
.
ನಗರದ ಅಶ್ವಿನೀಸ್ ಮೇಕೋವರ್ ಸ್ಟುಡಿಯೋದಿಂದ ರಿಯಾಯಿತಿ ದರದಲ್ಲಿ ಮೇಕಪ್ ತರಬೇತಿ
ಶಿವಮೊಗ್ಗ: ಮೇಕಪ್ ಕಲಿಕೆಯಿಂದ ಮಹಿಳೆಯರು ಮತ್ತು ಯುವತಿಯರು ಸ್ವ ಉದ್ಯೋಗ ಸೃಷ್ಠಿಸಿಕೊಳ್ಳುವ ಜೊತೆಗೆ ಉತ್ತಮ ಬದುಕನ್ನು ಕಟ್ಟಿಕೊಳ್ಳಬಹುದು ಎಂದು ಅಶ್ವಿನೀಸ್ ಮೇಕೋವರ್ ಸಂಸ್ಥೆಯ ಮುಖ್ಯಸ್ಥೆ ಅಶ್ವಿನಿ ಎಂ.ಎಸ್. ಅವರು ಹೇಳಿದರು.

ಅವರು ಮೇಕಪ್ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಿ ಮಾತನಾಡುತ್ತಾ, ಶಿವಮೊಗ್ಗ ನಗರದಲ್ಲಿ ಮೊದಲ ಬಾರಿಗೆ ಅಶ್ವಿನೀಸ್ ಮೇಕೋವರ್ ಸ್ಟುಡಿಯೋ ಸಂಸ್ಥೆಯಿಂದ ಹೊಸ ವರುಷದ ನಿಮಿತ್ತ ಮಹಿಳೆಯರಿಗೆ, ಯುವತಿಯರಿಗೆ ರಿಯಾಯಿತಿ ದರದಲ್ಲಿ ಮೇಕಪ್ ತರಬೇತಿ ನೀಡಲಾಗುತ್ತಿದೆ.
ಮಹಿಳೆಯರು ಎಲ್ಲಾ ರಂಗಗಳಲ್ಲಿ ಕೆಲಸ ಮಾಡಬಲ್ಲರು ಎನ್ನುವುದನ್ನು ಸಾಧಿಸಿ ತೋರಿಸಿದ್ದಾರೆ. ಕೆಲವ ಮನೆ ಕೆಲಸಗಳಿಗೆ ಮಾತ್ರ ಸೀಮಿತವಾಗದೇ ಎಲ್ಲ ರಂಗಗಳಲ್ಲಿಯೂ ತೊಡಗಿಕೊಳ್ಳಬೇಕು ಎಂದು ಕರೆ ನೀಡಿದರು.
ಸಂಸ್ಥೆಯ ವತಿಯಿಂದ ಹೊಸ ವರುಷದಿಂದ ರಿಯಾಯಿತಿ ದರದಲ್ಲಿ ಹೊಸ ಬ್ಯಾಚ್ ಆರಂಭಗೊಳ್ಳುತ್ತಿದ್ದು, ಮೇಕಪ್ ಕೊರ್ಸ್ ಗೆ ಸೇರಬಯಸುವ ಯುವತಿಯರು ಮತ್ತು ಮಹಿಳಾ ವಿದ್ಯಾರ್ಥಿಗಳಿಗೆ ಅತಿ ಕಡಿಮೆ ದರದಲ್ಲಿ ಅತ್ಯುನ್ನತ ಗುಣಮಟ್ಟದ ಮೇಕಪ್ ತರಬೇತಿಯನ್ನು ಶಿವಮೊಗ್ಗ ಸಿಟಿಯಲ್ಲೆ ಹೇಳಿಕೊಡಲಾಗುವುದು ಎಂದರು
ವಿದ್ಯಾರ್ಥಿಗಳಿಗೆ ಮೇಕಪ್ ಕೋರ್ಸ್ ನ ಸಿಲೆಬಸ್ ಪ್ರಿಂಟ್ ಬುಕ್ , ಮೇಕಪ್ ಕಲಿಕೆಗೆ ಅಗತ್ಯವಾಗಿ ಬೇಕಾದ ಅಭ್ಯಾಸಕರ ಉಪಕರಣಗಳು ಮತ್ತು ಸೌಂದರ್ಯ ವರ್ಧಕ ವಸ್ತುವನ್ನು ಸಹ ಸಂಸ್ಥೆಯೇ ನೀಡುತ್ತದೆ ಮತ್ತು ಅಶ್ವಿನಿಸ್ ಮೇಕೊವರ್ ಸಂಸ್ಥೆಯ ಕೋರ್ಸ್ ಅಂತಿಮದ ಆಯೋಜನೆಯ ಬೃಹತ್ ಸಮಾರೋಪ ವೇದಿಕೆಯಲ್ಲಿ, ಸ್ವತಃ ವಿದ್ಯಾರ್ಥಿಗಳಿಂದಲೆ ಸೆಲೆಬ್ರಿಟಿಗಳಿಗೆ ಅಥವಾ ಇತರರಿಗೆ ಮೇಕಪ್ ಮಾಡಲು ಅವಕಾಶ ಒದಗಿಸಿ, ಸರ್ಟಿಫಿಕೇಟ್ ಸಹ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.
ಹೆಚ್ಚಿನ ಮಾಹಿತಿಗಾಗಿ ಕೂಡಲೇ ಕರೆ ಮಾಡಿ : 9901216093
ಅಶ್ವಿನಿ ಮೇಕೊವರ್ ಸಂಸ್ಥೆಯ ಮೊದಲ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ 20 ಡಿಸೆಂಬರ್ 2022ರ ಮಂಗಳವಾರದ ಒಳಗೆ ಮೇಕಪ್ ಕೋರ್ಸ್ ಗೆ ನೋಂದಣಿಯಾದ ವಿದ್ಯಾರ್ಥಿಗಳಿಗೆ, ತರಬೇತಿ ಶುಲ್ಕದಲ್ಲಿ 60% ವಿಶೇಷ ರಿಯಾಯಿತಿಯನ್ನ ಇದೆ ಮೊದಲ ಬಾರಿಗೆ ಆಫರ್ ನೀಡಲಾಗುತ್ತಿದೆ. ( ಕಡೆಯ ದಿನಾಂಕ ಮುಗಿದ ಮೇಲೆ ಈ ಆಫರ್ ಕಡ್ಡಾಯವಾಗಿ ಇರುವುದಿಲ್ಲ .ಮೊದಲು ನೊಂದಣಿಯಾದ 10ಜನರಿಗೆ ಮಾತ್ರ ಮೊದಲ ಆದ್ಯತೆ ) ಎಂದು ಸಂಸ್ಥೆಯ ಮುಖ್ಯಸ್ಥರಾದ “ಅಶ್ವಿನಿ ಎಸ್ ಎಂ” ಅವರು ತಿಳಿಸಿದ್ದಾರೆ.