ಶಿವಮೊಗ್ಗ: ಸ್ನೇಹ, ಸೇವೆ, ಓಡನಾಟಕ್ಕಾಗಿ ಆರಂಭಗೊಂಡ ಅಂತರಾಷ್ಟ್ರೀಯ ಸೇವಾ ಸಂಸ್ಥೆಯು ಇನ್ನರ್‌ವ್ಹೀಲ್ ಆಗಿದ್ದು, ಮನುಕುಲದ ಸೇವೆಗೆ ನಿರಂತರವಾಗಿ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದು ಇನ್ನರ್‌ವ್ಹೀಲ್ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆ ಅಧ್ಯಕ್ಷೆ ಮಧುರಾ ಮಹೇಶ್ ಹೇಳಿದರು.
ಗೋಪಾಳದ ಆಟೋ ಚಾಲಕರ ಪತ್ನಿ ಸುಮಾ ಎನ್ನುವವರು ಗ್ಯಾಂಗ್ರೀನ್ ನಿಂದ ಬಳಸುತ್ತಿದ್ದು ಹಾಗೂ ಪಾರ್ಶ್ವವಾಯು ಪೀಡಿತರಿಗೆ ಎರಡು ತಿಂಗಳ ಔಷಧಿ ಹಾಗೂ ಆರ್ಥಿಕ ನೆರವು ನೀಡಿ ಮಾತನಾಡಿ, ಇನ್ನರ್‌ವ್ಹೀಲ್ ಸಂಸ್ಥೆಯು ತೀವ್ರ ಸಂಕಷ್ಟ ಹಾಗೂ ನೋವಿನಿಂದ ಬಳಲುತ್ತಿರುವವರಿಗೆ ನೆರವು ನೀಡುವ ಮೂಲಕ ಸೇವಾ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ ಎಂದು ತಿಳಿಸಿದರು.
ಆರೋಗ್ಯ ಕ್ಷೇತ್ರದಲ್ಲಿ ಉಚಿತ ಶಿಬಿರ ಹಾಗೂ ಕಾಯಿಲೆಗಳಿಂದ ನೋವು ಅನುಭವಿಸುತ್ತಿರುವವರಿಗೆ ಅಗತ್ಯ ನೆರವು ನೀಡುವ ಮೂಲಕ ಸಾರ್ಥಕ ಕಾರ್ಯಗಳನ್ನು ಇನ್ನರ್‌ವ್ಹೀಲ್ ಮಾಡುತ್ತಿದೆ. ಶೈಕ್ಷಣಿಕ ಕ್ಷೇತ್ರದಲ್ಲೂ ಮಹತ್ತರ ಕೆಲಸಗಳನ್ನು ಮಾಡುತ್ತಿದ್ದು, ವಿಶೇಷ ನೆರವು ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಕಾಯಿಲೆಯಿಂದ ನೋವು ಅನುಭವಿಸುತ್ತಿರುವ ಜತೆಯಲ್ಲಿ ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಸಾರ್ವಜನಿಕರು, ಸಂಘ ಸಂಸ್ಥೆಗಳು ಕಷ್ಟದಲ್ಲಿರುವ ಇವರಿಗೆ ಬಂದು ನೆರವು ನೀಡಬೇಕು. ಇವರ ಮೊ.ಸಂ. 9741956602 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ವಲಯ 11ರ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಮಾತನಾಡಿ, ನಿಜವಾಗಿ ಅಗತ್ಯ ಇರುವವರಿಗೆ ಸೇವೆ ಮಾಡುವುದು ಅತ್ಯಂತ ಮುಖ್ಯ. ಇಂತಹ ಕಷ್ಟದಲ್ಲಿ ಇರುವ ಕುಟುಂಬಗಳಿಗೆ ನೆರವು ನೀಡಬೇಕು. ಇನ್ನರ್‌ವ್ಹೀಲ್ ಸಂಸ್ಥೆಯು ಮಾಡುತ್ತಿರುವ ಕೆಲಸ ಅತ್ಯಂತ ಶ್ಲಾಘನೀಯ ಎಂದು ಅಭಿಪ್ರಾಯ ಪಟ್ಟರು.
ಇನ್ನರ್‌ವ್ಹೀಲ್ ಮಾಜಿ ಅಧ್ಯಕ್ಷೆ ಬಿಂದು ವಿಜಯ್‌ಕುಮಾರ್, ಚಂದ್ರ., ಸವಿತಾ, ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಸದಸ್ಯರು ಉಪಸ್ಥಿತರಿದ್ದರು.
![](https://www.newsnext.co/wp-content/uploads/2023/04/IMG-20230419-WA0094.jpg)