ವರದಿ: ಜಯಂತ್ ಮೈಸೂರು ೦೪.೦೮.೨೦೧೯
ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇದು ನನ್ನ ಕೊನೆಯ ಚುನಾವಣೆ, ಮುಂದಿನ ಚುನಾವಣೆಯಲ್ಲಿ ಸ್ಪರ್ದಿಸೋದಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ ರಾಜಕೀಯದಲ್ಲಿ ಭಾರಿ ನೊಂದಿದ್ದೇನೆ ನನಗೆ ರಾಜಕೀಯ ಸಾಕು ಹೆಚ್ ಡಿ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರಿಗೆ ಮುಂದಿನ ಚುನಾವಣೆಯಲ್ಲಿ ನಿಲ್ಲೋದಿಲ್ಲ ಎಂದು ಹೇಳಿ ಬಂದಿದ್ದೇನೆ.
ಕುಮಾರಸ್ವಾಮಿ ಹಾಗೂ ದೇವೇಗೌಡರನ್ನ ದೇವರೆಂದು ಭಾವಿಸಿ ನನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ.ಚುನಾವಣಾ ನೋವು ನನಗೆ ಮಾತ್ರ ಗೊತ್ತು.ಇನ್ನುಳಿದ 3ವರೆ ವರ್ಷ ಕ್ಷೇತ್ರದ ಜನರ ಜೊತೆ ಇರ್ತೇನೆ. ನನ್ನ ಜನರಿಗೆ ಒಂದು ದನ್ಯಾವಾದ ಹೇಳೋಕೆ ಆಗಿಲ್ಲ
ಮುಂದಿನ ಚುನಾವಣೆಯಲ್ಲಿ ಸ್ಪರ್ದಿಸಲ್ಲ.ನಾನು ಯಾರ ಹಂಗಲ್ಲು ಬದುಕಿಲ್ಲ, ಯಾರು ನನಗೆ ರಾಜಕೀಯ ಗುರು ಗಳಿಲ್ಲ. ಕುಮಾರಸ್ವಾಮಿ ದೇವೇಗೌಡ,ಸಿದ್ದರಾಮಯ್ಯ ಯಾರಿಂದಲೂ ಸಹಾಯ ವಾಗಿಲ್ಲ ಕುಮಾರಪರ್ವ, ಚುನಾವಣೆಗಳು ಜೆಡಿಎಸ್ ನಿಂದ ಒಂದು ರೂಪಾಯಿ ಹಣ ಪಡೆದಿಲ್ಲ, ನನ್ನ ಸ್ವಂತ ಹಣದಿಂದ ಎಲ್ಲವನ್ನ ಮಾಡಿದ್ದೇನೆ ಈ ಹಿಂದೆ ಮುಂದಿನ ಚುನಾವಣೆ ಯಲ್ಲಿ ಹರೀಶ್ ಗೌಡ ನೇ ಅಭ್ಯರ್ಥಿ ಅಂದಿದ್ರು ಕುಮಾರಸ್ವಾಮಿ, ಅಥವಾ ಎಂ ಎಲ್ ಸಿ ಮಾಡ್ತೇವೆ ಅಂದಿದ್ರು. ಯಾವುದು ಆಗಲಿಲ್ಲ.ನಂಗೆ ಮೈತ್ರಿ ಸರ್ಕಾರದಲ್ಲಿ ಉನ್ನತ ಶಿಕ್ಷಣ ಖಾತೆ ಬೇಡ ಎಂದು ಒಂದು ತಿಂಗಳು ದೂರ ಸರಿದಿದ್ದೆ. ನನಗಿಷ್ಟವಾದ ಖಾತೆ ಸಿಗಲಿಲ್ಲ ಹೇಳ್ತ ಹೋದ್ರೆ ಸಾಕಷ್ಟಿದೆ ಎಂದು ಜೆಡಿಎಸ್ ವಿರುದ್ಧ ಬೇಸರ ವ್ಯಕ್ತಪಡಿಸಿದರು