ಮಾನವನ ಮತ್ತು ದನಕರುಗಳ ಸಂಖ್ಯೆ ಹೆಚ್ಚಾದಂತೆ ಅರಣ್ಯ ಸಂಪನ್ಮೂಲಗಳ (ಉದಾ: ಗಿಡಮರಗಳ) ಮೇಲೆ ಒತ್ತಡ ಹೆಚ್ಚುತ್ತಲಿದೆ. ಬರಗಾಲ, ಅಸಮರ್ಪಕ ಮಳೆ, ಅತೀವೃಷ್ಟಿ ಮುಂತಾದವುಗಳಿಂದ ಮೇವಿನ ಕೊರತೆಯು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲಿದೆ. ಮಳೆಗಾಲವನ್ನು ಹೊರತುಪಡಿಸಿ, ಉಳಿದ ದಿನಗಳಲ್ಲಿ ಮೇವನ್ನು ರಾಸುಗಳಿಗೆ ಒದಗಿಸುವುದು ದುಸ್ತರವಾಗಿದೆ. ಈ ಪರಿಸ್ಥಿತಿಯನ್ನು ಸುಧಾರಿಸಲು ರೈತರು, ಮುಖ್ಯವಾಗಿ ಸಣ್ಣ ಮತ್ತು ಅತಿಸಣ್ಣ ರೈತರು ಗಿಡಮರಗಳನ್ನು ಬೆಳೆಸಿ ತಮ್ಮ ದಿನನಿತ್ಯದ ಅಗತ್ಯಗಳನ್ನು ಪೂರೈಸಿಕೊಳ್ಳಬೇಕು. ಇದರಿಂದ ಅರಣ್ಯಗಳ ಮೇಲಿನ ಒತ್ತಡ ಕಡಿಮೆಯÁಗುವುದಲ್ಲದೆ, ನಮ್ಮ ಕಾಡುಗಳು ವೃದ್ಧಿಯಾಗಿ ಸಮೃದ್ಧಿಯನ್ನು ತರುತ್ತದೆ. ದಿನನಿತ್ಯದ ಬಳಕೆಗೆ ಸೌದೆ, ದನಕರುಗಳಿಗೆ ಮೇವು, ಮನೆಕಟ್ಟಲು ಮರಮುಟ್ಟು, ವ್ಯವಸಾಯೋಪಕರಣಕ್ಕೆ ಹೀಗೆ ಹತ್ತು ಹಲವಾರು ರೀತಿಯಲ್ಲಿ ಮÁನವ ಮರಗಿಡಗಳನ್ನು ಅವಲಂಬಿಸಿದ್ದಾನೆ. ಆದ್ದರಿಂದ ಕೃಷಿ ಅರಣ್ಯ ಪದ್ಧತಿಗಳಲ್ಲಿ ಇಂತಹ ಗಿಡಮರಗಳನ್ನು ಬೆಳೆಸುವುದರಿಂದ ಪರಿಸರ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯಾಗುವುದಲ್ಲದೇ, ರೈತರು ತಮ್ಮ ದಿನನಿತ್ಯದ ಅವಶ್ಯಕತೆಗಳನ್ನು ಪೂರೈಸಿಕೊಳ್ಳಬಹುದು. ಮೇವಿನ ಗಿಡಮರಗಳು ವರ್ಷಾದ್ಯಂತ ಬಿನ್ನರೀತಿಯ ರುಚಿ ಮತ್ತು ಪೋಷಕಾಂಶಗಳನ್ನು ಪಶುಗಳಿಗೆ ನೀಡುವದಲ್ಲದೇ, ಇನ್ನಿತರ ಪರಿಸರ ಸಂಬಂದಿs ಲಾಭಗಳನ್ನು ಸಹ ಕೊಡಬಲ್ಲವು. ಪಶುಪಾಲನೆಗೆ ಅತ್ಯಂತ ಪೂರಕವಾಗಿ ಗ್ರಾಮೀಣ ಪರಿಸರಕ್ಕೂ ಲಾಭದಾಯಕವಾಗಬಲ್ಲಂತಹ ಕೆಲವು ಮೇವಿನ ಗಿಡಮರಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ.
೧. ಚೊಗಚೆ
ಅತಿ ಚಿಕ್ಕದಾದ, ತೀವ್ರವಾಗಿ ಬೆಳೆಯಬಲ್ಲಂಥ, ವಾತಾವರಣದ ಸಾರಜನಕವನ್ನು ಮಣ್ಣಿನಲ್ಲಿ ಭದ್ರಪಡಿಸಬಲ್ಲಂಥ ಉತ್ತಮ ಮೇವಿನ ಮರ. ಇದನ್ನು ಮನೆಗಳ ಆವರಣಗಳಲ್ಲಿ ಬೆಳೆಸಿ ಹೂ, ಕಾಯಿಗಳನ್ನು ತರಕಾರಿಯಾಗಿಯೂ, ಎಲೆಗಳನ್ನು ಮೇವಿಗಾಗಿಯೂ ಬಳಸಬಹುದು. ಕಡಿದ ಬುಡಿಕೆಯಿಂದಲೂ ಮತ್ತು ಕಡಿದ ಕಾಂಡಗಳಿಂದಲೂ ಮರ ಬೆಳೆಯಬಲ್ಲದು. ಇದು ಎಲ್ಲ ತರಹದ ಮಣ್ಣಿನಲ್ಲಿಯೂ ಬೆಳೆಯುತ್ತದೆ. ಅಲ್ಲದೇ ಮಣ್ಣಿನ ಗುಣಮಟ್ಟವನ್ನೂ ಸಹ ಬಹುವಾಗಿ ಸುಧಾರಿಸಬಲ್ಲದು.
ಬಿತ್ತನೆಗೆ ಬೇಕಾಗುವ ಬೇಸಾಯ ಸಾಮಗ್ರಿಗಳು ಪ್ರತಿಹೆಕ್ಟೇರಿಗೆ
ಬೀಜ 4-6 ಕಿ. ಗ್ರಾಂ / ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ 2-3 ಟನ್
ರಾಸಾಯನಿಕ ರಸಗೊಬ್ಬರಗಳು / ರಂಜಕ 50 ಕಿ. ಗ್ರಾಂ / ಪೋಟ್ಯಾಷ್ 25 ಕಿ. ಗ್ರಾಂ
ಬೇಸಾಯ ಕ್ರಮಗಳು
ಇದನ್ನು ನೇರವಾಗಿ ಬಿತ್ತಿ ಅಥವಾ ಸಸಿಗಳನ್ನು ನೆಟ್ಟು ಬೆಳೆಸಬಹುದು. ಯಾವುದೇ ಬೀಜೋಪಚಾರದ ಅವಶ್ಯಕತೆಯಿಲ್ಲ. ಬೀಜಗಳನ್ನು ನೇರವಾಗಿ ಭೂಮಿಯಲ್ಲಿ ಬಿತ್ತಬಹುದು (ಜೂನ್‍ನಲ್ಲಿ). ಸಾಧ್ಯವಾದರೆ ತಿಂಗಳಿಗೊಮ್ಮೆಯಂತೆ ಅವಶ್ಯಕತೆಯಂತೆ ನೀರು ಉಣಿಸಬಹುದು. ಸಸ್ಯಪಾಲನಾಲಯದಲ್ಲಿ (ನರ್ಸರಿ) ಮೇ ತಿಂಗಳಿನಲ್ಲಿ ಬೆಳೆಸಿದ ಸಸಿಗಳನ್ನು ಜೂನ್-ಜುಲೈನಲ್ಲಿ ನೆಡಬಹುದು. ಉತ್ತಮ ಫಲಿತಾಂಶಗಳಿಗಾಗಿ ಫಾಲಿಥೀನ್ ಚೀಲಗಳನ್ನು ಉಪಯೋಗಿಸಿವುದು ಉತ್ತಮ.
ಈ ಮರವನ್ನು ಮೇವಿಗಾಗಿ ಬೆಳೆಯುವುದಾದರೆ 1 ಮಿ x 1 ಮೀ. ಅಂತರದಲ್ಲಿ ಬೀಜ ಬಿತ್ತಬೇಕು. ಬೆಳೆಯ ಸುತ್ತಮುತ್ತಲೂ ಅಥವಾ ನೀರಿನ ಕಾಲುವೆಯ ಬದಿಯಲ್ಲಿ 1 ಮೀಟರ್ ಅಂತರದಲ್ಲಿ ಬೆಳೆದು, ಮೇಲಿಂದ ಮೇಲೆ ಕಟಾವು ಮಾಡಬೇಕು.
ಮೇವು
ಇದರ ಎಲೆ ಮತ್ತು ಕಾಯಿಗಳು ಉತ್ತಮ ಮೇವಾಗಬಲ್ಲವು. ಶೇ. 36 ರಷ್ಟು ಕಚ್ಚಾ ಸಸಾರಜನಕದ ಅಂಶ ಇದೆ. ಕೇವಲ 4 ತಿಂಗಳುಗಳಲ್ಲಿ ಮೇವಿಗಾಗಿ ತೆಗೆಯಬಹುದು. ಇದು ಸುಮಾರು 8-9 ಮೀಟರ್ ಎತ್ತರ ಬೆಳೆಯುವುದು. ಒಂದು ಮರದಿಂದ ವರ್ಷಕ್ಕೆ 8-10 ಕಿ. ಗ್ರಾಂ ಸೊಪ್ಪನ್ನು ಪಡೆಯಬಹುದು. ಇದನ್ನು ಒಣ/ ಹಸಿರು ಮೇವಾಗಿ ಬಳಸಬಹುದು.
೨. ಸೂಬಾಬುಲ್ (ಲ್ಯುಕೇನಾ ಲ್ಯುಕೊಸೆಫಲಾ)
ಈ ಮರವು ಅತಿ ಬೇಗನೆ ಬೆಳೆಯುತ್ತದೆ. ಸೂಬಾಬುಲ್ ಒಂದು ದ್ವಿದಳ ಬಹುವಾರ್ಷಿಕ ಬಹು ಉಪಯೋಗಿ ಮೇವಿನ ಬೆಳೆ. ಇದನ್ನು ಎಲ್ಲ ತರಹದ ಮಣ್ಣು ಮತ್ತು ಹವಾಮಾನದಲ್ಲಿ ಬೆಳೆಯಲು ಸಾಧ್ಯವಿರುವುದರಿಂದ ಇದು ರೈತರಲ್ಲಿ ಹೆಚ್ಚು ಜನಪ್ರಿಯವಾಗುತ್ತಲಿದೆ. ಇದು ಕಡಿಮೆ ಅವದಿsಯಲ್ಲಿ ಕಟಾವಿಗೆ ಬರುತ್ತದೆ ಮತ್ತು ಆಳವಾದ ಬೇರು ಹೊಂದಿರುವುದರಿಂದ ಒಂದು ವರ್ಷದ ನಂತರ ಇಳುವರಿ ಬರುತ್ತದೆ. ಇದು ಶೇ. 18-20 ರಷ್ಟು ಕಚ್ಚಾ ಸಸಾರಜನಕ ಹೊಂದಿದ್ದು, ಮೇವು ರುಚಿಕರವಾಗಿರುತ್ತದೆ. ಇದನ್ನು ಬದುಗಳ ಮೇಲೆಯೂ ಯಶಸ್ವಿಯಾಗಿ ಬೆಳೆಯಬಹುದು. ಮೇವಿನ ಗಿಡಗಳ ಸೊಪ್ಪು ರುಚಿಯಾಗಿದ್ದು, ಎಲ್ಲ ಪೋಷಕಾಂಷಗಳನ್ನು ಹೊಂದಿರುತ್ತದೆ.
ತಳಿಗಳು :ಕೆ-740,: ಕೆ-636, ಕೆ-67
ಬಿತ್ತನೆಗೆ ಬೇಕಾಗುವ ಬೇಸಾಯ ಸಾಮಗ್ರಿಗಳು ಪ್ರತಿಹೆಕ್ಟೇರಿಗೆ
ಬೀಜ 5-6 ಕಿ. ಗ್ರಾಂ / ಸಾವಯವ ಗೊಬ್ಬರ/ ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ 4-5 ಟನ್
ರಾಸಾಯನಿಕ ರಸಗೊಬ್ಬರಗಳು / ಸಾರಜನಕ :25 ಕಿ. ಗ್ರಾಂ / ರಂಜಕ :60 ಕಿ. ಗ್ರಾಂ
ಪೋಟ್ಯಾಷ್ :40 ಕಿ. ಗ್ರಾಂ
ಬೇಸಾಯ ಕ್ರಮಗಳು
ಈ ಮರದ ಬೀಜಗಳನ್ನು ಡಿಸೆಂಬರನಲ್ಲಿ ಸಂಗ್ರಹಿಸಬೇಕು. ಬೀಜದ ಮೇಲಿನ ಸಿಪ್ಪೆ ಬಹಳ ಗಟ್ಟಿಯಾಗಿರುವುದರಿಂದ ಬಿತ್ತನೆಗೆ ಮೊದಲು ಬೀಜಗಳನ್ನು ಬಿಸಿ ನೀರಿನಲ್ಲಿ ಒಂದು ರಾತ್ರಿ ನೆನಸಿಡಬೇಕು (ನೀರನ್ನು ಕುದಿಸಿ 5 ನಿಮಿಷಗಳವರೆಗೆ ಆರಿಸಿ ಬೀಜಗಳನ್ನು ನೆನಸಿಡಬೇಕು). ಉಬ್ಬಿದ ಬೀಜಗಳನ್ನು ಮಾತ್ಬಿರ ತ್ತನೆಗೆಉಪಯೋಗಿಸಿ. ಸೂಕ್ತ ರೈಜೋಬಿಯಂ ಲೇಪನ ಮಾಡಿ ಬೀಜಗಳನ್ನು ಸಸಿ ಮಡಿಗಳಲ್ಲಾಗಲೀ ಅಥವಾ ಹೊಲದಲ್ಲಿ ಬಿತ್ತನೆ ಮಾಡಬೇಕು
ಇಡಿಯಾಗಿ ಬೆಳೆಯುವದಾದರೆ ಕೊಟ್ಟಿಗೆ ಗೊಬ್ಬರವನ್ನು ಮಣ್ಣಿನಲ್ಲಿ ಬೆರೆಸಿ ಭೂಮಿಯನ್ನು ಒಳ್ಳೆಯ ಹದಕ್ಕೆ ತನ್ನಿರಿ. ಬೀಜಗಳನ್ನು 1 ಮೀ.ಸಾಲುಗಳಲ್ಲಿ ಬಿತ್ತಿರಿ. 40 ದಿವಸಗಳ ನಂತರ 30 ಸೆಂ. ಮೀ. ಗೆ ಒಂದು ಸಸಿಯನ್ನು ಇಟ್ಟು ಉಳಿದವುಗಳನ್ನು ಕಿತ್ತುಹಾಕಬೇಕು. ಸಸಿಗಳನ್ನು ಮಡಿಯಲ್ಲಿ ಬೆಳೆಸಿದ್ದರೆ, 4 ತಿಂಗಳ ನಂತರ ಸಸಿಗಳನ್ನು ನಾಟಿ ಮಾಡಿ. ಸಸಿಗಳನ್ನು ಹಚ್ಚಿದ ಎರಡು ತಿಂಗಳ ನಂತರ ಅಥವಾ ಬಿತ್ತಿದ ಆರು ತಿಂಗಳ ನಂತರ ಗಿಡಗಳನ್ನು 90 ಸೆಂ. ಮೀ. ಎತ್ತರಕ್ಕೆ ಕತ್ತರಿಸಿ. ಇದರಿಂದ ಹೆಚ್ಚಿನ ಟಿಸಳುಗಳು ಬರುವುದಲ್ಲದೇ, ಹೆಚ್ಚಿನ ಇಳುವರಿ ಕೂಡ ಬರುತ್ತದೆ. ಮುಂದಿನ ಕಟಾವುಗಳನ್ನು ಪ್ರತಿ 50 – 60 ದಿನಗಳಿಗೊಮ್ಮೆ ಮಾಡಿ ಗಿಡದ ಎತ್ತರವನ್ನು 90 ಸೆಂ. ಮೀ. ಗೆ ಸೀಮಿತಗೊಳಿಸಬೇಕು. ಬದುವಿನ ಮೇಲೆ ಬೆಳೆಯುವದಾದರೆ 1.5 ಮೀಟರ್ ಅಂತರದಲ್ಲಿ ಬೆಳೆದು 2.0 ಮೀಟರ್ ಎತ್ತರಕ್ಕೆ ಕಟಾವು ಮಾಡಬೇಕು.
ಮೇವಿನ ಇಳುವರಿ
ಎರಡನೆಯ ವರ್ಷ ಪ್ರತಿ ಹೆಕ್ಟೇರಿಗೆ 15-20 ಟನ್, ನಂತರದ ವರ್ಷಗಳಲ್ಲಿ 50-60 ಟನ್ ಹಸಿರು ಸೊಪ್ಪಿನ ಇಳುವರಿ ಬರುತ್ತದೆ.
ಸೂಚನೆ:ಈ ಮರದ ಎಲೆಗಳಲ್ಲಿ “ಮೈಮೋಸಿನ್” ಎಂಬ ರಾಸಾಯನಿಕ ಅಂಶ ಹೆಚ್ಚಾಗಿರುವುದರಿಂದ ಈ ಮೇವಿನ ಜೊತೆಗೆ ಇತರೇ ಹುಲ್ಲನ್ನು ಬೆರೆಸಿ ತಿನ್ನಿಸಬೇಕು. ಕುರಿಗಳಿಗೆ ತಿನ್ನಿಸಬಾರದು. ಇದನ್ನು ಇಡಿಯಾಗಿ ತಿನ್ನಿಸಬಾರದು.
೩. ಹಾಲವಾಣ
ಹಾಲಿವಾಣ ಮರವು ಒಂದು ಮುಖ್ಯವಾದ ಮೇವಿನ ಗಿಡವಾಗಿದ್ದು, ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಂಡು ಸಾರಜನಕವನ್ನು ಹೀರಿಕೊಳ್ಳುತ್ತದೆ. ಈ ಗಿಡವು ಯಾವಾಗಲೂ ಹಚ್ಚ ಹಸಿರಾಗಿರುತ್ತದೆ. ಇದು ನೀರಾವರಿ ಪ್ರದೇಶಗಳಲ್ಲಿ ಇಲ್ಲವೇ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಎಲ್ಲ ತರಹದ ಗುಣಧರ್ಮದ ಮಣ್ಣಿನಲ್ಲಿ ಬೆಳೆಯುತ್ತದೆ.
ಬಿತ್ತನೆಗೆ ಬೇಕಾಗುವ ಸಾಮಗ್ರಿಗಳು
ಬೀಜ : 4-5 ಕಿ. ಗ್ರಾಂ / ಗೊಬ್ಬರ : 1 ಟನ್
ರಸಗೊಬ್ಬರಗಳು : ಸಾರಜನಕ – 20 ಕಿ. ಗ್ರಾಂ / ರಂಜಕ – 30 ಕಿ. ಗ್ರಾಂ / ಪೊಟ್ಯಾಷ್ -20 ಕಿ. ಗ್ರಾಂ
ಬೇಸಾಯ ಕ್ರಮಗಳು
ಈ ಮರವನ್ನು ಬೀಜಗಳಿಂದ ಇಲ್ಲವೇ ಸಣ್ಣ ಕಾಂಡದ ತುಂಡುಗಳಿಂದ ಬೆಳೆಸಬಹುದು. ಬೀಜಗಳನ್ನು ಬಿತ್ತುವ ಪೂರ್ವದಲ್ಲಿ 12-15 ತಾಸು ನೆನಸಿ ಬಿತ್ತಿದರೆ ಬೇಗನೆ ಮೊಳಕೆಯೊಡೆಯುತ್ತವೆ. ಈ ಮರವನ್ನು ನೀರಿನ ಕಾಲುವೆಯ ಪಕ್ಕದಲ್ಲಿ 4 ಮೀಟರ್ ಅಂತರದಲ್ಲಿ ಬೆಳೆಯಬೇಕು. ಈ ಗಿಡವನ್ನು ಮೇವಿನ ಸಲುವಾಗಿ 4 ಮೀಟರ್ ಎತ್ತರದಲ್ಲಿ ಕಟಾವು ಮಾಡಬೇಕು.
ಮೇವು
ಇದರ ಮೇವು ಪೋಷಕಾಂಶಯುಕ್ತವಾಗಿದ್ದು, ಜಾನುವಾರುಗಳು ಇಷ್ಟ ಪಟ್ಟು ತಿನ್ನುತ್ತವೆ. ಒಂದು ಗಿಡದಿಂದ ನಾಲ್ಕು ವರ್ಷದ ಬಳಿಕ 8-10 ಕಿ. ಗ್ರಾಂ ಸೊಪ್ಪು ಪಡೆಯಬಹುದು.
೪.ನುಗ್ಗೆ
ನುಗ್ಗೆಯು ಅತ್ಯಂತ ವೇಗವಾಗಿ ಹಾಗೂ ಮುಕ್ತವಾಗಿ ಬೆಳೆಯುವ ಸಪೂರವಾದ ಮೇವಿನ ಮರವಾಗಿದೆ. ಇದು ಸಾಮಾನ್ಯವಾಗಿ 10 ಮೀ ಎತ್ತರ ಬೆಳೆಯುವುದರಿಂದ ಇದನ್ನು ಮಧ್ಯಮ ಗಾತ್ರದ ಮರವನ್ನಾಗಿ ಪರಿಗಣಿಸಲಾಗಿದೆ. ಬೇಸಾಯದಲ್ಲಿನ ನುಗ್ಗೆ ಬಹು ಬೇಗ ಬೆಳÉಯಬಲ್ಲದು. ಇದರ ಕಾಂಡದ ದಪ್ಪ 1.2 ಮೀ ರಿಂದ 1.5 ಮೀ ಇದ್ದು ಬೂದು ಬಣ್ಣದಾಗಿರುತ್ತದೆ. ನುಗ್ಗೆಯು ಕಡಿಮೆ ನಿರ್ವಹಣೆಯನ್ನು ಹೊಂದಿದ್ದು ದೀರ್ಘಾಯುವಾಗಿದೆ.
ಮಣ್ಣು ಹಾಗೂ ಹವಾಗುಣ :
ಕೆಂಪು ಹಾಗೂ ಮರಳು ಮಿಶ್ರಿತ ಗೋಡುಮಣ್ಣು. ಜಿಗಟು ಕಪ್ಪು ಮಣ್ಣು ಸೂಕ್ತವಿರುವುದಿಲ್ಲ.
ಒಣ ಹವೆಯ ಖುಷ್ಕಿ ಪ್ರದೇಶಗಳಲ್ಲಿ ಉತ್ತಮವಾಗಿ ಬೆಳೆಯುವುದು. ಗರಿಷ್ಠ ಎಲೆ ಹಾಗೂ ಬೀಜಗಳ ಬೆಳವಣಿಗೆಗೆ 25 ರಿಂದ 300 ಸೆ. ದೈನಂದಿನ ತಾಪಮಾನ ಹಾಗೂ ಸುಮಾರು 250 ರಿಂದ 300 ಮಿ. ಮೀ. ವಾರ್ಷಿಕ ಮಳೆಯ ಅಗತ್ಯವಿದೆ.
ಸಸಿ ಉತ್ಪಾದನೆ
ಪೂರ್ಣ ಬಲಿತು ಪಕ್ವಗೊಂಡು ಒಣಗಿದ ಕಾಯಿಗಳನ್ನು ಬಿಡಿಸಿ ಮಾಡಿದ ಗಟ್ಟಿ ಬೀಜಗಳನ್ನು ಮಾತ್ರ ಬಿತ್ತನೆಗೆ ತೆಗೆದುಕೊಳ್ಳಬೇಕು. ಬೀಜಗಳನ್ನು ಪಾಲೀಥೀನ ಚೀಲಗಳಲ್ಲಿ ಬಿತ್ತುವುದು ಒಳ್ಳೆಯದು. ಮೇಲ್ಮಣ್ಣು, ಮರಳು ಮತ್ತು ಕೊಳೆತ ತಿಪ್ಪೆ ಗೊಬ್ಬರಗಳನ್ನು ಬೆರೆಸಿ ಸಿದ್ಧಗೊಳಿಸಿದ ಮಿಶ್ರಣವನ್ನು ಚೀಲಗಳಿಗೆ ತುಂಬಿ ತಲಾ ಒಂದರಂತೆ ಬೀಜ ಊರಿ ನೀರು ಕೊಡುತ್ತಿದ್ದಲ್ಲಿ ಅವು 4-5 ದಿನಗಳಲ್ಲಿ ಮೊಳೆಕೆ ಒಡೆಯುತ್ತವೆ. ಸುಮಾರು ಒಂದು ತಿಂಗಳಲ್ಲಿ ಸಸಿಗಳು ನಾಟಿ ಮಾಡಲು ಸಿದ್ಧವಿರುತ್ತವೆ. ಸಸಿಗಳು ಬೆಳೆದು ಎರಡು ತಿಂಗಳಾದ ನಂತರ ಜೂನ್-ಜುಲೈ ತಿಂಗಳುಗಳಲ್ಲಿ ಸಸಿಗಳನ್ನು ನಾಟಿ ಮಾಡಬೇಕು. ಸಸಿಗಳಿಗೆ ಕಂಬಳಿಹುಳದ ಬಾಧೆಯನ್ನು ತಡೆಯಲು 2 ಮಿ. ಲೀ ಮೆಲಾಥಯಾನ್ 50 ಇ. ಸಿ. ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ನಾಟಿಕಾಲ: ಇದನ್ನು ಮುಖ್ಯವಾಗಿ ಅಲ್ಪ ಮಳೆ ಬೀಳುವ ಒಣ ಪ್ರದೇಶದಲ್ಲಿ ಬೆಳೆಯಲು ಬಹಳ ಸೂಕ್ತ. ಜೂನ್-ಜುಲೈ ತಿಂಗಳಲ್ಲಿ ನಾಟಿ ಮಾಡಬಹುದು.
ಬಿತ್ತನೆಗೆ ಬೇಕಾಗುವ ಬೇಸಾಯ ಸಾಮಗ್ರಿಗಳುಪ್ರತಿಹೆಕ್ಟೇರಿಗೆ
ಬೀಜ 250 ಗ್ರಾಂ ಬೀಜ / ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ 25 ಟನ್
ರಾಸಾಯನಿಕ ರಸಗೊಬ್ಬರಗಳು / ಸಾರಜನಕ 50 ಕಿ. ಗ್ರಾಂ / ರಂಜಕ 25 ಕಿ. ಗ್ರಾಂ
ಬೇಸಾಯ ಕ್ರಮ
ಒಂದು ಅಡಿ ಗುಣಿಗಳನ್ನು 3 ಮೀ. ಅಂತರದಲ್ಲಿ ತೆಗೆದು ಸಮಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಮತ್ತು ಮಣ್ಣು ಕೊಡಬೇಕು. ನಂತರ ಪ್ರತಿ ಗುಣಿಗೆ ಒಂದು ಸಸಿಯನ್ನು ನೆಡಬೇಕು. ಸಸಿ ಮಾಡದಿದ್ದಲ್ಲಿ ನೇರವಾಗಿ ಗುಣಿಗೆ 2 ಬೀಜಗಳನ್ನು ಹಾಕಬಹುದು. ಗುಣಿಯಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮತ್ತು ಇರುವೆ ಬಾಧೆಯನ್ನು ಹತೋಟಿ ಮಾಡಬೇಕು.
ಸಸ್ಯ ಸಂರಕ್ಷಣೆ
ನುಗ್ಗೆಯ ಪ್ರಾರಂಭಿಕ ಹಂತದಲ್ಲಿ ಕೊಳೆರೋಗ ಸಾಮಾನ್ಯ. ಇದರ ಹತೋಟಿಗೆ ನಾಟಿ ಮಾಡುವ ಸಂದರ್ಭದಲ್ಲಿ ಬ್ರಾಸಿಕಾಲ್/ಕ್ಯಾಪ್ಟಾನ್ ದ್ರಾವಣವನ್ನು ಸಸಿಯ ಸುತ್ತಲೂ ಮಣ್ಣಿಗೆ ಸೇರಿಸಬೇಕು. ಎಲೆ ತಿನ್ನುವ ಕಂಬಳಿ ಹುಳು ಎಲೆ ಹಾಗೂ ಕಾಂಡದ ತೊಗಟೆಯನ್ನು ತಿಂದು ಹಾಳುಮಾಡುವುದು. ಮೊಗ್ಗು ಕೊರಕ ಮೊಗ್ಗನ್ನು ಕೊರೆದು ತಿನ್ನುತ್ತದೆ. ಇವುಗಳ ಹತೋಟಿಗೆ ಎಲೆಯನ್ನು ಸೇವನೆಗೆ ಬಳಸುವ 15 ರಿಂದ 20 ದಿವಸಗಳ ಮೊದಲು ಶೇ. 1 ರ ಮೊನೋ ಕ್ರೋಟೊಪಾಸ್ ಸಿಂಪಡಿಸಬೇಕು.
ಕೊಯ್ಲು ಹಾಗೂ ಇಳುವರಿ
ನಾಟಿ ಮಾಡಿದ ಮೂರು-ನಾಲ್ಕು ವರ್ಷಗಳಲ್ಲಿ ಎತ್ತರವಾಗಿ ಬೆಳೆಯುವ ನುಗ್ಗೆಯ ಎತ್ತರವನ್ನು ಅವಶ್ಯಕತೆಗೆ ತಕ್ಕಂತೆ ಸೀಮಿತಗೊಳಿಸಬೇಕು. ಎಲೆ ತೋಟಗಳಲ್ಲಿನ 15 ರಿಂದ 20 ಅಡಿಗಳ ಅಂತರವಿಟ್ಟು ತುದಿಯನ್ನು ಕತ್ತರಿಸಿ, ಚಿಗುರು ಸೊಪ್ಪು ಹಾಗೂ ಕಾಯಿಗಳ ಮಾರಾಟದಿಂದ ಲಾಭ ಪಡೆಯಬಹುದು. ಆದರೆ ಇಡಿ ಬೆಳೆಯಾಗಿ ನಾಟಿ ಮಾಡಿದ ಬೆಳೆಯಲ್ಲಿ ಅತಿ ಹೆಚ್ಚು ಎತ್ತರವಾಗಿ ಬೆಳೆÉಸುವುದು ಕಾಯಿ ಹಾಗೂ ಸೊಪ್ಪು ಬಿಡಿಸಲು ಅನಾನುಕೂಲವಾಗುವುದು. ಕಾರಣ ಒಂದರಿಂದ ಒಂದೂವರೆ ಮೀಟರ್ ಎತ್ತರಕ್ಕೆ ತುದಿಯನ್ನು ಸವರಿ ಬೆಳೆ ಬೆಳೆವಣಿಗೆಯನ್ನು ಅಷ್ಟೇ ಎತ್ತರಕ್ಕೆ ಸೀಮಿತಗೊಳಿಸಬೇಕು. ಇದಕ್ಕೆ ಪರ್ಯಾಯವಾಗಿ 2 ರಿಂದ 3 ಮೀಟರ್‍ಗಳ ಎತ್ತgದಲ್ಲಿ ಮುಖ್ಯ ಕಾಂಡವನ್ನು ಕತ್ತರಿಸಿ ನಂತರ ಬಂದ ಕವಲುಗಳಿಂದ ಸೊಪ್ಪು ಹಾಗೂ ಕಾಯಿಗಳನ್ನು ಬಿಡಿಸಿಕೊಂಡು ಕವಲುಗಳನ್ನು ಕತ್ತರಿಸಬಹುದು. ಜಾನುವಾರುಗಳಿಗೆ ಅನುಕೂಲವಾಗುವಂತೆ ನುಗ್ಗೆ ಗಿಡವನ್ನು ಸುಮಾರು 1.5 ಮೀ ಎತ್ತರಕ್ಕೆ 45 ದಿನಗಳಿಗೊಮ್ಮೆ ನಿಯಮಿತವಾಗಿ ಕಟಾವು ಮಾಡುತ್ತಿರಬೇಕು. ಅದೇ ದಿನದ ಮಧ್ಯಾಹ್ನದ ಆಹಾರಕ್ಕಾಗಿ ಬೆಳಿಗ್ಗೆ ಹಾಗೂ ಮುಂದಿನ ದಿನದ ಆಹಾರಕ್ಕಾಗಿ ಸಂಜೆಯ ವೇಳೆ ಕತ್ತರಿಸಬೇಕು. ತುಂಡುಗಳಿಂದ ನಾಟಿ ಮಾಡಿದ ಸಸಿಗಳಿಂದ 5-6 ತಿಂಗಳಲ್ಲಿ ಉತ್ತಮ ಸೊಪ್ಪನ್ನು ಹಾಗೂ 8-9 ತಿಂಗಳಲ್ಲಿ ನುಗ್ಗೆ ಕಾಯಿಗಳನ್ನು ಪಡೆಯಬಹುದು.
ಗೊಬ್ಬರ ಗಿಡ: ಗ್ಲಿರಿಸೀಡಿಯಾ
ಇದು ಸಾಧಾರಣ ಎತ್ತರದ ಸದಾ ಹಸಿರು ಇರುವ ಗಿಡ. ಎಲ್ಲ ವಿಧದ ಮಣ್ಣು ಮತ್ತು ವಾತಾವರಣದಲ್ಲಿ ಬೆಳೆಯುತ್ತದೆ. ಇದನ್ನು ಮೇವು ಮತ್ತು ಗೊಬ್ಬರಕ್ಕಾಗಿ ಬೆಳೆಯುತ್ತಾರೆ.
ಬಿತ್ತನೆಗೆ ಬೇಕಾಗುವ ಬೇಸಾಯ ಸಾಮಗ್ರಿಗಳು ಪ್ರತಿಹೆಕ್ಟೇರಿಗೆ
ಬೀಜ 2 ಕಿ. ಗ್ರಾಂ / ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ 1-2 ಟನ್
ರಾಸಾಯನಿಕ ರಸಗೊಬ್ಬರಗಳು / ರಂಜಕ 30 ಕಿ. ಗ್ರಾಂ / ಪೊಟ್ಯಾಷ್ 20 ಕಿ. ಗ್ರಾಂ
ಬೇಸಾಯ ಕ್ರಮಗಳು
ಈ ಮರದ ಬೀಜ ಬಿದ್ದು ಸ್ವಾಭಾವಿಕವಾಗಿ ಬೆಳೆಯುತ್ತದೆ. ಬಲಿತ ಬೀಜಗಳನ್ನು 1-2 ದಿನ ಒಣಗಿಸಬೇಕು. ನೀರಿನಲ್ಲಿ 24 ತಾಸು ಬೀಜಗಳನ್ನು ನೆನೆಯಿಟ್ಟು ಬಿತ್ತಿದರೆ ಬೇಗನೆ ಹುಟ್ಟುತ್ತವೆ. ಸಸಿಗಳನ್ನು ರೆಂಬೆಯಿಂದಲೂ ತಯಾರಿಸಬಹುದು. ಈ ಮರದ ಸಸಿಗಳನ್ನು/ ಬೀಜಗಳನ್ನು 2 ಮೀ. x 2 ಮೀ. ಅಂತರದಲ್ಲಿ ನೆಡಬೇಕು ಅಥವಾ ಮಳೆಗಾಲದಲ್ಲಿ ಕಾಂಡದ ತುಂಡುಗಳಿಂದ ಬೆಳೆಯಬಹುದು.
ಮೇವು:3-4 ವರ್ಷದ ಪ್ರತಿ ಗಿಡದಿಂದ 20 ಕಿ. ಗ್ರಾಂ ಸೊಪ್ಪನ್ನು ಪಡೆಯಬಹುದು. ಇದರ ಸೊಪ್ಪು ಹಾಲು ಕೊಡುವ ಜಾನುವಾರುಗಳಿಗೆ ಉತ್ತಮ ಆಹಾರ.
ಮಳೆಮರ:
ಈ ಮರವು ಯಾವಾಗಲೂ ಹಚ್ಚ ಹಸಿರಾಗಿರುತ್ತದೆ. ಇದು ದ್ವಿದಳ ಗುಂಪಿಗೆ ಸೇರಿದೆ. ಇದರ ಟೊಂಗೆಗಳು ಛತ್ರಿ ಆಕಾರದಲ್ಲಿರುವದರಿಂದ ಸಾಕಷ್ಟು ನೆರಳನ್ನು ಒದಗಿಸುತ್ತದೆ.
ಬೇಸಾಯ ಕ್ರಮಗಳು:ಈಮರದ ಬೀಜಗಳನ್ನು ಬಿತ್ತುವ ಪೂರ್ವದಲ್ಲಿ 24-30 ತಾಸು ಬಿಸಿ ನೀರಿನಲ್ಲಿ ನೆನಸಿದರೆ ಬೀಜಗಳು ಬೇಗನೆ ಮೊಳೆಯುತ್ತವೆ. ಕಾಂಡದ ತುಂಡುಗಳನ್ನು ಉಪಯೋಗಿಸಿ ಬೆಳೆಯಬಹುದು. ಈ ಮರವನ್ನು ಮನೆಯ ಸುತ್ತಮುತ್ತಲೂ ರಸ್ತೆಯ ಬದಿಯಲ್ಲಿ ಅಥವಾ ಬದುವಿನ ಗುಂಟ 8 ಮೀ. ಅಂತರದಲ್ಲಿ ಬೆಳೆಯಬಹುದು. ಈ ಗಿಡದ ಬೀಜಗಳು ಎಲ್ಲಾ ಕಡೆಗೆ ಹರಡಿ, ನೈಸರ್ಗಿಕವಾಗಿ ಬೆಳೆಯುತ್ತವೆ.
ಮೇವು: ಕಾಯಿಗಳು ಅತ್ಯುತ್ತಮ ಪೋಷಕಾಂಶಯುಕ್ತವಾಗಿರುತ್ತದೆ. ಒಂದು ಸಾಮಾನ್ಯ ಮರದಿಂದ ವರ್ಷಕ್ಕೆ 500 ಕಿ. ಗ್ರಾಂ ಸೊಪ್ಪು 200 ಕಿ. ಗ್ರಾಂ ಕಾಯಿಗಳನ್ನು ಪಡೆಯಬಹುದು. ಕಾಯಿಗಳನ್ನು ದನಗಳ ಆಹಾರ ತಯಾರಿಕೆಯಲ್ಲಿ ಬಳಸುತ್ತಾರೆ.
೫. ಕರಿ ಜಾಲಿ
ಬಯಲು ಸೀಮೆಯಲ್ಲಿ ಹೊಳೆ-ಹಳ್ಳ, ಕೆರೆ-ಕುಂಟೆಗಳ ದಡಗಳಲ್ಲಿ ಗುಂಪಾಗಿ ಬೆಳೆಯುವ ಮಧ್ಯಮ ಗಾತ್ರದ ಮರ. ಮೈದಾನದ ಪ್ರದೇಶದ ಜಡಿ ಮಣ್ಣಿನಲ್ಲಿ, ಉಪ್ಪು ನೆಲದಲ್ಲಿ ಮತ್ತು ಎರೆ ಭೂಮಿಯಲ್ಲಿ ಬೆಳೆಯುವ ಕೆಲವೇ ಮರಗಳಲ್ಲಿ ಇದು ಮಹತ್ವದ್ದು. ಇದು ಜೂನ್‍ದಿಂದ ಜುಲೈವರೆಗೆ ಹೂ ಬಿಡುತ್ತದೆ. ಇದರ ಫಲಗಳು ಡಿಸೆಂಬರ್ ದಿಂದ ಜನವರಿಯವರೆಗೆ ಸಿಗುತ್ತವೆ.
ನೈಸರ್ಗಿಕವಾಗಿ ಫಲಗಳು ಉದುರಿ ಮಳೆಗಾಲದಲ್ಲಿ ಬೀಜಗಳು ಮೊಳೆಯುತ್ತವೆ. ಗಿಡ ಕಡಿದರೆ ಕೂಳೆ ಬರುವುದಿಲ್ಲ. ಬೀಜಗಳನ್ನು 48 ತಾಸು ನೀರಿನಲ್ಲಿ £ನೆÉಸುವದು ಅಥವಾ ಕುದಿಯುವ ನೀರಿನಲ್ಲಿ 3-5 ನಿಮಷ ಅದ್ದಿ 12 ತಾಸು ಅದೇ ನೀರಲ್ಲಿ ಬಿಡುವುದರಿಂದ ಮೊಳಕೆ ಪ್ರಮಾಣ ಹೆಚ್ಚಿಸಬಹುದು. ಬೀಜಗಳನ್ನು ಒಣಗಿಸಿ ಕ್ರಿಮಿನಾಶಕಗಳಿಂದ ಉಪಚರಿಸಿದರೆ 3-4 ವರ್ಷ ಜೀವ ಹೊಂದಿರುತ್ತವೆ. ಬೀಜೋಪಚಾರದ ನಂತರ ಒಣಗಲು ಬಿಡಕೂಡದು.
ಬೇಸಾಯಕ್ರಮಗಳು
ಈ ಮರಗಳನ್ನು 5 ಮೀಟರ ಅಂತರದಲ್ಲಿ ಬದುವಿನಗುಂಟ, ಹಳ್ಳದಗುಂಟ ಮತ್ತು ಹೊಲದ ಸುತ್ತಲೂ ಬೆಳೆಯಬಹುದು
ಬಿತ್ತನೆಗೆ ಬೇಕಾಗುವ ಬೇಸಾಯ ಸಾಮಗ್ರಿಗಳುಪ್ರತಿಹೆಕ್ಟೇರಿಗೆ
ಬೀಜ 4-6 ಕಿ. ಗ್ರಾಂ
ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ 2-3 ಟನ್
ರಾಸಾಯನಿಕ ರಸಗೊಬ್ಬರಗಳು: ರಂಜಕ 50 ಕಿ. ಗ್ರಾಂ / ಪೊಟ್ಯಾಷ್ 25 ಕಿ. ಗ್ರಾಂ
ಮೇವು
ಇದು 7-8 ಮೀಟರ್ ಎತ್ತರ ಬೆಳೆಯುವುದು. ಎಲೆ ಮತ್ತು ಕಾಯಿಗಳು ಅತ್ಯುತ್ತಮ ಪೆÇೀಷಕಾಂಶಯುಕ್ತ ಮೇವಾಗಿದ್ದು, ಶೇ. 14-20 ರಷ್ಟು ಕಚ್ಚಾ ಸಸಾರಜನಕ ಹೊಂದಿವೆ. ಒಂದು ಸಾಮÁನ್ಯ ಮರ ವರ್ಷಕ್ಕೆ 20 ಕಿ. ಗ್ರಾಂ ಹಸಿರು ಮೇವನ್ನು ಮತ್ತು 18 ಕಿ. ಗ್ರಾಂ ಕಾಯಿಗಳನ್ನು ಕೊಡುತ್ತದೆ. ಕಾಯಿಗಳನ್ನು ಪಶುಗಳÀ ಆಹಾರ ತಯÁರಿಕೆಯಲ್ಲಿ ಉಪಂುÉೂೀಗಿಸುತ್ತಾರೆ.
೬:ಬನ್ನಿ
ಇದು ಆದ್ರ್ರ ಮತ್ತು ಒಣಹವೆಯಲ್ಲಿ ಚೆನ್ನಾಗಿ ಬೆಳೆಯುವ ಮರ. ಅನೇಕ ಪ್ರದೇಶಗಳಲ್ಲಿ ನೈಸರ್ಗಿಕವಾಗಿ ಬೆಳೆಯುತ್ತದೆ.
ಬೇಸಾಯ ಕ್ರಮಗಳು
ಈ ಮರದ ಫಲಗಳು ಮಾರ್ಚ್- ಏಪ್ರಿಲ್‍ನಲ್ಲಿ ಪಕ್ವವಾಗಿ ಬೀಜಗಳು ಹೊರ ಬೀಳುತ್ತವೆ. ಬೀಜಗಳು 8-10 ವರ್ಷಗಳ ಕಾಲ ಸಜೀವವಾಗಿರುತ್ತವೆ. ಬೀಜಗಳನ್ನು ಬಿಸಿ ನೀರಿನಲ್ಲಿ ನೆನಸಿದರೆ ಹೆಚ್ಚಿನ ಪ್ರಮಾಣದಲ್ಲಿ ಮೊಳಕೆಯೊಡೆಯುತ್ತವೆ. ಬೀಜಗಳು 10-15 ದಿನಗಳಲ್ಲಿ ಮೊಳಕೆಯೊಡೆಯುತ್ತವೆ. ಈ ಮರದ ಎತ್ತರವಾದ (45 ಸೆಂ. ಮಿ) ಸಸಿಗಳನ್ನು ಹೊಲದ ಬದುವಿನಗುಂಟ 4 ಮೀಟರ್ ಅಂತರದಲ್ಲಿ ಬೆಳೆಯಬಹುದು
ಮೇವು
ಈ ಗಿಡದ ಎಲೆ, ಕಾಯಿ ಮತ್ತು ಮೊಗ್ಗುಗಳನ್ನು ಮೇವಾಗಿ ಉಪಯೋಗಿಸಬಹುದು. ಈ ಮರವು 5-8 ಮೀಟರ್ ಎತ್ತರ ಬೆಳೆಯುತ್ತದೆ. ಗಿಡದ ಎಲೆಗಳಲ್ಲಿ ಹೆಚ್ಚಿನ ಸಾರಜನಕವಿರುತ್ತದೆ. ಗಿಡದ ಸೊಪ್ಪು ರುಚಿಕರವಾಗಿದ್ದು ಆಡು ಕುರಿಗಳಿಗೆ ಬಹು ಉತ್ತಮ. ಒಂದು ಗಿಡದಿಂದ 4 ವರ್ಷದ ನಂತರ 7-8 ಕಿ. ಗ್ರಾಂ ಸೊಪ್ಪು ಅಲ್ಲದೆ 2-3 ಕಿ. ಗ್ರಾಂ ಕಾಯಿ ಪಡೆಯಬಹುದು.
೬. ಆರಿ ಗಿಡ
ಇದು ಮಧ್ಯಮ ಎತ್ತರದ ಬಯಲು ಸೀಮೆಯ ಚಿರಪರಿಚಿತ ಮರ. ಇದು ವರ್ಷದ ಎಲ್ಲಾ ಋತುಗಳಲ್ಲಿ ಹಸಿರೆಲೆ ಹೊಂದಿರುತ್ತದೆ. ನೀರಿನ ಕೊರತೆ ಸಹಿಸಬಲ್ಲದು. ಈ ಮರದ ಬಗ್ಗೆ ಧಾರ್ಮಿಕ ಭಾವನೆ ಇದೆ. ಈ ಮರದ ಸೊಪ್ಪು ಕುರಿ ಮತ್ತು ಆಡುಗಳಿಗೆ ಉತ್ತಮ ಆಹಾರ. ಆರಿ ಗಿಡವನ್ನು ಹೊಲದ ಬದುವಿನಗುಂಟ ಅಥವಾ ನೀರುಕಾಲುವೆಗುಂಟ 4 ಮೀ. ಅಂತರದಲ್ಲಿ ಬೆಳೆಯಬಹುದು. ಬಂಜರು ಭೂಮಿಯಲ್ಲಿ 4 ಮೀ. x 4 ಮೀ. ಅಂತರದಲ್ಲಿ ಬೆಳೆಯಬಹುದು
ಬಿತ್ತನೆಗೆ ಬೇಕಾಗುವ ಬೇಸಾಯ ಸಾಮಗ್ರಿಗಳು ಪ್ರತಿಹೆಕ್ಟೇರಿಗೆ
ಬೀಜ 4 ಕಿ. ಗ್ರಾಂ
ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ 1 ಟನ್
ರಾಸಾಯನಿಕ ರಸಗೊಬ್ಬರಗಳು: ಸಾರಜನಕ 25 ಕಿ. ಗ್ರಾಂ/ ರಂಜಕ 40 ಕಿ. ಗ್ರಾಂ
ಪೊಟ್ಯಾಷ್ 20 ಕಿ. ಗ್ರಾಂ
ಬೇಸಾಯ ಕ್ರಮಗಳು
ಜನವರಿ-ಮಾರ್ಚ್‍ನಲ್ಲಿ ಪಕ್ವ ಫಲಗಳನ್ನು ತೆಗೆದು, ಬಿಸಿಲಿನಲ್ಲಿ ಒಣಗಿಸಿ ಜಜ್ಜಿದರೆ ಬೀಜಗಳು ಹೊರ ಬೀಳುತ್ತವೆ. ಬೀಜಗಳು ಒಂದು ವರ್ಷದವರೆಗೆ ನಾಟುವ ಶಕ್ತಿ ಹೊಂದಿರುತ್ತವೆ. ಬಿತ್ತುವ ಮೊದಲು 4 ತಾಸು ನೀರಿನಲ್ಲಿ ಇಟ್ಟರೆ ಉತ್ತಮ. 4 ರಿಂದ 10 ದಿನಗಳಲ್ಲಿ ಪೂರ್ತಿ ಮೊಡೆಯುತ್ತವೆ.
ಸಸಿಗಳನ್ನು 4 ಮೀ. x 4 ಮೀ. ಅಂತರದಲ್ಲಿ ತೆಗೆದ ಕುಣಿಯಲ್ಲಿ ನೆಡಬೇಕು. ಸಸಿಗಳಿಗೆ ಪೂರ್ಣ ರಕ್ಷಣೆ ನೀಡಬೇಕು. ಇಲ್ಲದಿದ್ದರೆ ಅವುಗಳ ಬೆಳವಣಿಗೆ ಕುಂಠಿತವಾಗುತ್ತದೆ.
ಮೇವು
ಈ ಮರದ ಎಲೆ, ಮೊಗ್ಗು, ಕಾಯಿ ಇತ್ಯಾದಿಗಳು ಉತ್ತಮ ಪಶು ಆಹಾರ. ಇದರ ಪೊಷಕಾಂಶಯುಕ್ತ ಎಲೆಗಳು ಉಳಿದ ಮೇವಿನ ಅಲಭ್ಯತೆಯಲ್ಲೂ ಕೂಡ ಪ್ರಾ¥. ಇದರ ಸಸಾರಜನಕ ಅಂಶ ಶೇ. 19 ರಷ್ಟಿದೆ. ಇದು ಹೆಚ್ಚು ಎತ್ತರ ಬೆಳೆಯದೇ ಕೊಡೆ (ಛತ್ರಿ) ಆಕಾರದಲ್ಲಿ ಬೆಳೆಯುವುದು. ಪ್ರತಿ ಗಿಡಕ್ಕೆ 4 ನೆಯ ವರ್ಷದಿಂದ 15-20 ಕಿ. ಗ್ರಾಂ ದಷ್ಟು ಹಸಿರೆಲೆ ಸೊಪ್ಪು ದೊರಕುವುದು.
೭. ಬಸವನ ಪಾದ
ಇದು ವರ್ಷವಿಡಿ ಹಚ್ಚ ಹಸಿರಾಗಿರುತ್ತದೆ ಮತ್ತು ನಿಧಾನವಾಗಿ ಬೆಳೆಯುವ ಮರ. ಹೆಚ್ಚು ಮಳೆ ಬೀಳುವ ಮತ್ತು ಅರೆ ಮಲೆನಾಡು ಪ್ರದೇಶಕ್ಕೆ ಸೂಕ್ತವಾಗಬಲ್ಲದು.
ಬಿತ್ತನೆಗೆ ಬೇಕಾಗುವ ಬೇಸಾಯ ಸಾಮಗ್ರಿಗಳುಪ್ರತಿಹೆಕ್ಟೇರಿಗೆ
ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ 4-5 ಟನ್
ರಾಸಾಯನಿಕ ರಸಗೊಬ್ಬರಗಳು : ಸಾರಜನಕ 20 ಕಿ. ಗ್ರಾಂ / ರಂಜಕ 40 ಕಿ. ಗ್ರಾಂ
ಪೊಟ್ಯಾಷ್ 20 ಕಿ. ಗ್ರಾಂ
ಬೇಸಾಯ ಕ್ರಮಗಳು
ಈ ಮರದ ಫಲಗಳು ಡಿಸೆಂಬರ್-ಜನೆವರಿಯಲ್ಲಿ ಪಕ್ವವಾಗಿ, ಬೀಜಗಳು ಹೊರ ಬೀಳುತ್ತವೆ. ಈ ಬೀಜಗಳನ್ನು ನೇರವಾಗಿ ಹೊಲದಲ್ಲಿ ಬಿತ್ತಬಹುದು. ಈ ಮರದ 3-5 ಬೀಜಗಳನ್ನು ಅಥವಾ 30-40 ಸೆಂ. ಮೀ. ಎತ್ತರವಿರುವ ಸಸಿಗಳನ್ನು 4 ಮೀ. x 4 ಮೀಟರ್ ಅಂತರದಲ್ಲಿ 30 x 30 x 30 ಸೆಂ. ಮೀ. ಕುಣಿಗಳನ್ನು ತೆಗೆದು ಅದರಲ್ಲಿ ನೆಡಬೇಕು. ಬದುವಿನ ಮತ್ತು ಕಾಲುವೆಯ ಬದಿಯಲ್ಲಿ ಮೇಲೆ 4 ಮೀಟರ್ ಅಂತರದಲ್ಲಿ ಬೆಳೆಯಲು ಯೋಗ್ಯ.
ಮೇವು:ಇದರ ಎಲೆ, ಮೊಗ್ಗು ಮತ್ತು ಕಾಯಿ ಉತ್ತಮ ಪಶು ಆಹಾರ. ಈ ಗಿಡವು 4-5 ಮೀ. ಎತ್ತರ ಬೆಳೆಯುವುದು. ಇದರ ಇನ್ನೊಂದು ಪ್ರಭೇದ ಕಂಚುವಾಳವನ್ನು ಮೇವಿಗಾಗಿ ಬೆಳೆಯುಬಹುದು. ಒಂದು ಗಿಡದಿಂದ 3 ನೆಯ ವರ್ಷದ ನಂತರ 10 -12 ಕಿ. ಗ್ರಾಂ ಎಲೆಸೊಪ್ಪು ದೊರಕುತ್ತದೆ.
೮. ಶಿವನಿ
ಇದೊಂದು ಎಲೆ ಉದುರುವ ಮರ. ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ನೈಸರ್ಗಿಕವಾಗಿ ಚೆನ್ನಾಗಿ ಬೆಳೆಯುತ್ತದೆ. ಅಲ್ಲದೇ ಬಯಲು ಸೀಮೆಯಲ್ಲಿ, ಕಾಲುವೆಯ ಪಕ್ಕದಲ್ಲಿ ಎಲ್ಲ ತರಹದ ಮಣ್ಣುಗಳಲ್ಲಿ ಬೆಳೆಯಬಲ್ಲದು.
ಬಿತ್ತನೆಗೆ ಬೇಕಾಗುವ ಬೇಸಾಯ ಸಾಮಗ್ರಿಗಳುಪ್ರತಿಹೆಕ್ಟೇರಿಗೆ
ಬೀಜ 2-3 ಕಿ. ಗ್ರಾಂ
ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ 1 ಟನ್
ರಾಸಾಯನಿಕ ರಸಗೊಬ್ಬರಗಳು: ಸಾರಜನಕ 20 ಕಿ. ಗ್ರಾಂ/ ರಂಜಕ 40 ಕಿ. ಗ್ರಾಂ
ಪೊಟ್ಯಾಷ್ 20 ಕಿ. ಗ್ರಾಂ
ಬೇಸಾಯ ಕ್ರಮಗಳು
ಈ ಮರದ ಕಾಯಿಗಳು ಜೂನ್-ಜುಲೈ ತಿಂಗಳಲ್ಲಿ ಮÁಗಿ, ಬೀಜಗಳನ್ನು ಕೊಡುತ್ತವೆ. ಬಿತ್ತುವ ಮೊದಲು 4 ತಾಸು ನೀರಿನಲ್ಲಿ ನೆನೆಸಿ ಬೀಜಗಳನ್ನು ನೇರವಾಗಿ ಬಿತ್ತಬಹುದು. 15-20 ದಿನಗಳಲ್ಲಿ ಎಲ್ಲ ಬೀಜಗಳು ಮೊಳಕೆಂುÉೂಡೆಯುತ್ತವೆ ಅಥವಾ 30-40 ಸೆ. ಮೀ. ಎತ್ತರವಿರುವ ಸಸಿಗಳನ್ನು ಕೂಡಾ ಬೆಳೆಯಬಹುದು. ಶಿವನಿಯ ಸಸಿಗಳನ್ನು ಇಡಿಯÁಗಿ ಬೆಳೆಯಲು 3-5 ಬೀಜಗಳನ್ನು ಅಥವಾ 30-50 ಸೆ. ಮಿ. ಎತ್ತರವಿರುವ ಸಸಿಗಳನ್ನು 4 ಮೀ. x 4 ಮೀ. ಅಂತರದಲ್ಲಿ ಅಥವಾ ಬದುವಿನ ಗುಂಟ/ಕಾಲುವೆಯ ಪಕ್ಕದಲ್ಲಿ 4 ಮೀ. ಅಂತರದಲ್ಲಿ ನೆಡಬೇಕು. ಮೊದಲಿನ 4 ವರ್ಷಗಳವರೆಗೆ ಹೆಚ್ಚು ಕಾಳಜಿ ವಹಿಸಬೇಕು.
೯.ಮೇವು
ಎಲೆ ಮತ್ತು ಚಿಗುರುಗಳನ್ನು ಉತ್ತಮ ಪಶು ಆಹಾರವಾಗಿ ಉಪಯೋಗಿಸಬಹುದು. ಇದು 6 -9 ಮೀಟರ್ ಎತ್ತರ ಬೆಳೆಯಬಲ್ಲದು. ಈ ಗಿಡವು 8-15 ಕಿ. ಗ್ರಾಂ ಎಲೆಸೊಪ್ಪು ಕೊಡುತ್ತದೆ.
ಸಿಸ್ಸೂ
ಈ ಮರ ಗುಂಪು ಗುಂಪಾಗಿ ಬೆಳೆಯುತ್ತದೆ. ನೀರಾವರಿ ಪ್ರದೇಶದಲ್ಲಿ ಮತ್ತು ಕಾಲುವೆಗುಂಟ ಉತ್ತಮ ಬೆಳವಣಿಗೆ ಸಾಧ್ಯ. ನೆಲಸಮ ಕಾಂಡದಿಂದ ಮತ್ತು ಗಾಯಗೊಂಡ ಬೇರುಗಳಿಂದ ಸಾಕಷ್ಟು ಚಿಗುರು ಬರುತ್ತದೆ ಮತ್ತು ಬಹಳ ಕಾಲದವರೆಗೆ ಎಲೆಗಳು ಹಸಿರಾಗಿ ಉಳಿಯುತ್ತವೆ. ಇದು ನಿಧಾನವಾಗಿ ಬೆಳೆಯುವ ಮರವಾಗಿದೆ.
ಬಿತ್ತನೆಗೆ ಬೇಕಾಗುವ ಬೇಸಾಯ ಸಾಮಗ್ರಿಗಳು ಪ್ರತಿಹೆಕ್ಟೇರಿಗೆ
ಬೀಜ 2-3 ಕಿ. ಗ್ರಾಂ
ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ 1 ಟನ್
ರಾಸಾಯನಿಕ ರಸಗೊಬ್ಬರಗಳು: ಸಾರಜನಕ 20 ಕಿ. ಗ್ರಾಂ / ರಂಜಕ 40 ಕಿ. ಗ್ರಾಂ
ಪೊಟ್ಯಾಷ್: 20 ಕಿ. ಗ್ರಾಂ
ಬೇಸಾಯ ಕ್ರಮಗಳು
ಈ ಗಿಡದ ಕಾಯಿಗಳು ನವೆಂಬರ-ಡಿಸೆಂಬರದಲ್ಲಿ ಮÁಗುತ್ತವೆ. ಈ ಕಾಯಿಗಳನ್ನು ಹರಿದ ಮೇಲೆ 3-4 ದಿನ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು. ಇಲ್ಲದಿದ್ದರೆ ಮೊಳೆಯುವ ಸಾಮಥ್ರ್ಯ ಕಡಿಮೆಯಾಗುತ್ತದೆ. ಈ ಫಲಗಳಿಗೆ ಕ್ರಿಮಿಬಾಧೆ ಹೆಚ್ಚು. ಸಂಗ್ರಹಣ ಮಾಡಿದ ಬೀಜಗಳು ಮಳೆಗಾಲದವರೆಗೆ ಚೆನ್ನಾಗಿರುತ್ತವೆ. ಬಿತ್ತುವ ಪೂರ್ವದಲ್ಲಿ ಫಲಗಳನ್ನು ಮುರಿದು 24-28 ತಾಸು ತಣ್ಣೀರಲ್ಲಿ ನೆನಸಿದರೆ ಬೀಜಗಳು ಬೇಗನೆ ಮೊಳೆಕೆಯೊಡೆಯುತ್ತವೆ. ತಾಜಾ ಫಲಗಳೂ ನೇರವಾಗಿ ಮೊಳೆಕೆಯೊಡೆಯುತ್ತವೆ. ಫಲಗಳನ್ನು ಒಂದು ಎರಡು ಬೀಜ ಇರಿಸಿ ಮುರಿಯಬೇಕು. ಈ ಮರವನ್ನು ಬೀಜ ಬಿತ್ತಿ ಅಥವಾ ಸಸಿ ನೆಟ್ಟು ಬೆಳೆಸಬಹುದು. ಪಾಲಿಥೀನ್ ಚೀಲಗಳಲ್ಲಿ ಫೆಬ್ರುವರಿ ತಿಂಗಳಲ್ಲಿ ಬೀಜಗಳನ್ನು ನಾಟಿ ಮಾಡಬೇಕು. ಸಸಿಗಳು ಮುಂದೆ ಮಳೆಗಾಲದಲ್ಲಿ ನೆಡಲು ಯೋಗ್ಯವಾಗಿರುತ್ತವೆ.
50 ಸೆ. ಮೀ. ಎತ್ತರವಿರುವ ಸಿಸ್ಸುವಿನ ಸಸಿಗಳನ್ನು 4ಮೀ. x 4ಮೀ. ಅಂತರದಲ್ಲಿ ನೆಡಬೇಕು. ಬದುವಿನಗುಂಟ ಕಾಲುವೆಯ ಪಕ್ಕದಲ್ಲಿ 4ಮೀ. ಅಂತರದಲ್ಲಿ ಬೆಳೆಯುವದು ಯೋಗ್ಯ.
ಮೇವು
ಎಲೆ ಮತ್ತು ಚಿಕ್ಕ ರೆಂಬೆಗಳು ಜಾನುವಾರುಗಳಿಗೆ ಉತ್ತಮ ಆಹಾರ. ಇದರಲ್ಲಿ ಶೇ. 17 ರಷ್ಟು ಕಚ್ಚಾ ಸಸಾರಜನಕವಿದೆ. ಪ್ರತಿ ಗಿಡದಿಂದ 8-10 ಕಿ. ಗ್ರಾಂ ಸೊಪ್ಪನ್ನು ಪಡೆಯಬಹುದು. ಈ ಗಿಡವನ್ನು 8-10 ಮೀಟರ್ ಅಂತರದಲ್ಲಿ ಕಟಾವು ಮಾಡಬೇಕು.
೧೦.ಬಾಗೆ/ಶಿರಸಲ
ಈ ಗಿಡವು ತೀವ್ರವಾಗಿ ಬೆಳೆಯಬಲ್ಲ ಎಲೆ ಉದುರುವ ಮರ. ಆದ್ರ್ರ ಮತ್ತು ಒಣ ಹವೆ ಎರಡೂ ಕಡೆ ಬೆಳೆಯುತ್ತದೆ.
ಬಿತ್ತನೆಗೆ ಬೇಕಾಗುವ ಬೇಸಾಯ ಸಾಮಗ್ರಿಗಳುಪ್ರತಿಹೆಕ್ಟೇರಿಗೆ
ಬೀಜ 2-3 ಕಿ. ಗ್ರಾಂ
ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ 1 ಟನ್
ರಾಸಾಯನಿಕ ರಸಗೊಬ್ಬರಗಳು: ಸಾರಜನಕ 20 ಕಿ. ಗ್ರಾಂ / ರಂಜಕ 40 ಕಿ. ಗ್ರಾಂ
ಪೊಟ್ಯಾಷ್ 25 ಕಿ. ಗ್ರಾಂ
ಬೇಸಾಯ ಕ್ರಮಗಳು
ಈ ಮರದ ಬೀಜಗಳು ಸ್ವಾಭಾವಿಕವಾಗಿ ಬಿದ್ದು ಕಾಡಾಗಿ ಬೆಳೆಯುತ್ತವೆ. ಫೆಬ್ರುವರಿಯಲ್ಲಿ ತಿಳಿ ಕಂದು ಪಕ್ವ ಫಲಗಳನ್ನು ಹರಿದು ಬಿಸಿಲಿನಲ್ಲಿ ಒಣಗಿಸಿದರೆ ಬೀಜ ಸಿಗುತ್ತದೆ. ಬೀಜಗಳನ್ನು ಬಿಸಿಲಿನಲ್ಲಿ 1-2 ದಿನ ಒಣಗಿಸಬೇಕು ಬೀಜಕ್ಕೆ ದಪ್ಪ ಸಿಪ್ಪೆ ಇರುವುದರಿಂದ ಕುದಿಯುವ ನೀರಿನಲ್ಲಿ 1-2 ನಿಮಿಷ £ನೆÉಸಿ ಅದೇ ನೀರಿನಲ್ಲಿ ಬಿಡುವುದರಿಂದ ಅಥವಾ 48 ತಾಸು ತಣ್ಣೀರಲ್ಲಿ ನೆನೆಯಿಟ್ಟು ಬಿತ್ತಿದರೆ ಬೇಗನೇ ಮೊಳಕೆ ಬರುತ್ತದೆ.
ಹೊಲದಲ್ಲಿ ಬೆಳೆಯುವುದಾದರೆ ಸಸಿಗಳನ್ನು 5 ಮೀ x 5 ಮೀ ಅಂತರದಲ್ಲಿ ಅಥವಾ ಬದುವಿನಗುಂಟ 5 ಮೀ. ಅಂತರದಲ್ಲಿ 30 x 30 x 30 ಸೆಂ. ಮೀ. ಆಳದ ಕುಣಿಗಳನ್ನು ಮÁಡಿ ಬೀಜ/ಸಸಿಗಳನ್ನು ನೆಡಬೇಕು.
ಮೇವು
ಮರಗಳನ್ನು 10 ನೆಯ ವರ್ಷದಿಂದ ನಿಯಮಿತವಾಗಿ ಮೇವಿನ ಸಲುವಾಗಿ ಬಳಸಬಹದು. ಎಳೆಯ ಎಲೆಗಳು ಉತ್ತಮ ಮೇವು. ಉತ್ತಮ ಪೆÇೀಷಕಾಂಶಯುಕ್ತ ಎಲೆಗಳಲ್ಲಿ ಪ್ರತಿಶತ 20 ಕಚ್ಚಾ ಸಸಾರಜನಕ ಅಂಶ ಲಭ್ಯವಿರುತ್ತದೆ. ಮÁಗಿದ ತೋಪುಗಳು ಹೆಕ್ಟೇರಿಗೆ 2-4 ಟನ್ ಹಸಿರೆಲೆಯ ಮೇವು ಕೊಡಬಲ್ಲವು. ಚೆನ್ನಾಗಿ ಬೆಳೆದ ಗಿಡ 15-20 ಮೀಟರ್ ಇದ್ದು ವಿಶಾಲವಾಗಿರುತ್ತದೆ. ಈ ಮರಗಳನ್ನು ಬದುವಿನಗುಂಟ 5 ಮೀಟರ್ ಅಂತರದಲ್ಲಿ ಬೆಳೆಯಬಹುದು.
೧೦: ಕ್ಯಾಲಿಯಂಡ್ರಾ:
ಈ ಮರವು ಯಾವಾಗಲೂ ಹಸಿರಾಗಿ ಇರುತ್ತದೆ. ಇದು ಉಷ್ಣವಲಯದಲ್ಲಿ ಮತ್ತು ಅರೆ ಮಲೆನಾಡಿನಲ್ಲಿ ಚೆನ್ನಾಗಿ ಬೆಳೆಯುತ್ತದೆ.
ಬಿತ್ತನೆಗೆ ಬೇಕಾಗುವ ಬೇಸಾಯ ಸಾಮಗ್ರಿಗಳು ಪ್ರತಿಹೆಕ್ಟೇರಿಗೆ
ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೊಸ್ಟ್ 2-3 ಟನ್
ರಾಸಾಯನಿಕ ರಸಗೊಬ್ಬರಗಳು: ರಂಜಕ 40 ಕಿ. ಗ್ರಾಂ / ಪೊಟ್ಯಾಷ್ 20 ಕಿ. ಗ್ರಾಂ
ಬೇಸಾಯ ಕ್ರಮಗಳು
ಈ ಮರದ ಬೀಜಗಳು ಮಾರ್ಚ್ ತಿಂಗಳಲ್ಲಿ ಪಕ್ವವಾಗುತ್ತವೆ. ಬಿತ್ತುವ ಪೂರ್ವದಲ್ಲಿ ಬೀಜಗಳನ್ನು 24-30 ತಾಸು ಬಿಸಿ ನೀರಿನಲ್ಲಿ ನೆನೆಸಿದರೆ, ಬೀಜಗಳು ಬೇಗನೇ ಮೊಳೆಯುತ್ತವೆ. ಅಲ್ಲದೆ ಕಾಂಡದ ತುಂಡು (30 ಸೆಂ.ಮೀ.) ಗಳನ್ನು ಉಪಯೋಗಿಸಿ ಇದನ್ನು ಬೆಳೆಯಬಹುದು.
ಮೇವಿನ ಬೆಳೆಯಾಗಿ ಈ ಮರವನ್ನು 1.5 ಮೀ. x 1.5 ಮೀ ಅಂತರದಲ್ಲಿ ಬೆಳೆದು ಮೇಲಿಂದ ಮೇಲೆ ಕಟಾವು ಮÁಡಬೇಕು.
ಮೇವು
ಇದರ ಎಲೆ, ಮೊಗ್ಗು, ಕಾಂಡ ಮತ್ತು ಕಾಯಿ ಉತ್ತಮ ಮೇವಾಗಿದೆ. ಗಿಡ 8-10 ಮೀಟರ್ ಎತ್ತರ ಬೆಳೆಯುತ್ತದೆ. ಈ ಗಿಡಗಳನ್ನು ಕಡಿದರೆ ಬುಡದಲ್ಲಿ ಚಿಗುರು ಬರುತ್ತದೆ. ಇದರಲ್ಲಿ ಶೇ. 15 ರಷ್ಟು ಸಸಾರಜನಕವಿರುತ್ತದೆ. ಇದರ ಎಲೆಗಳು ತುಂಬಾ ಮೃದುವಾಗಿರುವುದರಿಂದ, ದನಕರು, ಕುರಿ ಮೇಕೆಗಳಿಗೆ ಉತ್ತಮ ಆಹಾರವಾಗಿರುತ್ತದೆ.
ಅರಬೇವು:
ಯÁವಾಗಲೂ ಹಸಿರಾಗಿರುವ ಗಿಡವಾಗಿದ್ದು, ಕಾಲುವೆಗುಂಟ ಚೆನ್ನಾಗಿ ಬೆಳೆಯುತ್ತದೆ ಮತ್ತು ಹೆಚ್ಚು ತೇವಾಂಶವಿರುವಲ್ಲಿ ಬರುತ್ತದೆ.
ಬಿತ್ತನೆಗೆ ಬೇಕಾಗುವ ಬೇಸಾಯ ಸಾಮಗ್ರಿಗಳು ಪ್ರತಿಹೆಕ್ಟೇರಿಗೆ
ಬೀಜ 3-5 ಕೆ.ಜಿ.
ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೊಸ್ಟ್ 1-2 ಟನ್
ರಾಸಾಯನಿಕ ರಸಗೊಬ್ಬರಗಳು: ಸಾರಜನಕ 20 ಕಿ. ಗ್ರಾಂ / ರಂಜಕ 40 ಕಿ. ಗ್ರಾಂ
ಪೊಟ್ಯಾಷ್ 20 ಕಿ. ಗ್ರಾಂ
ಬೇಸಾಯ ಕ್ರಮಗಳು ಸಾಮನ್ಯವಾಗಿ ಜನೇವರಿಯಲ್ಲಿ ಬೀಜಗಳು ಪಕ್ವವಾಗಿ ನೆಲಕ್ಕೆ ಬಿದ್ದ ಮೇಲೆ ಸಂಗ್ರಹಿಸಬೇಕು. ನೆರಳಿನಲ್ಲಿ ಒಣಗಿಸಿ ಬಿತ್ತಬೇಕು. ಎತ್ತರವಾದ ಸಸಿಗಳನ್ನು ಹಚ್ಚಲು ಬಳಸಬೇಕು. ಅರಬೇವನ್ನು ಹೊಲದ ಸುತ್ತಮುತ್ತ ಮತ್ತು ನೀರಿನ ಕಾಲುವೆಯ ಗುಂಟ 2 ಮೀ. ಅಂತರದಲ್ಲಿ ಬೆಳೆಯಬೇಕು.
ಮೇವು:ಈ ಗಿಡದ ಮೇವು ಆಡುಗಳಿಗೆ ಅತಿ ಉತ್ತಮ ಆಹಾರ. ಮೂರನೆಯ ವರ್ಷ ಪ್ರತಿ ಗಿಡದಿಂದ 8-10 ಕಿ ಗ್ರಾಂ ಸೊಪ್ಪನ್ನು ಪಡೆಂiುಬಹುದು.
ಅಂಜನ:
ಈ ಗಿಡವು ಉಷ್ಣವಲಯ ಮತ್ತು ಶುಷ್ಕ ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಮಧ್ಯಮ ಗಾತ್ರದ ಮರವಾಗಿದ್ದು, ಎಲ್ಲ ತರಹದ ಮಣ್ಣಿನಲ್ಲಿ ಬೆಳೆಯುತ್ತದೆ. ಗಿಡವು ಸಾಧಾರಣ ಎತ್ತರವಿದ್ದು ಫಲವತ್ತತೆ ಇಲ್ಲದ ಮಣ್ಣಿನಲ್ಲಿಯೂ ಕೂಡ ಬೆಳೆಯುತ್ತದೆ.
ಬಿತ್ತನೆಗೆ ಬೇಕಾಗುವ ಬೇಸಾಯ ಸಾಮಗಿಪ್ರತಿಗಳು ಹೆಕ್ಟೇರಿಗೆ
ಬೀಜ 8 ಕಿ. ಗ್ರಾಂ
ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೊಸ್ಟ್ 2 ಟನ್
ರಾಸಾಯನಿಕ ರಸಗೊಬ್ಬರಗಳು: ಸಾರಜನಕ 20 ಕಿ. ಗ್ರಾ ರಂಜಕ 50 ಕಿ. ಗ್ರಾಂ
ಪೊಟ್ಯಾಷ್ 40 ಕಿ. ಗ್ರಾಂ
ಬೇಸಾಯ ಕ್ರಮಗಳು
ಈ ಮರವನ್ನು ಸಾಮಾನ್ಯವಾಗಿ ಬೀಜದಿಂದ ಬೆಳೆಸುತ್ತಾರೆ. ಬೀಜಗಳನ್ನು ಸಂಗ್ರಹಿಸಿ 1 ದಿನ ನೀರಿನಲ್ಲಿ ನೆನಸಿ ನರ್ಸರಿ ಸಸಿಗಳಿಗೆ ಬೇಕಾದ ಮಣ್ಣು/ಕೊಟ್ಟಿಗೆ ಗೊಬ್ಬರ/ಮರಳು ಮಿಶ್ರಣ ಹೊಂದಿದ ಪಾಲಿಥೀನ್ ಚೀಲಗಳಿಗೆ ಹಾಕಬೇಕು. ಬೀಜಗಳು 10-15 ದಿನಗಳಲ್ಲಿ ಮೊಳಕೆಯೊಡೆಯುತ್ತವೆ. ಸಸಿಗಳು 40-50 ಸೆ. ಮೀ. ಎತ್ತರ ಬೆಳೆದ ಮೇಲೆ ನಾಟಿ ಮಾಡಲು ಬಳಸಬೇಕು. ಈ ಗಿಡವನ್ನು 2 ಮಿ. x 2 ಮೀ. ಅಂತರದಲ್ಲಿ ಬೆಳೆಯಬಹುದು. ಬದುವಿನಗುಂಟ ಅಥವಾ ಕಾಲುವೆಯ ಗುಂಟ 2ಮೀ. ಅಂತರದಲ್ಲಿ ಬೆಳೆಯಬಹುದು.
ಮೇವು
ಆಡು-ಕುರಿಗಳಿಗೆ ಇದರ ಸೊಪ್ಪು ಬಹಳ ಉತ್ತಮ. ಕಟ್ಟಿಗೆಯು ಬಹಳ ಗಟ್ಟಿಯಾಗಿದ್ದು ಉರುವಲು ಹಾಗೂ ಉಪಕರಣಗಳಿಗಾಗಿ ಬಳಸುತ್ತಾರೆ. ಪ್ರತಿ ಗಿಡದಿಂದ 10-15 ಕಿ. ಗ್ರಾಂ ಸೊಪ್ಪು ದೊರೆಯುತ್ತದೆ.
ದಾಮಣಿ:
ಇದು ಆದ್ರ್ರ ಮತ್ತು ಒಣಹವೆಯ ಶುಷ್ಕಪರ್ಣಿ ಅರಣ್ಯದಲ್ಲಿ ಚೆನ್ನಾಗಿ ಬೆಳೆಯುತ್ತದೆ. ಇದು ಬಹಳ ಎತ್ತರ ಬೆಳೆಯುತ್ತದೆ. ಕುರಿ ಮತ್ತು ಆಡುಗಳು ಇದರ ಸೊಪ್ಪನ್ನು ಹೆಚ್ಚು ತಿನ್ನುತ್ತವೆ.
ಬಿತ್ತನೆಗೆ ಬೇಕಾಗುವ ಬೇಸಾಯ ಸಾಮಗ್ರಿಗಳು ಪ್ರತಿಹೆಕ್ಟೇರಿಗೆ
ಬೀಜ 2 ಕಿ. ಗ್ರಾಂ.
ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೊಸ್ಟ್ 1 ಟನ್
ರಾಸಾಯನಿಕ ರಸಗೊಬ್ಬರಗಳು: ಸಾರಜನಕ 20 ಕಿ. ಗ್ರಾಂ / ರಂಜಕ 30 ಕಿ. ಗ್ರಾಂ
ಪೊಟ್ಯಾಷ್ 30 ಕಿ. ಗ್ರಾಂ
ಬೇಸಾಯ ಕ್ರಮಗಳು
ಇದರ ಫಲಗಳು ಏಪ್ರಿಲ್-ಮೇ ದಲ್ಲಿ ಬಿಡುತ್ತವೆ. ಬೀಜಗಳನ್ನು ಬಿಸಿಲಿನಲ್ಲಿ ಒಣಗಿಸಬೇಕು. ಬಿತ್ತುವ ಪೂರ್ವದಲ್ಲಿ 24 ತಾಸು ನೀರಿನಲ್ಲಿ ನೆನಸಿ ಉಪಯೊಗಿಸಬೇಕು. ಮಣ್ಣು : ಉಸುಕು : ಗೊಬ್ಬರ ಮಿಶ್ರಿತ ಪಾಲಿಥೀನ್ ಚೀಲಗಳಲ್ಲಿ ಬೆಳೆಸಿ ಸಸಿಗಳನ್ನು 4 ಮೀ. x 4 ಮೀ. ಅಂತರದಲ್ಲಿ ನೆಡಬೇಕು ಅಥವಾ ಬದುವಿನಗುಂಟ 4 ಮೀ. ಅಂತರದಲ್ಲಿ ಹಚ್ಚಬೇಕು.
ಮೇವು
ಎಲೆಗಳು ದನಕರುಗಳಿಗೆ ಉತ್ತಮ ಆಹಾರ. ಒಂದು ಗಿಡದಿಂದ 8-10 ವರ್ಷದ ನಂತರ 20-25 ಕಿ. ಗ್ರಾಂ ಸೊಪ್ಪು ಪಡೆಯಬಹುದು.
ಎಲಾಯಿಚಿ ಹುಣಸೆ
ಈ ಮರವು ವರ್ಷವಿಡೀ ಹಚ್ಚ ಹಸಿರಾಗಿರುತ್ತದೆ. ಇದು ಎಲ್ಲ ತರಹದ ಮಣ್ಣಿನಲ್ಲಿ ಹಾಗೂ ವಾತಾವರಣದಲ್ಲಿ ಬೆಳೆಯುತ್ತದೆ. ಈ ಮರವನ್ನು ಕಾಲುವೆಗುಂಟ ಮತ್ತು ಬದುವಿನ ಮೇಲೆ ಬೆಳೆಯಬಹುದು. ಸೊಪ್ಪು ರುಚಿಯÁಗಿದ್ದು, ಆಡು ಮತ್ತು ಕುರಿಗಳಿಗೆ ಒಳ್ಳೆಯ ಅಹಾರ. ಹೊಲದ ಸುತ್ತ ಮುತ್ತಲೂ ಬೇಲಿಯನ್ನಾಗಿ ಈ ಮರವನ್ನು ಬೆಳೆಯಬಹುದು. ಅಲ್ಲದೆ ಮಣ್ಣು ಸಂರಕ್ಷಣೆ ಮÁಡಲು ಒಳ್ಳೆಯದಾಗಿದೆ.
ಬೇಕಾಗುವ ಸಾಮಗ್ರಿಗಳು
ಬೀಜ : 2-3 ಕಿ. ಗ್ರಾಂ
ಗೊಬ್ಬರ : 1 ಟನ್
ರಸ ಗೊಬ್ಬರಗಳು : ಸಾರಜನಕ – 20 ಕಿ. ಗ್ರಾಂ / ರಂಜಕ – 25 ಕಿ. ಗ್ರಾಂ / ಪೊಟ್ಯಾಷ್ – 20 ಕಿ. ಗ್ರಾಂ
ಬೇಸಾಯ ಕ್ರಮಗಳು
ಇದರ ಬೀಜಗಳು ಮಾರ್ಚ್-ಏಪ್ರೀಲ್ ತಿಂಗಳಲ್ಲಿ ಬರುತ್ತವೆ. ಬಲಿತ ಹಣ್ಣುಗಳಿಂದ ಬೀಜಗಳನ್ನು ಬೇರ್ಪಡಿಸಿ, ಒಣಗಿಸಿ 4 ಮಿ. x 4 ಮೀ. ಅಂತರದಲ್ಲಿ ಅಥವಾ ಬದುವಿನ ಮೇಲೆ 4 ಮೀ ಅಂತರದಲ್ಲಿ ಬೆಳೆಸಬೇಕು.
ಮೇವು
ಎಲೆಗಳು ಆಡು-ಕುರಿಗಳಿಗೆ ಒಳ್ಳೆಯ ಆಹಾರ. ನಾಲ್ಕು ವರ್ಷದ ನಂತರ ಒಂದು ಗಿಡಕ್ಕೆ 6-8 ಕಿ. ಗ್ರಾಂ ಸೊಪ್ಪು ಪಡೆಯಬಹುದು. ಅಲ್ಲದೆ ಇದನ್ನು ಮೇಲಿಂದ ಮೇಲೆ ಕಟಾವು ಮಾಡಬಹುದು.
ಇತರೆ ಮೇವಿನ ಗಿಡಗಳು
ಮತ್ತಿ, ಅತ್ತಿ, ಅರಳಿ, ಮುಂತಾದ ಗಿಡಗಳನ್ನು ದನಕರುಗಳಿಗೆ ಮೇವಿನ ಸಲುವಾಗಿ ಬೆಳೆಸಬಹುದು
ಇಡಿಯಾಗಿ ಮೇವಿನ ಮರಗಳನ್ನು ಬೆಳೆಯುವಾಗ ಈ ಮುಖ್ಯಾಂಶಗಳನ್ನು ಪಾಲಿಸಬೇಕು
1.ಬಂಜರು ಭೂಮಿ ಅಬಿsವೃದ್ಧಿಪಡಿಸಬೇಕಾಗಿರುವ ಪ್ರದೇಶದಲ್ಲಿ ಮೇಲೆ ಶಿಫಾರಸ್ಸು ಮಾಡಿದ ಗಿಡಗಳನ್ನು ನೆಡಬೇಕು. ಹೆಚ್ಚು ಇಳಿಜಾರು ಇದ್ದರೆ ಸಮಪಾತಳಿ ಬದುಗಳನ್ನು ಹಾಕಬೇಕು. ಬಂಜರು ಭೂಮಿಯಲ್ಲಿ ಗಿಡಗಳನ್ನು ಹಚ್ಚಿದ ನಂತರ ಹಸಿರಾಗಿಸಲು ಬೆಳೆಯುವ ಸಸಿ ಮತ್ತು ಹುಲ್ಲನ್ನು ದನಕರುಗಳಿಂದ ರಕ್ಷಿಸಲು ಸುತ್ತಲೂ ಬೇಲಿಯನ್ನು ನಿರ್ಮಿಸಬೇಕು.
- ಆಯಾ ಪ್ರದೇಶದ ಭೂಮಿ ಮತ್ತು ಹವಾಗುಣಕ್ಕೆ ಒಗ್ಗಿ ಕೊಳ್ಳವಂಥದ್ದಾಗಿರಬೇಕು. ತೀವ್ರವಾಗಿ ಬೆಳೆಯುವಂತಿರಬೇಕು ಬಹು ಬಳಕೆಗೆ ಬರುವಂತಿರಬೇಕು. ಹೆಚ್ಚು ಲಾಭದಾಯಕ ಬೆಳೆಯಾಗಿರಬೇಕು. ಗಿಡಗಳು ಭೂಮಿಯ ಫಲವತ್ತತೆಯನ್ನು ಹೆಚ್ಚಿಸಬೇಕು. ಸೊಪ್ಪು ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರಬೇಕು.
- ಸಾಮಾನ್ಯವಾಗಿ ಬಂಜರು ಭೂಮಿಯಲ್ಲಿ ಬೆಳೆಯಬಹುದಾದ ವೃಕ್ಷಗಳು
ಜವಳು ಭೂಮಿ : ಬಿದಿರು, ಗ್ಲಿರೀಸೀಡಿಯಾ, ಚೊಗಚೆ, ಮಳೆಮರ, ಹುಲಗಲ, ಸುಬಾಬುಲ್
ಮರಳು : ಸಿಸ್ಸು, ಅಂಜನ್, ಸುಬಾಬುಲ್
ಹುಳಿ ಮಣ್ಣು ಭೂಮಿ : ಸಿಸ್ಸು, ಗ್ಲಿರೀಸೀಡಿಯಾ, ಸುಬಾಬುಲ್
ಸೌಳು ಭೂಮಿ : ಜಾಲಿ, ಗ್ಲಿರೀಸೀಡಿಯಾ, ಚೊಗಚೆ, ಸುಬಾಬುಲ್
ಆಳವಾದ ಎರೆ : ಬಸವಪಾದ, ಶಿವನಿ, ಆರಿಗಿಡ, ಜಾಲಿ, ಸುಬಾಬುಲ್
ಒಣ ಮರುಭೂಮಿ : ಅಂಜನ, ಜಾಲಿ, ಆರಿಗಿಡ, ಸುಬಾಬುಲ್
ಹೆಚ್ಚಿನ ಮಾಹಿತಿಗಾಗಿ ಸಂಪಕಿ೯ಸಿ:
ಡಾ.ವೆಂಕಟೇಶ,ಎಂ.ಎಂ.
ಸಹಾಯಕ ಪ್ರಾದ್ಯಾಪಕರು, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ.
ಮೊಬೈಲ್ ಸಂಖ್ಯೆ: 9482373685 / 9113938922