ್ದೇಶಕರಾದ ವಸಂತ್ ಹೋಬಳಿದಾರ್, ಖಜಾಂಚಿ.ಜಿ.ಎನ್ ಪ್ರಕಾಶ್, ಮಾಜಿ ಅಧ್ಯಕ್ಷರಾದಂತಹ ಭಾರದ್ವಜ್‍ರವರು, ಎಕನಾಮಿಕ್ಸ್ ಫೋರಂನ ಫ್ರೋ.ಸತ್ಯನಾರಾಯಣ್ ಡಾ||ಎಂ.ವೆಂಕಟೇಶ್ ,ಉಜನಪ್ಪ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!