ವರದಿ: ಜಯಂತ್ ಮೈಸೂರು ೮.೦೫.೨೦೧೯
ಮೈಸೂರಿನಲ್ಲಿ ಪತ್ರಿಕಾ ಗೋಷ್ಠಿಯನ್ನು ಉದೇಶಿಸಿ ಮಾತನಾಡಿದ ಅವರು ದೇವೆಗೌಡರಿಗೆ ಹಾಗು ಜೆ.ಡಿ.ಎಸ್ ಪಕ್ಷಕ್ಕೆ ವಿಶ್ವನಾಥ ರವರು ವಿಷ ಇಟ್ಟಿದ್ದಾರೆ ನಮ್ಮ ಪಕ್ಷಕೆ ಕರೆದು ಕೋಡು ಬಂದು ನಮ್ಮ ಪಕ್ಷಕೆ ಹಾನಿಯಾಗಿದೆ, ಸದನದಲ್ಲಿ ನಾನು ಹೇಳಿರುವ ಹೇಳಿಕೆಗೆ ಈಗಾಗಲು ಬದ್ದನಾಗಿದ್ದೇನೆ. ವಿಶ್ವನಾಥ್ ವಲಸಿಗ ಹಕ್ಕಿಯಾಗಿದರೆ ಮುಂದಿನ ದಿನಗಳಲ್ಲಿ ಬಿಜೆಪಿಗೆ ಮೋಸ ಮಾಡಲಿದ್ದಾರೆ. ನಾನು ಮಾಡಿರುವ ಆರೋಪ ಸುಳ್ಳುದಾರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದನಿದ್ದೇನೆ. ಯಾವುದೇ ರಾಜಕಾರಣಿಗಳು ಸಾರ್ವಜನಿಕರ ಮುಂದೆ ನಿಲ್ಲಲಾಗದಂತಹ ಪರಿಸ್ಥಿತಿಗೆ ತಂದಿದ್ದೀರಿ.
ನಾವೆಲ್ಲರೂ ದೇವೇಗೌಡರ ಮನೆಯಲ್ಲಿ ಸಭೆ ಸೇರಿದ್ದಾಗ ವಿಶ್ವನಾಥ್ ಅವರನ್ನು ಲೋಕಸಭಾ ಚುನಾವಣೆಗೆ ನಿಲ್ಲುವಂತೆ ಹೇಳಿದರು.ಅದಕ್ಕೆ ಒಪ್ಪದ ವಿಶ್ವನಾಥ್ ತಮ್ಮನ್ನು ಶಾಸಕನನ್ನಾಗಿ ಮಾಡುವಂತೆ ಕೋರಿದರು.ನಾನು ಯಾರ ಬಳಿಯಾದರೂ ಹಣ ಪಡೆದಿದ್ದರೆ ಹೇಳಿ.
ನಾನು ಯಾರಿಗೆ ಸಹಕಾರ ಸಹಾಯ ಮಾಡಿದೆ ಅವರ ಬಳಿ ನೀವು ತಮ್ಮ ಮಗ ಭೇಟಿ ಮಾಡ್ತಾನೆ ಅವನಿಗೆ ತಲುಪಿಸಿ ಎಂದು ನೀವು ಹೇಳಲಿಲ್ಲವೇ ಎಂದು ವಿಶ್ವನಾಥ್ ಅವರನ್ನು ಪ್ರಶ್ನಿಸಿದ ಸಾ.ರಾ ಮಹೇಶ್ ನನ್ನ ಇದುವರೆಗಿನ ರಾಜಕೀಯ ಜೀವನದಲ್ಲಿ ಯಾರನ್ನೂ ವೈಯಕ್ತಿಕವಾಗಿ ನಿಂದನೆ ಮಾಡಿಲ್ಲಾ.ಕಾಂಗ್ರೆಸ್ ನಲ್ಲಿ ಮೂಲೆ ಗುಂಪಾಗಿದ್ದವರನ್ನು ಜೆಡಿಎಸ್ ಗೆ ಕರೆತಂದು ತಪ್ಪು ಮಾಡಿದೆ.ಎಚ್.ಡಿ ದೇವೇಗೌಡರ ಕುಟುಂಬಕ್ಕೆ ನಾನು ವಿಷ ನೀಡಿರುವುದು ನಿಜ.
ಎಲ್ಲೇ ಕರೆದರು ನಾನು ಚರ್ಚೆಗೆ ಸಿದ್ದ. ವಿಶ್ವನಾಥ್ ಪಂಥಾಹ್ವಾನಕ್ಕೆ ಒಪ್ಪಿಗೆ ಸೂಚಿಸಿದ ಮಾಜಿ ಸಚಿವ ಸಾರಾ ಮಹೇಶ್. ದೇವಸ್ಥಾನದಲ್ಲಿ ಪ್ರಮಾಣ ಮಾಡಲು ಬೇಕಾದ್ರು ಬರ್ತೀನಿ. ಬಹಿರಂಗ ಚರ್ಚೆಗೆ ಬೇಕಾದ್ರು ನಾನು ಸಿದ್ದನಿದ್ದೇನೆ. ನಿನ್ನೆ ನಾನು ಕಾಯುತ್ತಿದ್ದೆ ಅವರು ಚರ್ಚೆಗೆ ಆಹ್ವಾನ ಮಾಡ್ತಾರೆಂದು. ಆದರೆ ಅವರು ಪಂಥಾಹ್ವಾನ ನೀಡಿದ್ದಾರೆ, ನಾನು ಬದ್ದ.ಅವರು ಎಲ್ಲಿಗಾದರೂ ಕರೆಯಲಿ ನಾನು ಚರ್ಚೆಗೆ ಸಿದ್ದನಿದ್ದೇನೆ.
ನಾನು ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗಿಲ್ಲ ಎಂದು ಚಾಮುಂಡಿ ಸನ್ನಿಧಾನಕ್ಕೆ ಬಂದು ಪ್ರಮಾಣ ಮಾಡಿ. ಆ ಬಳಿಕ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆಂದು ಎಚ್. ವಿಶ್ವನಾಥ್ ಗೆ ಸವಾಲು ಹಾಕಿದ ಸಾ.ರಾ ಮಹೇಶ್. ವಿಶ್ವನಾಥ್ ಮಾಡಿದ್ದು ರಾಜಕೀಯ ವ್ಯಭಿಚಾರವಾಗಿದೆ.ಇದು ಧರ್ಮ ಅಧರ್ಮಗಳ ನಡುವಿನ ಯುದ್ಧ.
ನನ್ನ ರಾಜಕೀಯ ಜೀವನ ನಿಮ್ಮ ರಾಜಕೀಯ ಜೀವನ ಎರಡನ್ನೂ ಸಾರ್ವಜನಿಕರ ಮುಂದಿಡೋಣ ಎಂದ ಸಾ.ರಾ ಮಹೇಶ ನಿಮ್ಮ ಗೋಮುಖ ವ್ರಾಘ್ರ ರಾಜ್ಯದ ಜನರಿಗೆ ಗೊತ್ತಾಗಬೇಕು ಹಾಗಾಗಿ ನೀವು ಬಹಿರಂಗ ಚರ್ಚೆಗೆ ಬನ್ನಿ ಎಂದು ಎಚ್. ವಿಶ್ವನಾಥ್ ಗೆ ಪಂಥಾಹ್ವಾನ ನೀಡಿದ ಸಾ.ರಾ ಮಹೇಶ್.ಸಮ್ಮಿಶ್ರ ಸರ್ಕಾರ ಪತನಕ್ಕೆ ಸಾ.ರಾ ಮಹೇಶ್ ಕಾರಣವೆಂಬ ಆರೋಪಗಳಿಗೆ ತಿರುಗೇಟು ನೀಡಿದ ಸಾ.ರಾ ಮಹೇಶ್.ನಾನು ಏನು ತಪ್ಪು ಮಾಡಿದ್ದೇನೆ ಎಂದು ಹೇಳಲಿ. ತಪ್ಪಾಗಿದ್ದರೆ ತಿದ್ದಿಕೊಳ್ಳುತ್ತೇನೆಂದು ತಿರುಗೇಟು ನೀಡಿದ ಸಾ.ರಾ ಮಹೇಶ್.ನೀನು ರಾಜಕೀಯ ವ್ಯಭಿಚಾರಿ.ಪಕ್ಷ ದ್ರೋಹ ಮಾಡಿ ಬಾಂಬೆಗೆ ಹೋಗಿ ಕುಳಿತಿದ್ದು ಸುಳ್ಳಾ.
ಯಾವುದೇ ಹಣ ಪಡೆಯದೇ ಬಾಂಬೆಗೆ ಹೋಗಿದ್ರಾ.?ಬನ್ನಿ ನೀವು ಎಲ್ಲೇ ಹೇಳಿದರು ಅಲ್ಲಿಗೆ ನಾನು ಬರಲು ಸಿದ್ದ. ನಿಮ್ಮದೆ ಜಾಗ, ನಿಮ್ಮದೆ ಆಯ್ಕೆ.!ಮೈಸೂರಿನಲ್ಲಿ ವಿಶ್ವನಾಥ್ ಆಹ್ವಾನ ಒಪ್ಪಿಕೊಂಡು ಪ್ರತಿ ಸವಾಲು ಹಾಕಿದ ಸಾರಾ ಮಹೇಶ್.