ಶಿಕಾರಿಪುರ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿ ಇಂದು ಸಾವಯವ ಸಿರಿ ಯೋಜನೆಯಡಿ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿಗಳಾದ ನಾಗಪ್ಪ ಕೆ ರವರು ಸಾವಯವ ಕೃಷಿ ಮತ್ತು ಇಲಾಖಾ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಶಿವಮೊಗ್ಗ ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನಿಗಳಾದ ಡಾ.ಜ್ಯೋತಿ ಎಂ ರಾಥೋಡ್ ರವರು ಮಾತನಾಡಿ ಮನೆಯ ಹಿತ್ತಲಲ್ಲಿ ತರಕಾರಿ ಬೆಳೆ ಬೆಳೆಯುವುದು, ಸಿರಿಧಾನ್ಯಗಳ ಮೌಲ್ಯವರ್ಧನೆ ಮತ್ತು ಕೃಷಿ ಉತ್ಪನ್ನಗಳ ಸಂಸ್ಕರಣೆ ಮಾಡಿ ಉಪಯೋಗ ಮಾಡುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಮತ್ತು ಈ ವರ್ಷವು ಸಿರಿಧಾನ್ಯ ವರ್ಷ ಎಂದು ಘೋಷಿಸಲಾಗಿದೆ ಎಂದು ಮಾಹಿತಿ ನೀಡಿದರು.
ಶ್ರೀಮತಿ ನಯನ, ಸಾವಯವ ಪ್ರಮಾಣ ಅಧಿಕಾರಿ, ಕೆ.ಎಸ್.ಒ.ಸಿ.ಎ ಇವರು ರೈತರ ಜಮೀನನ್ನು ಸಾವಯವ ಭೂಮಿ ಎಂದು ದೃಢೀಕರಸಲು ವ್ಯಕ್ತಿಗತ ಹಾಗೂ ಗುಂಪಿನಲ್ಲಿ ಅರ್ಜಿ ಸಲ್ಲಿಸಿದಾಗ ಸಾವಯವ ಭೂಮಿ ಎಂದು ಪ್ರಮಾಣೀಕರಿಸಲು ಹಂತ ಹಂತವಾಗಿ ಇರುವ ಮಾನದಂಡಗಳನ್ನು ಮತ್ತು ವಿಧಾನಗಳನ್ನು ತಿಳಿಸಿದರು. ಹಾಗು
ಸಾವಯವ ಕೃಷಿ ಅಳವಡಿಸಿಕೊಂಡಿರುವ ರೈತರಾದ ಶ್ರೀ ಷಣ್ಮುಖಪ್ಪ ಮುತ್ತಗಿ ಗ್ರಾಮದವರು ಸಾವಯವದಲ್ಲಿ ಬಳಸುವ ಕೀಟನಾಶಕಗಳು ಮತ್ತು ಸಾವಯವ ಕೃಷಿಯಲ್ಲಿ ಹೈನುಗಾರಿಕೆಯ ಪ್ರಾಮುಖ್ಯತೆ ಹಾಗೂ ತಮ್ಮ ಅನುಭವವನ್ನು ಹಂಚಿಕೊಂಡರು.
ಶ್ರೀಮತಿ ಲತಾ ಎಸ್., ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರು ಇವರು ಅಡಿಕೆ ಸಿಪ್ಪೆಯಿಂದ ಕಾಂಪೋಸ್ಟ್ ತಯಾರಿಸುವ ಪದ್ದತಿ, ಎರೆಹುಳು ಗೊಬ್ಬರ ತಯಾರಿಕೆ ಮತ್ತು ವೇಸ್ಟ್ ಡೀಕಾಂಪೋಸರ್ ಬಳಕೆ ಕುರಿತು ಮಾಹಿತಿ ನೀಡಿದರು.