.
ಹೃದಯ ವೈಫಲ್ಯದ ಬಗ್ಗೆ ವಿಶ್ವದೆಲ್ಲೆಡೆ, ಅದರಲ್ಲೂ ವಿಶೇಷವಾಗಿ ಅಭಿವೃದ್ಧಿ ಹೊಂದುತ್ತಿರುವಂತಹ ದೇಶಗಳಾದ ಭಾರತದಲ್ಲಿ ಸಂಪೂರ್ಣವಾಗಿ ಗುರುತಿಸಲಾಗಿಲ್ಲ. ಇದೊಂದು ಒಂದು ಏಕಮಾತ್ರ ಕಾಯಿಲೆಯ ಲಕ್ಷಣವೆಂದು ಪರಿಗಣಿಸುವಂತಿಲ್ಲ, ಬದಲಾಗಿ ಅನೇಕ ಆರೋಗ್ಯ ಅಸ್ತವ್ಯಸ್ಥತೆಗಳು ಈ ಹೃದಯ ವೈಫಲ್ಯಕ್ಕೆ ಕಾರಣವಾಗಬಲ್ಲುದು.
ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯದ ಕವಾಟುಗಳಿಗೆ ರೋಗಗಳಿಂದಾಗುವ ಪರಿಣಾಮ (ಅಯೋಟಿಕ್ ಸ್ಟೆನೋಸಿಸ್) ಸೋಂಕುಗಳು, ಹೃದಯದ ಸ್ನಾಯುಗಳ ರೋಗ (ಕಾರ್ಡಿಯೋಮಯೋಪತಿ), ಕೊರೊನರಿ ಆರ್ಟರಿ ರೋಗಗಳು, ಹೃದಯ ಸ್ತಂಭನ, ಅಥವಾ ವಯಸ್ಸಾಗುವಿಕೆ – ಈ ಎಲ್ಲಾ ಕಾರಣಗಳು ಹೃದಯ ವೈಫಲಕ್ಕೆ ಕಾರಣವಾಗಬಹುದು. ಇವುಗಳನ್ನೆಲ್ಲಾ ಮುಂಚಿತವಾಗಿಯೇ ತಪಾಸಣೆ ಮಾಡಿ ಪತ್ತೆಹಚ್ಚುವುದರಿಂದ ಇಂತಹ ಅಪಾಯಕಾರಿ ರೋಗವನ್ನು ತಪ್ಪಿಸಬಹುದಾಗಿದೆ.
ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆ ಆಯೋಜಿಸಿರುವ ಇಂದಿನ ಪತ್ರಿಕಾಗೋಷ್ಠಿಯ ಪ್ರಮುಖ ವಿಷಯ “ಹೃದಯ ವೈಫಲ್ಯ – ಗುರುತಿಸಲ್ಪಟ್ಟ ರೋಗಗಳ ಅಡಿಯಲ್ಲಿ” ಎಂಬುದಾಗಿತ್ತು. ಈ ಗೋಷ್ಠಿಯು ಹೃದಯ ವೈಫಲ್ಯ ಮತ್ತು ಸಾವಿಗೆ ಕಾರಣವಾಗುವ ವಿವಿಧ ಹೃದಯ ಸಂಬಂಧಿತ ಸಮಸ್ಯೆಗಳ ಬಗ್ಗೆ ಅರಿವು ಹೆಚ್ಚಿಸುವ ಗುರಿ ಹೊಂದಿದೆ. ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯ, ಕಾರ್ಡಿಯೋಥೋರಾಸಿಕ್ ವ್ಯಾಸ್ಕುಲರ್ ಸರ್ಜರಿ ಮತ್ತು ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥರು ಹಾಗೂ ತಪಾಸಣಾ ತಜ್ಞರಾದ ಡಾ. ದೇವಾನಂದ ಎನ್ ಎಸ್. ಅವರು ವಿವಿಧ ಹೃದಯ ಸಂಬಂಧಿ ಸಮಸ್ಯೆಗಳು ಮತ್ತು ಅವುಗಳನ್ನು ಸರಿಯಾದ ಸಮಯಕ್ಕೆ ತಪಾಸಿಸಿ ಪತ್ತೆ ಹಚ್ಚದಿದ್ದಲ್ಲಿ ಅವು ಹೇಗೆ ಜೀವ ಬೆದರಿಕೆಯಾಗಬಲ್ಲುದು ಎಂಬ ಬಗ್ಗೆ ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ.
ಹೃದಯ ವೈಫಲ್ಯ ಮತ್ತು ಹೃದಯರೋಗಗಳಿಗೆ ಸಂಬಂಧಿಸಿದಂತೆ ಮಾತನಾಡಿದ ಡಾ. ದೇವಾನಂದ ಎನ್ ಎಸ್, “ಹೃದಯ ವೈಫಲ್ಯ ಎಂಬುದು ಒಂದು ವಿಸ್ತಾರವಾದ ಪದವಾಗಿದೆ. ಅದರಲ್ಲಿ ಎರಡು ಅಂಶಗಳಿವೆ. ಅವುಗಳೆಂದರೆ ಒಂದು ತಕ್ಷಣ (ಹಠಾತ್) ಅಥವಾ ತೀವ್ರ ಹೃದಯ ವೈಫಲ್ಯ ಎಂಬುದಾಗಿದ್ದು, ಇವುಗಳಲ್ಲಿ ೨೦-೩೦% ಅಕಾಲಿಕ ಮರಣ ಸಂಭವಿಸಿದರೆ, ಇನ್ನೊಂದು ಅಂಶದಲ್ಲಿ ದೀರ್ಘಕಾಲೀನ ಅಥವಾ ಬಹುಕಾಲದ ಅಸ್ವಸ್ಥತೆಯಾಗಿದ್ದು, ಎರಡೂ ಸಂದರ್ಭಗಳೂ ಸಾವಿಗೆ ಮತ್ತು ದೌರ್ಬಲ್ಯದಿಂದ ಬಳಲುತ್ತಾ ಜೀವನ ನಡೆಸಲು ಕಾರಣವಾಗಬಲ್ಲದು.
ಅನೇಕ ಜನರು ವಯಸ್ಸಾಗಿರುವುದರಿಂದ, ವಾಯು ಸಮಸ್ಯೆಗಳಂತಹ ಆರೋಗ್ಯ ಸಮಸ್ಯೆಗಳಿಂದ ದುರ್ಬಲರಾಗಿರುವುದು ಅಥವಾ ಉಸಿರಾಟದ ತೊಂದರೆ ಹೊಂದಿರುತ್ತಾರೆ ಎಂಬ ತಪ್ಪುಕಲ್ಪನೆ ಹೊಂದಿರುತ್ತಾರೆ. ಆದರೆ ಇವುಗಳು ದೀರ್ಘಕಾಲೀನ ಹೃದಯ ವೈಫಲ್ಯತೆಯ ರೋಗ ಲಕ್ಷಣಗಳಾಗಿರುವ ಸಾಧ್ಯತೆಗಳಿರಬಹುದು. ಹಾಗಾಗಿ, ಸರಿಯಾದ ಸಮಯಕ್ಕೆ ಸೂಕ್ತ ನಿರ್ವಹಣೆಯಿಂದ ತಪಾಸಣೆ ನಡೆಸಿ ರೋಗಸಮಸ್ಯೆ ಪತ್ತೆಹಚ್ಚುವುದರಿಂದ ಅಕಾಲಿಕ ಮರಣವನ್ನು ತಡೆಗಟ್ಟಬಹುದಾಗಿದ್ದು, ಇದೊಂದು ಹೃದಯ ವೈಫಲ್ಯತೆಯ ಅತೀ ದೊಡ್ಡ ಸಮಸ್ಯೆಗಳಲ್ಲೊಂದಾಗಿದೆ.”
ಪತ್ರಿಕಾ ಗೋಷ್ಠಿಯು ಹೃದಯ ವೈಫಲ್ಯತೆ ನಿರ್ವಹಣೆ ಮಾಡಲು ಅನೇಕ ವಿಧಾನಗಳಿವೆ ಎಂಬುದರ ಬಗ್ಗೆಯೂ ಹೆಚ್ಚಿನ ಬೆಳಕು ಚೆಲ್ಲಿದೆ. ಹೃದಯ ಸಮಸ್ಯೆಯ ಲಕ್ಷಣವಿರುವ ಹೆಚ್ಚಿನ ಪ್ರಮಾಣದ ರೋಗಿಗಳನ್ನು ಜೀವನಶೈಲಿಯ ಮಾರ್ಪಾಡು, ಸೂಕ್ತ ಆಹಾರ ಪದ್ದತಿ ಹೊಂದಾಣಿಕೆ ಮತ್ತು ಕೆಲವೊಂದು ಔಷಧಿಯ ಮೂಲಕ ನಿರ್ವಹಣೆ ಮಾಡಬಹುದಾಗಿದೆ. ಇನ್ನು ಕೆಲವು ವಿಶಿಷ್ಟ ಪ್ರಕರಣಗಳಲ್ಲಿ ರೋಗಿಯು ಈ ಎಲ್ಲಾ ವಿಧಾನಗಳನ್ನು ಪ್ರಯತ್ನಿಸಿದರೂ ಯಾವುದೇ ಸುಧಾರಣೆ ಕಾಣದಿದ್ದಾಗ, ಅಂತಹ ಸಂದರ್ಭದಲ್ಲಿ ರೋಗಿಗಳಿಗೆ ಹೃದಯಕ್ಕೆ ಪೂರಕ ಸಾಧನಗಳ ಅಳವಡಿಕೆ ಇತ್ಯಾದಿ ಸುಧಾರಿತ ಚಿಕಿತ್ಸೆಗಳನ್ನು ನೀಡಬಹುದಾಗಿದೆ.
ಇಂದಿನ ಸನ್ನಿವೇಶದಲ್ಲಿ ಹೃದಯ ವೈಫಲ್ಯತೆಗೆ ಸಂಬಂಧಿಸಿದ ಚಿಕಿತ್ಸೆಯಲ್ಲಿ ಸ್ವಲ್ಪ ಮಟ್ಟಿನ ಪ್ರಗತಿಯಾಗಿದ್ದರೂ ಸಹ ರೋಗ ತಪಾಸಣೆ ಮಾಡುವ ಬಗ್ಗೆ ಜನರಲ್ಲಿ ಇನ್ನೂ ಹೆಚ್ಚಿನ ಅರಿವು ಮೂಡಿಸಲು ಹೆಚ್ಚು ಗಮನಹರಿಸಬೇಕಾಗಿರುವುದು ಇಂದಿನ ಅಗತ್ಯವಾಗಿದೆ. ಹಾಗಾಗಿ ಇದರ ಬಗ್ಗೆ ಹೆಚ್ಚು ಜ್ಞಾನವಿರುವ ತಜ್ಞರಿಂದ ಸಲಹೆಗಳನ್ನು ಪಡೆಯುವ ಅವಶ್ಯಕತೆಯಿದೆ. ಇಂತಹ ಮೂಲಭೂತ ಅಂಶಗಳನ್ನು ಗುರುತಿಸುವುದು ಅತೀ ಮುಖ್ಯವಾಗಿದ್ದು, ಈ ರೋಗಗಳನ್ನು ನಿರ್ಲಕ್ಷಿಸಿದರೆ ಜನರು ತಮ್ಮ ಜೀವ ಕಳೆದುಕೊಳ್ಳುತ್ತಾರೆ. ಹಾಗಾಗಿ ಜನರು ಸೂಕ್ತವಾಗಿ ಸ್ಪಂದಿಸಲು ಹಾಗೂ ತಡಮಾಡದೇ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯಲು ಜಾಗೃತಿ ಮೂಡಿಸುವುದು ಅತೀ ಅವಶ್ಯಕವಾಗಿದೆ,
“ಶಿವಮೊಗ್ಗ ಪ್ರದೇಶದಿಂದ ನಾವು ಪ್ರತಿ ತಿಂಗಳು ಸುಮಾರು 20 ರಿಂದ 30 ರೋಗಿಗಳನ್ನು ವಿವಿಧ ಹೃದಯ ಪರಿಸ್ಥಿತಿಗಳೊಂದಿಗೆ ನೋಡುತ್ತೇವೆ. ಹೆಚ್ಚಿನ ಸಮಯಗಳಲ್ಲಿ ರೋಗಿಗಳಿಗೆ ನಾವು ತಪಾಸಣೆ ನಡೆಸಿ ಮತ್ತು ಚಿಕಿತ್ಸೆ ನೀಡುವವರೆಗೆ ಅವರಿಗೆ ಹೃದಯ ವೈಫಲ್ಯತೆ ಸಾಧ್ಯತೆಯ ಬಗ್ಗೆ ತಿಳಿದಿರುವುದಿಲ್ಲ. ಸಂಪೂರ್ಣ ಜಾಗೃತಿಯ ಕೊರತೆಯೇ ರೋಗಿಗಳ ಮತ್ತು ಚಿಕಿತ್ಸೆಯ ಸಂಪರ್ಕದ ಮಧ್ಯೆ ಬೃಹತ್ ಅಂತರಕ್ಕೆ (ಬಿರುಕು) ಕಾರಣವಾಗಿದೆ” ಎಂದು ವೈದ್ಯರು ತಿಳಿಸಿದರು.
ಮಣಿಪಾಲ್ ಆಸ್ಪತ್ರೆಯ ಬಗ್ಗೆ:
ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಈ ಮಣಿಪಾಲ್ ಆಸ್ಪತ್ರೆಯು, ವಾರ್ಷಿಕವಾಗಿ ೪ ಮಿಲಿಯನ್ ರೋಗಿಗಳ ಸೇವೆಯನ್ನು ಮಾಡುವ ಮೂಲಕ ಆರೋಗ್ಯಸೇವೆ ಒದಗಿಸುವುದರಲ್ಲಿ ಭಾರತದಲ್ಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಇದು ಮಿತವಾದ ದರದಲ್ಲಿ, ಅತ್ಯುತ್ತಮ ಗುಣಮಟ್ಟದ ಚೌಕಟ್ಟಿನ ಆರೋಗ್ಯ ಸೇವೆಯನ್ನು ತನ್ನ ಮಲ್ಟಿಸ್ಪೆಷಾಲಿಟಿ ಹಾಗೂ ತೃತೀಯ ಸೇವಾ ವಿತರಣೆ ಜಾಲ ಹಾಗೂ ಆಸ್ಪತ್ರೆಯ ಹೊರಗೆ ಕೂಡ ತನ್ನ ಸೇವೆಯನ್ನು ನೀಡುವ ಬಗ್ಗೆ ಗಮನ ಕೇಂದ್ರೀಕರಿಸಿದೆ. ಕೊಲಂಬಿಯಾ ಏಷ್ಯಾ ಹಾಸ್ಪಿಟಲ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ವಿಕ್ರಂ ಆಸ್ಪತ್ರೆ (ಬೆಂಗಳೂರು)ಪ್ರೈವೇಟ್ ಲಿಮಿಟೆಡ್‌ನಲ್ಲಿ ೧೦೦%ರಷ್ಟು ಷೇರು ಪಡೆಯುವಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಮೂಲಕ, ತನ್ನ ಸಮಗ್ರ ಜಾಲವನ್ನು ಭಾರತದಾದ್ಯಂತ ಇಂದು ೧೫ ನಗರಗಳ ೨೭ ಆಸ್ಪತ್ರೆಗಳಲ್ಲಿ ೭,೬೦೦+ ಬೆಡ್‌ಗಳು ಮತ್ತು ೪,೦೦೦ ಪ್ರತಿಭಾವಂತ ತಜ್ಞ ವೈದ್ಯರ ತಂಡ ಹಾಗೂ ೧೧,೦೦೦ ಕ್ಕಿಂತಲೂ ಅಧಿಕ ಪ್ರಬಲ ನೌಕರರನ್ನು ಈ ಮಣಿಪಾಲ್ ಆಸ್ಪತ್ರೆ ಹೊಂದಿದೆ.
ಮಣಿಪಾಲ್ ಆಸ್ಪತ್ರೆಗಳು ಜಾಗತಿಕವಾಗಿ ಎಲ್ಲೆಡೆಯ ರೋಗಿಗಳಿಗೆ ವಿಸ್ತೃತವಾದ ಸಮಗ್ರ ಮತ್ತು ಆರೋಗ್ಯ ಸೇವೆಯನ್ನು ಒದಗಿಸುತ್ತದೆ. ಮಣಿಪಾಲ್ ಆಸ್ಪತ್ರೆಗಳು ಎನ್‌ಎಬಿಎಚ್, ಹಾಗೂ ಎಎಎಚ್‌ಆರ್‌ಪಿಪಿ ಮಾನ್ಯತೆ ಪಡೆದಿದ್ದು, ಅದರ ಸಂಪರ್ಕ ವ್ಯಾಪ್ತಿಯಲ್ಲಿರುವ ಆಸ್ಪತ್ರೆಗಳು ಎನ್ ಎ ಬಿ ಎಲ್, ಇ ಆರ್ ಮತ್ತು ಬ್ಲಡ್ ಬ್ಯಾಂಕ್‌ಗೆ ಮಾನ್ಯತೆ ಹೊಂದಿವೆ ಹಾಗೂ ದಕ್ಷ ನರ್ಸಿಂಗ್‌ಗಾಗಿ ಮಾನ್ಯತೆ ಪಡೆದಿವೆ. ಮಣಿಪಾಲ್ ಆಸ್ಪತ್ರೆಗಳು ವಿವಿಧ ಗ್ರಾಹಕ ಸಮೀಕ್ಷೆಗಳ ಮೂಲಕ ಭಾರತದಾದ್ಯಂತ ಹೆಚ್ಚು ಗೌರವ ಹೊಂದಿರುವ ಹಾಗೂ ರೋಗಿಗಳ ಶಿಫಾರಸ್ಸು ಪಡೆದ ಆಸ್ಪತ್ರೆ ಎಂಬ ಹೆಗ್ಗಳಿಕೆ ಹೊಂದಿದೆ.