ಶಿವಮೊಗ್ಗ, ಜೂನ್ 01 : ಕರ್ನಾಟಕ ಸರ್ಕಾರ ಸ್ಥಾಪಿಸಿರುವ ಹಂಪಿ ಕನ್ನಡ ವಿವಿಯ ಮಾನ್ಯತೆ ಪಡೆದಿರುವ ಮೈಸೂರು ರಂಗಾಯಣದ ಭಾರತೀಯ ರಂಗಶಿಕ್ಷಣ ಕೇಂದ್ರ “ರಂಗ ಶಾಲೆ”ಯಲ್ಲಿ ಪ್ರಸಕ್ತ ಸಾಲಿಗೆ ಒಂದು ವರ್ಷದ ರಂಗ ಶಿಕ್ಷಣ ಡಿಪ್ಲೊಮಾ ಕೋರ್ಸ್ಗೆ ದ್ವಿತೀಯ ಪಿಯುಸಿ ಪಾಸಾಗಿರುವ 18 ರಿಂದ 28 ವರ್ಷ ವಯೋಮಿತಿಯುಳ್ಳ ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಆಸಕ್ತ ವಿದ್ಯಾರ್ಥಿಗಳು ನಿಗಧಿತ ನಮೂನೆ ಅರ್ಜಿಯನ್ನು ರಂಗಾಯಣದ ವೆಬ್ಸೈಟ್ www.rangayana.org ನಿಂದ ಡೌನ್ಲೋಡ್ ಮಾಡಿಕೊಂಡು ಅಥವಾ ರಂಗಾಯಣದ ಕಚೇರಿಯಿಂದ ಪಡೆದು, ಭರ್ತಿ ಮಾಡಿ ಅರ್ಜಿಯೊಂದಿಗೆ ಅರ್ಜಿ ಶುಲ್ಕ (ಸಾ.ವ. ರೂ. 100/- ಮತ್ತು ಪ.ಜಾ/ಪ.ವ ಮತ್ತು ಪ್ರವರ್ಗ-1 -ರೂ. 50/-) ಡಿ.ಡಿಯನ್ನು ಜಂಟಿ ನಿರ್ದೇಶಕರು, ರಂಗಾಯಣ, ಕಲಾಮಂದಿರ ಆವರಣ, ವಿನೋಬಾರಸ್ತೆ, ಮೈಸೂರು-570005 ಇವರ ಹೆಸರಿನಲ್ಲಿ ಪಡೆದು ಇದೇ ವಿಳಾಸಕ್ಕೆ ಸ್ಪೀಡ್ ಪೋಸ್ಟ್ ಅಥವಾ ಖುದ್ದಾಗಿ ಜೂ. 10ರೊಳಗಾಗಿ ಸಲ್ಲಿಸುವುದು.
ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಚಿತ ವಸತಿ, ಮಾಹೆಯಾನ ರೂ. 3,000/- ವಿದ್ಯಾರ್ಥಿವೇತನ ಹಾಗೂ ಉಟೋಪಚಾರಕ್ಕಾಗಿ ಮಾಹೆಯಾನ ರೂ. 2,000/-ಗಳನ್ನು ನೀಡಲಾಗುವುದು.
ಜೂ. 22 ಮತ್ತು 23 ರಂದು ರಂಗಾಯಣದ ಆವರಣದಲ್ಲಿ ಸಂದರ್ಶನ ನಡೆಸಲಾಗುತ್ತಿದ್ದು, ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗುವಂತೆ ರಂಗಾಯಣದ ಜಂಟಿ ನಿರ್ದೇಶಕರು ತಿಳಿಸಿರುತ್ತಾರೆ.
ಮಾಹಿತಿಗಾಗಿ ದೂ. ಸಂ.: 0821-2512639/222354/9964599929/ 8971930958 ಗಳನ್ನು ಸಂಪರ್ಕಿಸುವುದು.