ಶಿವಮೊಗ್ಗ, ಜನವರಿ 01: ಶಿವಮೊಗ್ಗ ತಾಲ್ಲೂಕು ಪಂಚಾಯಿತಿ ಕಚೇರಿಯ ಹಳೇ ಕಟ್ಟಡ ನೆಲಸಮ ಮಾಡಿದ್ದರಿಂದ ಕಟ್ಟಡದಲ್ಲಿದ್ದ ಹಳೆಯ ಮರ ಮುಟ್ಟುಗಳಾದ ಬಾಗಲಿ ಮತ್ತು ಕಿಟಕಿ ಚೌಕಟ್ಟುಗಳನ್ನು ಸಾರ್ವಜನಿಕರ ಸಮಕ್ಷಮದಲ್ಲಿ ತಾ.ಪಂ ಕಚೇರಿಯಲ್ಲಿರುವ ಸ್ಥಳದಲ್ಲಿಯೇ ಜ.18 ರಂದು ಮಧ್ಯಾಹ್ನ 04 ಗಂಟೆಗೆ ಹರಾಜು ಪ್ರಕ್ರಿಯೆಯನ್ನು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೈಗೊಳ್ಳುವರು.
ಸಾಗುವನಿ ಮತ್ತು ಬಿಲ್ವಾರ ಸೇರಿದಂತೆ ಒಟ್ಟು ರೂ.94174/- ಮೊತ್ತದ 124 ಮರಮಟ್ಟುಗಳನ್ನು ಬಹಿರಂಗವಾಗಿ ಹರಾಜು ಮಾಡಲಾಗುವುದು. ಬಹಿರಂಗ ಹರಾಜಿನಲ್ಲಿ ಭಾಗವಹಿಸುವವು ರೂ.10,000 ಠೇವಣಿಯಾಗಿ ಒಂದು ದಿನ ಮುಂಚಿತವಾಗಿ ಪಾವತಿಸಿ ರಶೀದಿ ಪಡೆದು ಹರಾಜಿನಲ್ಲಿ ಭಾಗವಹಿಬಹುದು. ಹೆಚ್ಚಿನ ವಿವರಗಳಿಗೆ ಶಿವಮೊಗ್ಗ ತಾಲ್ಲೂಕು ಪಂಚಾಯತ್ ಕಾರ್ಯಾಲಯ, ದೂ.ಸಂ: 08182-222299 ನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.
