ಭಾರತ ಸಕಾ೯ರ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ,ಶಿವಮೊಗ್ಗ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕ-1 ಮತ್ತು 2, ಸಹ್ಯಾದ್ರಿ ವಿಜ್ಞಾನ ಕಾಲೇಜು, ಇನ್ನೋವೆಟರ್ ಯೂತ್ ಕ್ಲಬ್,ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ 26.01.2023 ರಿಂದ 28.01.2023ರ ತನಕ ಮೂರು ದಿನಗಳ ವಿಶೇಷ ಶ್ರಮದಾನ ಶಿಬಿರ-2023 ಕಾಯ೯ಕ್ರಮವನ್ನು ಪುರದಾಳು ಗ್ರಾಮ ಪಂಚಾಯತಿಯ, ಹನುಮಂತಾಪುರ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು ಉದ್ಘಾಟನಾ ಕಾಯ೯ಕ್ರಮವು 26.01.2023 ರಂದು ನಡೆಯಿತು.
ಈ ಕಾಯ೯ಕ್ರಮದ ಉದ್ಘಾಟನೆಯನ್ನು ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲರಾದ ಪ್ರೋ.ರಾಜೇಶ್ವರಿ. ಎನ್ ರವರು ನೆರವೇರಿಸಿದರು. ವಿದ್ಯಾಥಿ೯ಗಳು ಕೇವಲ ಶಾಲಾ ಆವರಣದಲ್ಲಿ ಮಾತ್ರವಲ್ಲದೆ ಸಮಾಜದ ಆವರಣದಲ್ಲೂ ಬೆಳೆಯಬೇಕೆಂದು ಹೇಳಿದರು.
ಕಾಯ೯ಕ್ರಮದ ಅಧ್ಯಕ್ಷತೆಯನ್ನು ಪುರದಾಳು ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ. ಭಾರತಿ ನಾಗರಾಜ್ ರವರು ವಹಿಸಿದ್ದರು. ಇವರು ಶಿಬಿರವು ಯಶಸ್ವಿಯಾಗಿ ನೆರವೇರಲಿ ಎಂದು ಹಾರೈಸಿದರು.
ಈ ಶಿಬಿರದಲ್ಲಿ ಒಟ್ಟು 40 ಯುವಜನರು ಪಾಲ್ಗೋಂಡಿದ್ದು , ಈ ಕಾಯ೯ಕ್ರಮದ ಪ್ರಮುಖ ಉದ್ದೇಶ ಎಲ್ಲಾ ಯುವಜನರು ತಮ್ಮಲ್ಲಿ ಸ್ವಯಂಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳುವುದು, ಎಲ್ಲರೂ ಒಟ್ಟಾಗಿ ಸೇರಿ ಕೆಲಸ ಮಾಡುವುದರಿಂದ ಸಿಗುವ ಪ್ರತಿಫಲ, ಗ್ರಾಮ ಸಮುದಾಯಕ್ಕೆ ಸಂಬಂಧಿಸಿದ ವಿವಿಧ ಸಮಸ್ಯೆಗಳನ್ನು ಅಥ೯ಮಾಡಿಕೊಳ್ಳಲು ಮತ್ತು ಸಮುದಾಯ ಸ್ವತ್ತುಗಳ ನಿವ೯ಹಣೆ ಮತ್ತು ಅಲ್ಲಿರುವ ಸಮಸ್ಯೆಗಳ ಬಗ್ಗೆ ಅರಿತು ಕೊಳ್ಳಲು ಈ ಶಿಬಿರವು ಸಹಕಾರಿಯಾಗಲಿದೆ.
ಈ ಕಾಯ೯ಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಾ. ನಾಗರಾಜ್ ಪರಿಸರ,ಕಾಯ೯ಕ್ರಮ ಸಂಯೋಜನಾಧಿಕಾರಿಗಳು, ಕು.ವಿ, ಡಾ.ವೆಂಟೇಶ್ ಪಿ ನಿಕಟಪೂವ೯ ಕಾಯ೯ಕ್ರಮಾಧಿಕಾರಿಗಳು, ಎನ್.ಎಸ್.ಎಸ್, ಸ.ವಿ.ಕಾಲೇಜು, ಶ್ರೀ ಪ್ರದೀಪ್ ಹೆಬ್ಬೂರು, ಶ್ರೀಮತಿ.ಕುಸುಮ ಜಗದೀಶ್,ಗ್ರಾ.ಪಂ ಸದಸ್ಯರು, ಶ್ರೀ ಉಲ್ಲಾಸ್ ಕೆ.ಟಿ.ಕೆ ಜಿಲ್ಲಾ ಯುವ ಅಧಿಕಾರಿಗಳು, ನೆ.ಯು ಕೇಂದ್ರ, ಶ್ರೀಮತಿ. ಗೀತಾ ಆರ್, ಮುಖ್ಯೋಪಾಧ್ಯಾಯರು, ಶ್ರೀಮತಿ. ವತ್ಸಲ, ಶಿಕ್ಷಕಿ, ಸ.ಕಿ.ಪ್ರಾ.ಶಾಲೆ, ಹನುಮಂತಾಪುರ. ಡಾ. ಹಾ.ಮಾ. ನಾಗಾಜು೯ನ ಮತ್ತು ಡಾ. ರಂಗಸ್ವಾಮಿ ಎನ್. ಕಾಯ೯ಕ್ರಮಾಧಿಕಾರಿಗಳು, ಎನ್. ಎನ್.ಎಸ್ ಉಪಸ್ಥಿತರಿದ್ದರು.