ಮಲೆನಾಡು ಗಿಡ್ಡ ತಳಿ ಸಂಶೋಧನೆ ಹಾಗೂ ಮಾಹಿತಿ ಕೇಂದ್ರ, ಪ್ರಾಣಿ ತಳಿ ಅನುವಂಶೀಯತೆ ಹಾಗೂ ತಳಿ ಶಾಸ್ತ್ರ ವಿಭಾಗ ಪಶುವೈದ್ಯಕೀಯ ಮಹವಿದ್ಯಾಲಯ, ಶಿವಮೊಗ್ಗ À “ಮಲೆನಾಡು ಗಿಡ್ಡ ತಳಿಯ ವಿಶೇಷತೆಗಳು ಹಾಗೂ ವಿವಿಧ ಉತ್ಪನ್ನಗಳ ಮೌಲ್ಯ ವರ್ಧನೆ” ಎರಡು ದಿನದ ತರಬೇತಿ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತ ಈ ತರಬೇತಿಯಲ್ಲಿ 36 ಜನ ರೈತರು ಭಾಗವಹಿಸಿದ್ದು, ಕರ್ನಾಟಕದ ವಿವಿಧ ಜಿಲ್ಲೆಗಳಾದ ಶಿವಮೊಗ್ಗ, ಹಾಸನ, ಉಡುಪಿ, ಚಿಕ್ಕಮಗಳೂರ, ಬೆಂಗಳೂರು, ಚಾಮರಾಜನಗರ ಜಿಲ್ಲೆಗಳಿಂದ ರೈತರು ತರಬೇತಿಯನ್ನು ಭಾಗವಹಿಸಿದ್ದರು.


ಈ ತರಬೇತಿ ಕಾರ್ಯಕ್ರಮದಲ್ಲಿ ಡಾ. ಪ್ರಕಾಶ್. ಎನ್ ಡೀನ್, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ, ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದರು. ಅವರು ಮಲೆನಾಡು ಗಿಡ್ಡ ತಳಿಯ ರಾಸುಗಳು ಗಾತ್ರದಲ್ಲಿ ಕಿರಿದಾಗಿದ್ದರೂ ಅತೀ ಹೆಚ್ಚು ರೋಗ ನಿರೋಧಕ ಶಕ್ತಿಯನ್ನು ಹೊಂದಿರುವ ತಳಿಯಾಗಿದೆ. ಈ ತಳಿಯ ವಿಷೇಷ ಕಡಿಮೆ ಆಹಾರ ತಿಂದು ಸಾಮರ್ಥಕ್ಕಿಂತ ಹೆಚ್ಚು ಹಾಗು ಪೌಷ್ಟಿಕಾಂಶಯುಕ್ತ ಹಾಲನ್ನು ನೀಡುತ್ತದೆ ಹಾಗು ದಿನೇ ದಿನೇ ಈ ಮಲೆನಾಡು ಗಿಡ್ಡ ತಳಿ ಕಡಿಮೆಯಾಗುತ್ತಿದೆ ಎಂದು ತಿಳಿಸಿದರು.


ಡಾ.ಶಿಲ್ಪ ಕೃಷಿ ಸಂಶೋಧÀಕಿ, ಕೃಷಿ ಮಹಾವಿದ್ಯಾಲಯ, ನವಿಲೆ, ಶಿವಮೊಗ್ಗ ಅವರು ಮಲೆನಾಡು ಗಿಡ್ಡ ತಳಿಯ ಸಗಣಿ ಮತ್ತು ಗಂಜಳದಿಂದ ತೈಯರಿಸುವ ವಿವಿಧ ಉತ್ಪನ್ನಾಗಳಾದ ಬೀಜಾಮೃತ, ಜೀವಾಮೃತ ಹಾಗೂ ಸಾವಯವ ಕೀಟನಾಶಕ ಉಪಯೋಗ ಹಾಗು ಅವರ ಸಂಶೋಧÀನೆಗಳ ಬಗ್ಗೆ ಪರಿಚಯಿಸಿ ಅದರ ಉಪಯೋಗವನ್ನು ತಿಳಿಸಿದರು.


ಡಾ. ಪವನ್‍ರವರು ಹಾಲಿನಿಂದ ತೈಯಾರಿಸಬಹುದಾದ ಬೆಣ್ಣೆ, ತುಪ್ಪ, ಲಸ್ಸಿ, ಪನ್ನೀರ್,ವ್ಹೇ ಡ್ರಿಂಕ್, ಕುಲ್ಫಿ ಮುಂತಾದವುಗಳನ್ನು ಪ್ರಾತ್ಯಕ್ಷತೆಯ ಮುಖಾಂತರ ತೈಯರಿಸುವ ವಿಧಾನಗಳನ್ನು ತೋರಿಸಿದರು.
ಕಾಂiÀರ್iಕ್ರಮದಲ್ಲಿ ತರಬೇತಿ ನಿರ್ದೇಶಕರಾದ ಡಾ. ಆರ್.ಜಯಶ್ರೀಯವರು ಸ್ವಾಗತ ಭಾಷಣ ಹಾಗೂ ಪ್ರಸ್ಥಾವಿಕ ನುಡಿಗಳನ್ನು ಮಾಡಿದರು. ಡಾ. ಸತೀಶ್‍ರವರು ದೇಶಿ ಗೋತಳಿಗಳ ಹಾಗೂ ಮಲೆನಾಡು ಗಿಡ್ಡ ಸಂಶೋಧನೆ ಹಾಗೂ ಮಾಹಿತಿ ಕೇಂದ್ರದ ಚಟುವಟಿಕೆಗಳ ಬಗ್ಗೆ ತಿಳಿಸಿದರು.

error: Content is protected !!