ಶಿವಮೊಗ್ಗ : ಸಿಬಿಐ ಮೇಲೆ ನಮ್ಗೆ ನಂಬಿಕೆ, ವಿಶ್ವಾಸ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಸಿಬಿಐಅನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಹಾಗಾಗಿ ಅವರ ಮೇಲೆ ನಂಬಿಕೆ ಇಲ್ಲ
ಆದ್ದರಿಂದಲೇ ಸಿಬಿಐ ಮೇಲೆ ನಂಬಿಕೆ ಇಲ್ಲ ಅಂತಾ ಸಚಿವ ಸಂಪುಟದಲ್ಲಿ ನಿರ್ಣಯ ತೆಗೆದುಕೊಂಡಿದ್ದೇವೆ ಎಂದರು.
ಕೇಂದ್ರ ಸರ್ಕಾರ ದುರುಪಯೋಗಪಡಿಸಿಕೊಂಡಿರೋದು ಎಲ್ಲರಿಗೂ ಗೊತ್ತಿದೆ, ಕಾನೂನಿನ ಹೋರಾಟ ಮಾಡಲು ಎಲ್ಲರಿಗೂ ಅವಕಾಶ ಇದೆ, ಸಿದ್ದರಾಮಯ್ಯ ಕಾನೂನಿನ ಹೋರಾಟ ಮಾಡುತ್ತಾರೆ ಜಯಗಳಿಸುತ್ತಾರೆ ಎಂದರು.
ಇಡೀ ಪ್ರಪಂಚದಲ್ಲಿ ಗಾಂಧೀಜಿಯವರನ್ನ ನೆನಪು ಮಾಡಿಕೊಳ್ಳುವ ಪವಿತ್ರವಾದ ದಿನ ಇದು, ಇವತ್ತಿನಿಂದ ದಸರಾ ಕೂಡ ಆರಂಭವಾಗಿದೆ
ಮಕ್ಕಳಿಗೆ ಇವತ್ತಿನಿಂದಲೇ ದಸರಾ ರಜೆ ನೀಡಿದ್ದೇವೆ, ಶಿವಮೊಗ್ಗದಲ್ಲೂ ಮಕ್ಕಳ ದಸರಾ ಆಚರಿಸಿದ್ದೇವೆ, ಮೈಸೂರಿನಲ್ಲಿ ಮಾತ್ರ ಮಕ್ಕಳ ದಸರಾ ಹಾಗುತ್ತಾ ಇತ್ತು,
ಇವತ್ತು ಶಿವಮೊಗ್ಗದಲ್ಲೂ ಮಕ್ಕಳ ದಸರಾ ಆಚರಿಸುತ್ತಿರುವುದು ಖುಷಿಯಾಗಿದೆ ಎಂದರು.
ವಿದ್ಯಾರ್ಥಿಗಳು ನಮ್ಮ ದೇಶದ ಮುಂದಿನ ಪ್ರಜೆಗಳು ಅವರು ಸಂವಿಧಾನ ಮತ್ತು ಗಾಂಧೀಜಿಯವರ ತತ್ವಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು
ಬರೀ ದುಡ್ಡಿನಲ್ಲಿ ಗಾಂಧೀಜಿ ಇಟ್ಟುಕೊಳ್ಳಬಾರದು, ಆಗ ಮೌಲ್ಯ ಇರೋಲ್ಲ ,ಅವರನ್ನ ಹೃದಯದಲ್ಲಿಟ್ಟುಕೊಳ್ಳಬೇಕು, ಹೃದಯ ವಿಶಾಲ ಹಾಗೂ ಪವಿತ್ರವಾಗಿರುತ್ತದೆ ಎಂದರು.
ಮೂಡಾ ಹಗರಣ ವಿಚಾರ, ಕಾನೂನಿನಲ್ಲಿ ಏನಿದೆ ಅದು ಆಗಿದೆ, ಕಾನೂನಿನ ಪ್ರಕಾರ ಸಿದ್ದರಾಮಯ್ಯ ಹೋರಾಟ ಮಾಡ್ತಾರೆ: ಮಧುಬಂಗಾರಪ್ಪ
