BY:LOKESH JAGANNATH
ಇತ್ತೀಚಿನ ದಿನಗಳಲ್ಲಿ ನಗರದಿಂದ ವಿದ್ಯಾವಂತ ಯುವಕರು ತಮ್ಮ ಮೂಲ ಕಸುಬು ಕೃಷಿಯನ್ನು ಆಶ್ರಯಿಸಿ ಮತ್ತೆ ಗ್ರಾಮೀಣ ಭಾಗಗಳಿಗೆ ಮರಳಿ ಬರುತ್ತಿದ್ದಾರೆ. ಅಂಥವರಲ್ಲಿ ಶಿವಮೊಗ್ಗ ಜಿಲ್ಲೆಯ ಮಲೆನಾಡಿನ ತೀರ್ಥಹಳ್ಳಿಯ ಮೃಗವದೆ ವಿದ್ಯಾವಂತ ಯುವಕರು, ಭಾರತ ಸರ್ಕಾರದ ಅನುದಾನ ಪಡೆದು ಅಣಬೆ ಬೇಸಾಯ ಮಾಡುವ ಹೊಸ ಉದ್ಯಮಕ್ಕೆ ಕೈಹಾಕಿದ್ದಾರೆ ಆಧುನಿಕ ತಂತ್ರಜ್ಞಾನ ಬಳಸಿ ಅಣಬೆ ಬೆಳೆಯುತ್ತಿದ್ದಾರೆ ಇದು ಔಷಧಿ ಗುಣವುಳ್ಳ ಆಹಾರವಾಗಿದೆ ಇವರು ತಯಾರಿಸುತ್ತಿರುವ ಅಣಬೆಗೆ ಬಹುಬೇಡಿಕೆ ನಿರ್ಮಾಣವಾಗಿದೆ.
ಭಾರತ ಸರ್ಕಾರದ ತೋಟಗಾರಿಕೆ ಮಿಷನ್ ಯೋಜನೆ ಅಡಿ 8 ಲಕ್ಷಕ್ಕೂ ಅಧಿಕ ಆರ್ಥಿಕ ಸಹಕಾರವನ್ನು ಪಡೆದಿದ್ದಾರೆ 20 ಲಕ್ಷಕ್ಕೂ ಹೆಚ್ಚು ಮೂಲ ಬಂಡವಾಳವನ್ನು ಹೂಡಿದ್ದಾರೆ ಇವರು ತಯಾರಿಸುತ್ತಿರುವ ಅಣಬೆ ಶ್ವಾಸಕೋಶದ ಸಮಸ್ಯೆ, ಮೂತ್ರಪಿಂಡ ಸಂಬಂಧಿ ಸಮಸ್ಯೆ,ರಕ್ತದ ಒತ್ತಡ ಮಧುಮೇಹ ಎಲ್ಲದಕ್ಕೂ ಸಂಜೀವಿನಿ ಆಗಿದ್ದು ಅಣಬೆ ಪುಡಿಮಾಡಿ ಮಾರಾಟ ಮಾಡುತ್ತಿದ್ದಾರೆ ಇದಕ್ಕೆ ಸರ್ಕಾರದ ಅಧಿಕೃತ ಮೊಹರು ಕೂಡ ನೀಡಲಾಗಿದೆ. ರಾಜ್ಯ ಹಾಗು ಇತರ ರಾಜ್ಯಗಳಿಗೂ ಇವರು ತಯಾರಿಸಿದ ಅಣಬೆ ಉತ್ಪನ್ನಕ್ಕೆ ಬೇಡಿಕೆ ನಿರ್ಮಾಣವಾಗಿದ್ದು ಇದಕ್ಕೆ ಕಲಿಯುಗದ ಸಂಜೀವಿನಿ ಎಂದು ಹೆಸರಿಟ್ಟಿದ್ದಾರೆ
ಧೀರಜ್ ಉದ್ಯಮಿ ತೀರ್ಥಳ್ಳಿ ತಾಲೂಕಿನಲ್ಲಿ ಕೃಷಿ ಭೂಮಿ ಹೊಂದಿರುವ ನಾವು ನಗರದಲ್ಲಿ ಕೆಲಸ ಮಾಡುತ್ತಿದ್ದೆವು, ಈಗ ನಮ್ಮ ಯುವಕರ ತಂಡ ಊರಿಗೆ ಮರಳಿ ಬಂದಿದೆ. ಭಾರತ ಸರ್ಕಾರದ ತೋಟಗಾರಿಕೆ ಮಿಷನ್ ಯೋಜನೆಯಡಿ ಆರ್ಥಿಕ ಸಹಕಾರ ಪಡೆದು ದಿವ್ಯ ಔಷಧಿ ಗುಣವುಳ್ಳ ಅಣಬೆಯನ್ನು ಬೆಳೆದು ಔಷಧೀಯ ಉಪಯೋಗಕ್ಕಾಗಿ ಮಾರಾಟ ಮಾಡುತ್ತಿದ್ದೇವೆ ತುಂಬಾ ಬೇಡಿಕೆ ಬರುತ್ತಿದೆ ಇನ್ನೂ ಉತ್ತಮವಾಗಿ ಉತ್ಪನ್ನವನ್ನು ಮಾಡುವ ಉತ್ಸಾಹ ಇದೆ ಎಂದು ತಿಳಿಸಿದರು.
ಸುಧನ್ವ ಉಪಾಧ್ಯಾಯ ಮಾತನಾಡಿ ಕರೋನಾದಂತಹ ಸಂಕಷ್ಟದ ಸಂದರ್ಭದಲ್ಲಿ ದೊಡ್ಡ ನಗರಗಳಲ್ಲಿ ಕೆಲಸ ಮಾಡುತ್ತಿದ್ದವು. ಅದನ್ನು ಬಿಟ್ಟು ಈಗ ನಮ್ಮೂರಿಗೆ ಬಂದಿದೆ ವಿದ್ಯಾವಂತ ಯುವಕರು ಸೇರಿಕೊಂಡು ಭಾರತ ಸರಕಾರದ ಸಹಕಾರದೊಂದಿಗೆ ಔಷಧಿಗೆ ಬಳಸುವ ಅಣಬೆ ಕೃಷಿಯನ್ನು ಪ್ರಾರಭಿಸಿದ್ದೇವೆ. ನರೇಂದ್ರ ಮೋದಿಯವರ ಗ್ರಾಮೋದ್ಧಾರದ ಪ್ರಮುಖ ಉದ್ದೇಶವನ್ನು ನಾವು ಕಾರ್ಯಗತಗೊಳಿಸುವ ಆಶಯವನ್ನು ಹೊಂದಿದ್ದೇವೆ ಎಂದು ತಿಳಿಸಿದರು.
ಮಹೇಶ್ ಕಾಮತ್ ನಾನು ಯುವಕರು ಬೆಳೆದ ಔಷಧೀಯ ಗುಣಮಟ್ಟದ ಅಣಬೆಯನ್ನು ಬಳಸಿದ್ದೇನೆ. ಮಧುಮೇಹದ ಹಾಗು ಇತರ ಸಮಸ್ಯೆಗಳಿಂದ ವಿಮುಕ್ತನಾಗಿದ್ದೇನೆ. ಸರ್ಕಾರದ ಅಧಿಕೃತ ಅನುಮತಿಯೊಂದಿಗೆ ಬೆಳೆದ ಅಣಬೆಯನ್ನು ತಯಾರಿಸಿ ನೀಡುತ್ತಿದ್ದಾರೆ ಅಣಬೆಯನ್ನು ಆಧುನಿಕ ತಂತ್ರಜ್ಞಾನದಲ್ಲಿ ಬೆಳೆಯುತ್ತಿದ್ದಾರೆ ನನಗೆ ತುಂಬಾ ಅನುಕೂಲವಾಗಿದೆ ಎಂದು ಹೇಳಿದರು.
ಸಿದ್ದಲಿಂಗೇಶ್ವರ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಶಿವಮೊಗ್ಗ ಪ್ರತಿಕ್ರಯಿಸಿ ಭಾರತ ಸರ್ಕಾರದ ತೋಟಗಾರಿಕೆ ಮಿಷನ್ ಯೋಜನೆಯಡಿ ಅಣಬೆ ಬೆಳೆಯುತ್ತಿರುವ ಯುವಕರಿಗೆ ಆರ್ಥಿಕ ಸಹಕಾರವನ್ನು ನೀಡಲಾಗಿದೆ ತುಂಬಾ ಉತ್ತಮವಾಗಿ ನಡೆಸಿದ್ದಾರೆ ಹೊಸ ದಿಕ್ಕಿನ ಚಿಂತನೆ ಇತರರಿಗೆ ಮಾರ್ಗಸೂಚಿಯಾಗಿದೆ ಎಂದರು