ಶಿವಮೊಗ್ಗ, ಮಾ.2: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ನಗರದ ವಿವಿಧ ಆಸ್ಪತ್ರೆಗಳ ಸಂಯುಕ್ತಾಶ್ರಯದಲ್ಲಿ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಬೃಹತ್ ಆರೋಗ್ಯ ಮೇಳವನ್ನು ಮಾರ್ಚ್ 6 ಮತ್ತು 7ರಂದು ಆಯೋಜಿಸಲಾಗಿದೆ.
ಆರೋಗ್ಯ ಮೇಳ ಬೆಳಿಗ್ಗೆ 11ಗಂಟೆಯಿಂದ ಆರಂಭವಾಗಲಿದ್ದು, ಐ.ಎಂ.ಎ, ತಡಿಕೇಲ ಸುಬ್ಬಯ್ಯ ವೈದ್ಯಕೀಯ ಕಾಲೇಜು, ಸಹ್ಯಾದ್ರಿ ನಾರಾಯಣ ಹೃದಯಾಲಯ, ನಂಜಪ್ಪ ಲೈಫ್‍ಕೇರ್, ಮೆಟ್ರೋ ಆಸ್ಪತ್ರೆ, ಮ್ಯಾಕ್ಸ್ ಆಸ್ಪತ್ರೆ, ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆ, ಶರಾವತಿ ಡೆಂಟಲ್ ಕಾಲೇಜು, ಶಂಕರ ಕಣ್ಣಿನ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ನಡೆಯಲಿದೆ.

error: Content is protected !!