ರಾಜ್ಯದ ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ, ರೈತರ ಆರ್ಥಿಕ ಬೆನ್ನೆಲುಬು ಆಗಿರುವ, ಅಡಕೆ ತೋಟ ಗಳು, ಎಲೆ ಚುಕ್ಕೆ ರೋಗದಿಂದ ಭಾದಿತ ವಾಗಿದ್ದು ಈಗಾಗಲೇ ರಾಜ್ಯ ಸರಕಾರ ಎಂಟು ಕೋಟಿ ರೂಪಾಯಿಗಳ ನೆರವನ್ನು ಔಷಧಿ ಸಿಂಪರಣೆ ಗೆಂದು, ಘೋಷಣೆ ಮಾಡಿ ಸುಮಾರು ನಾಲ್ಕು ಕೋಟಿ ರೂಪಾಯಿಗಳನ್ನು ಬಿಡುಗಡೆ ಗೊಳಿಸಿದೆ.
ಇಂದು ಬೈಂದೂರು ನಲ್ಲಿ, ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ಅವರು, ತೀರ್ಥಹಳ್ಳಿಯ ರೈತ ಪ್ರತಿನಿಧಿಗಳ ನಿಯೋಗ ಭೇಟಿ ನೀಡಿದ ಸಂದರ್ಭದಲ್ಲಿ, ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ ಹೆಚ್ಚುವರಿಯಾಗಿ ಹತ್ತು ಕೋಟಿ ರೂಪಾಯಿ ಗಳ ಅನುದಾನ ಘೋಷಿಸಿದ್ದಾರೆ.
ಎಲೆ ಚುಕ್ಕೆ ರೋಗದ ತೀವ್ರತೆಯನ್ನು ಅರಿತು, ಹಾಗೂ ಅದರಿಂದ ಆತಂಕಕ್ಕೆ ಒಳಗಾಗಿರುವ ರೈತ ಸಮುದಾಯದ ರಕ್ಷಣೆಗೆ, ಮುಖ್ಯಮಂತ್ರಿಗಳು ಮುಂದಾಗಿದ್ದಾರೆ.