ಮಾವಿನಲ್ಲಿ ಸುಣ್ಣದ ಕೊರತೆಯಿದ್ದರೆ ಉಂಟಾಗುವ ಸಮಸ್ಯೆಗಳು
ಗಿಡದ ಬೆಳವಣಿಗೆ ಕುಂಟಿತವಾಗುತ್ತದೆ.ಗಿಡದ ಬುಡದ ಕಾಂಡದಲ್ಲಿ 1ಮೀಟರ್ ಬಿರುಕುಗಳು ಕಾಣುತ್ತವೆ.
ಬಿರುಕುಗಳಲ್ಲಿ ಅಂಟುರಸ ಸೋರುತ್ತದೆ ಗಿಡದ ರಂಬೆಗಳು ಮೇಲಿಂದ ಒಣಗುವುದು
ಹಣ್ಣುಗಳು ಓಟೆ/ಗಭ೯ದಲ್ಲಿ ಕೊಳೆಯುವುದು ಇಳುವರಿಯಲ್ಲಿ ಕಡಿಮೆಯಾಗುವುದು
ಹಾಗಾದರೆ ಮಾವಿನಲ್ಲಿ ಬರುವ ಸಮಸ್ಯೆಗೆ ಯಾವ ಸುಣ್ಣಗಳನ್ನು ನೀಡಬೇಕು
ಅರಳಿದ ಸುಣ್ಣ / ಡೋಲೋಮೈಟ್ ಸುಣ್ಣ / ಜಿಪ್ಸಂ
ಹಾಗಾದರೆ ಸುಣ್ಣವನ್ನು ಯಾವ ಸಮಯದಲ್ಲಿ ನೀಡಬೇಕು, ಸುಣ್ಣವನ್ನು ಜೂನ್ / ಜುಲೈ ತಿಂಗಳಲ್ಲಿ ನೀಡಿದರೆ ಉತ್ತಮ, ಅಗತ್ಯತೆಗೆ ಅನುಗುಣವಾಗಿ ೨ ವಷ೯ಕ್ಕೊಮ್ಮೆ ನೀಡಬಹುದು , ಸುಣ್ಣವನ್ನು ಗಿಡದ ಬುಡದ ಪಾತಿಯಲ್ಲಿ ಅಗೆತಮಾಡಿ ಹಾಕುವುದು ಒಳ್ಳೆಯದು.
ಸುಣ್ಣವನ್ನು ನೀಡುವ ಪ್ರಮಾಣ 3ರಿಂದ 5ವಷ೯ದ ಗಿಡಗಳಿಗೆ 250 ಗ್ರಾಮ ಒಂದು ಗಿಡಕ್ಕೆ, 5 ರಿಂದ 10 ವಷ೯ದ ಗಿಡಗಳಿಗೆ 1 ಕೆ.ಜಿ ಒಂದು ಗಿಡಕ್ಕೆ, 10 ರಿಂದ 15 ವಷ೯ದ ಗಿಡಗಳಿಗೆ 2 ರಿಂದ 3 ಕೆ.ಜಿ ಒಂದು ಗಿಡಕ್ಕೆ
15 ವಷ೯ ಮೇಲ್ಪಟ್ಟ ಗಿಡಗಳಿಗೆ 5 ಕೆ.ಜಿ ಒಂದು ಗಿಡಕ್ಕೆ ನೀಡಬೇಕು
ಹೆಚ್ಚಿನ ಮಾಹಿತಿಗಾಗಿ ಸಂಪಕಿ೯ಸಿ: ಬಸವನ ಗೌಡ ಎಂ.ಜಿ .
ಐ.ಸಿ.ಎ.ಆರ್ – ತರಳಬಾಳು ಕೃಷಿ ವಿಙಾನ ಕೇಂದ್ರ . ದಾವಣಗೆರೆ . ಮೊಬೈಲ್ ಸಂಖ್ಯೆ: 94834 26955