ಭಾರತ ಸರ್ಕಾರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಶಿವಮೊಗ್ಗ ವತಿಯಿಂದ 2022 23ನೇ ಸಾಲಿನ ಯುವ ನಾಯಕತ್ವ ಮತ್ತು ಸಮುದಾಯ ಅಭಿವೃದ್ಧಿ ತರಬೇತಿ Training in youth leadership and community development (TYLCD) ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಸಂಪನ್ಮೂಲ ಕೇಂದ್ರ ಶಿವಮೊಗ್ಗದಲ್ಲಿ 05.01. 2023 ರಿಂದ 7.01.2023 ರ ವರೆಗೆ ಮೂರು ದಿನಗಳ ತರಬೇತಿ ಕಾರ್ಯಕ್ರಮಕ್ಕೆ ಇಂದು ಶಿವಮೊಗ್ಗ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳಾದ ಡಾ.ಸೆಲ್ವಮಣಿ ಆರ್ ರವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ನಾಯಕತ್ವ ಗುಣ ಬೆಳೆಸಿಕೊಳ್ಳಲು ಮಾತನಾಡುವ ಕಲೆ ಎಲ್ಲರ ಬಳಿ ಹೊಂದಾಣಿಕೆ ಮಾಡಿಕೊಳ್ಳುವ ಗುಣ

ಬೆಳೆಸಿಕೊಳ್ಳಬೇಕು ನಾಯಕರಾಗಿರುವವರು ಅಧಿಕಾರಕ್ಕೆ ಆಸೆ ಪಡದೆ ಗಾಂಧೀಜಿಯವರ ಹಾಗೆ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಶಿಬಿರಾರ್ಥಿಗಳಿಗೆ ತಿಳಿಸಿದರು

ಈ ತರಬೇತಿಯನ್ನು 45 ಯುವ ಜನರಿಗೆ ನೀಡಲಾಗುತ್ತಿದ್ದು ತರಬೇತಿಯ ಪ್ರಮುಖ ಉದ್ದೇಶ ಯುವಕ ಯುವತಿಯರಲ್ಲಿ ವ್ಯಕ್ತಿತ್ವ ವಿಕಸನ ಜೀವನ ಕೌಶಲ್ಯಗಳು ನಾಯಕತ್ವ ಗುಣ ಸಮಾಜಸೇವೆ, ದೇಶಭಕ್ತಿಯ ಮೌಲ್ಯಗಳು ಮತ್ತು ವೃತ್ತಿ ಯೋಜನೆ ಈ ವಿಷಯಗಳ ಬಗ್ಗೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ನೀಡಲಾಗುವುದು

ಕಾರ್ಯಕ್ರಮದಲ್ಲಿ ಜಿಲ್ಲಾ ತರಬೇತಿ ಕೇಂದ್ರದ ಪ್ರಾಚಾರ್ಯರಾದ ರವೀಂದ್ರ ಚಂದ್ರನಾಯಕ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರೊಫೆಸರ್ ಮತ್ತು ಪಾತ್ ವೇಸ್ ನಿರ್ದೇಶಕರಾದ ಡಾ. ಸಿ ಕೆ ರಮೇಶ್ ರವರು ಹಾಗೂ ಡಾಕ್ಟರ್ ನಾಗರಾಜ್ ಪರಿಸರ ಕಾರ್ಯಕ್ರಮ ಸಂಯೋಜಿಕಾರಿಗಳು ರಾಸೇಯೋ ಕುವೆಂಪು ವಿಶ್ವವಿದ್ಯಾಲಯ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿಗಳಾದ ಉಲ್ಲಾಸ್ ಕೆ ಟಿ ಕೆ ಲೆಕ್ಕಾಧಿಕಾರಿ ರಮೇಶ್ ರಾಷ್ಟ್ರೀಯ ಯುವ ಕಾರ್ಯಕರ್ತರು ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು

error: Content is protected !!