ಮಾವಿನ ಕಾಯಿ ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ, ಬೇಸಿಗೆ ಅಂದರೆ ಮಾವು ಬಿಡುವ ಕಾಲ. ಸೀಸನ್ನಲ್ಲಿ ಸಿಕ್ಕ ಮಾವಿನ ಕಾಯಿಯಲ್ಲಿ ಉಪ್ಪಿನ ಕಾಯಿ ತಯಾರಿಸುವುದೇ ಒಂದು ರೀತಿಯ ಮಜ.ಸಿಕ್ಕ ಮಾವಿನ ಕಾಯಿಯನ್ನು ಉಪ್ಪಿನ ಕಾಯಿ ಮಾಡಿ ವಷ೯ ಪೂತಿ೯ ತಿನ್ನುವ ಹಾಗೆ ಮಾಡಿ ಇಟ್ಟು ಕೊಳ್ಳುವುದು ರೂಢ
ಉಪ್ಪಿನ ಕಾಯಿ ಅಂದ ತಕ್ಷಣ ಎಲ್ಲರ ಮನೆ ಉಪ್ಪಿನ ಕಾಯಿಯೂ ಕೂಡ ಒಂದೇ ತರ ಇರುವುದಿಲ್ಲ. ಒಂದೊಂದು ಮನೆಯ ಉಪ್ಪಿನ ಕಾಯಿ ರುಚಿಯೂ ಕೂಡ ಭಿನ್ನವಾಗಿರುತ್ತದೆ. ಉಪ್ಪಿನ ಕಾಯಿ ಮಾಡೋ ವಿಧಾನ ಕೂಡ ಬಿನ್ನವಾಗಿರುತ್ತದೆ. ಹಾಗಾದರೆ ಬನ್ನಿ ಉಪ್ಪಿನ ಕಾಯಿಯನ್ನು ಮಾಡುವ ವಿಧಾನವನ್ನು ತಿಳಿಯೋಣ.

ಮಾವಿನ ಉಪ್ಪಿನಕಾಯಿಗೆ ಬೇಕಾಗುವ ಸಾಮಗ್ರಿಗಳು:
1. ಹುಳಿ ಇರುವ ಮಾವಿನ ಕಾಯಿಗಳು 8ರಿಂದ 10
2. ಅಗತ್ಯಕ್ಕೆ ತಕ್ಕಷ್ಟು ಉಪ್ಪು
3. ಅಚ್ಚ ಖಾರದ ಪುಡಿ
4.ಸಾಸಿವೆ 6 ಚಮಚ
5. ಸಾಸಿವೆ ಎಣ್ಣೆ 2ಕಪ ಇಂಗು 1 ಚಮಚ

6.ಮೆಂತೆ 4 ಚಮಚ

  1. ಉಪ್ಪಿನಕಾಯಿ ತಯಾರಿಸುವ ವಿಧಾನ:
    ಮಾವಿನ ಕಾಯಿಯನ್ನು ಶುದ್ದ ನೀರಿನಿಂದ ತೊಳೆದು ಒಣ ಬಟ್ಟೆಯಿಂದ ಚೆನ್ನಾಗಿ ಒರೆಸಬೇಕು (ನೀರು ಇದ್ದರೆ ಉಪ್ಪಿನ ಕಾಯಿ ಹಾಳಾಗುವ ಸಾಧ್ಯತೆ ಹೆಚ್ಚು) ನಂತರ ಮಾವಿನಕಾಯಿಯನ್ನು ಅಗತ್ಯಕ್ಕೆ ತಕ್ಕ ಗಾತ್ರದಂತೆ ಹೆಚ್ಚಿಟ್ಟುಕೊಳ್ಳಬೇಕು.ಒಂದು ಜಾಡಿಯನ್ನು ತೆಗೆದುಕೊಂಡು ತೇವಾಂಶ ಇಲ್ಲದಂತೆ ಅದನ್ನು ಒರೆಸಿ ಹೆಚ್ಚಿದಂತಹ ಮಾವಿಕಾಯಿಯ ಹೋಳುಗಳನ್ನು ಉಪ್ಪನ್ನು ಸೇರಿಸಿ ಮಿಶ್ರಣ ಮಾಡಿ ಇಡಬೇಕು. ಹಾಗು ಗಾಳಿಯು ಜಾಡಿಯೊಳಗೆ ಹೋಗದಂತೆ ಗಟ್ಟಿಯಾಗಿ ಜಾಡಿಯ ಮುಚ್ಚಳವನ್ನು ಮುಚ್ಚಿ ಇಡಬೇಕು 3 ರಿಂದ 4 ದಿನಗಳ ನಂತರ ಜಾಡಿಯ ಮುಚ್ಚಳವನ್ನು ತೆಗೆದು ಜಾಡಿಯಲ್ಲಿ ಇರುವಂತಹ ಉಪ್ಪು ಮಿಶ್ರಿತ ಮಾವಿನಕಾಯಿಯನ್ನು ಮೆಂತೆ,ಸಾಸಿವೆ,ಕೆಂಪುಒಣ ಮೆಣಸಿನಕಾಯಿಯನ್ನು ಹುರಿದು ಪುಡಿ ಮಾಡಿ ಜಾಡಿಯಲ್ಲಿ ಇರುವಂತಹ ಮಾವಿನ ಕಾಯಿಯ ಜೊತೆಯಲ್ಲಿ ಚೆನ್ನಾಗಿ ಮಿಶ್ರಣ ಮಾಡಿ ಮುಚ್ಚಿಡಬೇಕು
    5ರಿಂದ 6 ದಿನಗಳ ನಂತರ ಒಗ್ಗರಣೆಗೆ ಒಂದು ಬಾಣಲೆಯಲ್ಲಿ ಎಣ್ಣೆಯನ್ನುಇಟ್ಟು ಎಣ್ಣೆ ಕಾದ ನಂತರ ಸಾಸಿವೆಯನ್ನು ಹಾಕಿ ಸಿಡಿದ ನಂತರ ಇಂಗನ್ನು ಎಣ್ಣೆಯ ಜೊತೆಗೆ ಸೇರಿಸಿ ಸ್ವಲ್ಪ ಹೊತ್ತು ಆರಲು ಬಿಡಬೇಕು. ಜಾಡಿಯಲ್ಲಿ ಇರುವಂತಹ ಮಿಶ್ರಿತ ಮಾವಿನ ಕಾಯಿಯನ್ನು ತೆಗೆದು ಸಾಸಿವೆ ಹಾಗು ಇಂಗಿನ ಜೊತೆ ಒಗ್ಗರಣೆಯಲ್ಲಿ ಮಿಶ್ರಣ ಮಾಡಿ ನಂತರ ಉಪಯೋಗಿಸಬಹುದು. ಉಪ್ಪಿನ ಕಾಯಿಯ ಜಾಡಿಯ ಮುಚ್ಚಳವನ್ನು ಹೆಚ್ಚು ಹೊತ್ತು ತೆಗೆದಿಡಬಾರದು.ಅಗತ್ಯಕ್ಕೆ ತಕ್ಕಂತೆ ತೆಗೆದುಕೊಂಡು ಜಾಡಿಯ ಮುಚ್ಚಳವನ್ನು ಮುಚ್ಚಿಡಬೇಕು. ಹಾಗಿದ್ದರೆ ಉಪ್ಪಿನ ಕಾಯಿ ಹೆಚ್ಚು ದಿನ ಇಡಬಹುದು. ಈಗ ಮಾವಿನ ಕಾಯಿಯಿಂದ ತಯಾರಿಸಿದ ಉಪ್ಪಿನಕಾಯಿ ಸವಿಯಲು ಸಿದ್ದ……..

@GeethaTraditional Recipes
Email: geethalokesh1977@gmail.com

error: Content is protected !!