ಕನ್ನಡ ಮತ್ತು ಸಂಸ್ಕøತಿ ಇಲಾಖೆಯು 2020ನೇ ಮೇ ತಿಂಗಳಿನಿಂದ ಮಾಸಾಶನ/ ವಿಧವಾ ಮಾಸಾಶನ ಪಡೆಯುತ್ತಿರುವ ಕಲಾವಿದರು ಸಾಹಿತಿಗಳ ಸಮಗ್ರ ಮಾಹಿತಿಯನ್ನು ಪಡೆಯಲು ನಿಗಧಿತ ನಮೂನೆ ಭರ್ತಿ ಮಾಡಿ ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸುವಂತೆ ಸೂಚಿಸಿದೆ.
ಪಿಂಚಣಿದಾರರು ಪಿಂಚಣಿ ಪಾವತಿ ಆದೇಶದ ಜೇರಾಕ್ಸ್ ಪ್ರತಿ, ಆಧಾರ್ ಕಾರ್ಡ್ ಪ್ರತಿ ಚುನಾವಣಾ ಗುರುತಿನಚೀಟಿ, ಪಡಿತರಚೀಟಿ, ಪ.ಜಾ./ಪ.ಪಂ.ಗಳ ಕಲಾವಿದರು ಕಡ್ಡಾಯವಾಗಿ ಆರ್.ಡಿ.ಸಂಖ್ಯೆ ಇರುವ ಜಾತಿ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಪುಸ್ತಕ ಪ್ರತಿ, ಪಾಸ್‍ಪೋರ್ಟ್ ಅಳತೆಯ ಇತ್ತೀಚಿನ 2 ಭಾವಚಿತ್ರವನ್ನು ಅರ್ಜಿಯೊಂದಿಗೆ ಲಗತ್ತಿಸಿ ಜೂನ್-30 ರೊಳಗಾಗಿ ಇಲಾಖೆಗೆ ಸಲ್ಲಿಸುವಂತೆ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.