ಶಿವಮೊಗ್ಗ, ಸೆಪ್ಟೆಂಬರ್- 23: ತೋಟಗಾರಿಕೆ ಇಲಾಖೆಯು ಅಡಿಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿ 2019ರ ಸಾಲಿನ ತೋಟಗಾರಿಕೆ ಮಿಷನ್ ಯೋಜನೆಯಡಿ ಮೈಲುತುತ್ತ ಖರೀದಿಸಲು ಎರಡನೇ ಬಾರಿ ಸಹಾಯಧನ ನೀಡಲು ಮುಂದಾಗಿದೆ.
ಹೆಚ್ಚಿನ ಪ್ರಮಾಣದ ಮಳೆಯ ಕಾರಣದಿಂದ ಅಡಿಕೆ ಬೆಳೆಗೆ ಕೋಳೆರೋಗದ ಪ್ರಮಾಣ ಹೆಚ್ಚಿದೆ. ಈಗಾಗಲೇ ಎರಡರಿಂದ ಮೂರು ಬಾರಿ ಬೋರ್ಡೋ ದ್ರಾವಣ ಸಿಂಪರಣೆ ಮಾಡಲಾಗಿದೆ. ಆದರೂ ಸಹ ನಿಯಂತ್ರಣಕ್ಕೆ ಬಾರದ ಕಾರಣ ಮತ್ತೊಮ್ಮೆ ಸಿಂಪರಣೆ ಮಾಡುವಂತೆ ಇಲಾಖೆ ತಿಳಿಸಿದ್ದು ಇದಕ್ಕೆ ಪೂರಕವಾಗಿ ಮತ್ತೊಮ್ಮೆ ಸಹಾಯಧನವನ್ನು ನೀಡಲು ಮುಂದಾಗಿದೆ.
ಮೈಲುತುತ್ತ ಖರೀದಿಸಿದ ಬಿಲ್ಲುಗಳನ್ನು ಆಯಾ ತಾಲ್ಲೂಕಿನ ತೋಟಗಾರಿಕೆ ಇಲಾಖೆಯ ನಿರ್ದೇಶಕರಿಗೆ ಸಲ್ಲಿಸಿ ಸಹಾಯಧನ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರ ಅಥವಾ ತೋಟಗಾರಿಕೆ ಇಲಾಖೆಯ ಕಛೇರಿಯಿಂದ ಪಡೆಯಬಹುದಾಗಿದೆ. ಈಗಾಗಲೇ ಸಹಾಯಧನ ಪಡೆದವರು ಸಹ ಮತ್ತೊಮ್ಮೆ ಸಹಾಯಧನ ಪಡೆಯಲು ಅರ್ಹರು ಎಂದು ತೋಟಗಾರಿಕೆ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಿದೆ.

error: Content is protected !!