ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಸುದ್ದಿಗಾರರೊಂದಿಗೆ ಶಿವಮೊಗ್ಗದಲ್ಲಿ ಮಾತನಾಡಿ ಮಂಗಳೂರಿನಲ್ಲಿ ನಡೆದಿರುವಂತಹ ಘಟನೆಗಳ ಬಗ್ಗೆ ಉದ್ದೇಶ ಪೂವ೯ಕವಾಗಿ ಅಲ್ಪ ಸಂಖ್ಯಾತರಲ್ಲಿ ಗೊಂದಲವನ್ನು ಉಂಟುಮಾಡುವ ಪ್ರಯತ್ನವನ್ನು ಮಾಡುತ್ತಿದ್ದಾರೆ, ಪ್ರತಿಭಟನೆಯನ್ನು ಮಾಡುತ್ತಿರುವವರು ಅಲ್ಪ ಸಂಖ್ಯಾತರಿಗೆ ಅನ್ಯಾಯವಾಗುತ್ತಿದೆ ಎನ್ನುವ ಬಗ್ಗೆ ಮಾತನಾಡುತ್ತಿಲ್ಲ. ಬರೀ ಗೊಂದಲವನ್ನುಮೂಡಿಸುತ್ತಿದ್ದಾರೆ. ಈ ಬಗ್ಗೆ ಏಕಕಾಲದಲ್ಲಿ ಘಟನೆಯನ್ನು ಸಿಒಡಿ ಹಾಗು ನ್ಯಾಯಂಗ ತನಿಖೆಯನ್ನು ಮಾಡಲು ಆದೇಶಿಸಿದ್ದೇನೆ ಎಂದು ತಿಳಿಸಿದರು.
ಪಕ್ಕದ ಕೇರಳದಿಂದ ಬಂದಂತಹ ಮುಸುಕುದಾರಿ ಯುವಕರು ಈ ಕೃತ್ಯದಲ್ಲಿ ಭಾಗಿಯಾಗಿರುವುದು ಖಚಿತವಾದ ಮಾಹಿತಿಯಿಂದ ಧೃಡಪಟ್ಟಿದೆ. ಬಂದಂತಹವರಲ್ಲಿ ಪೋಲೀಸ್ ಠಾಣೆಗೆ ಬೆಂಕಿ ಹಚ್ಚಲು ಯತ್ನಸಿದಾಗ ಗೋಲಿಬಾರ್ ನಡೆಸಲಾಗಿದೆ. ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಿ ,ಅಲ್ಪಸಂಖ್ಯಾತ ಭಾಂದವರು ಈ ಕಾಯ್ದೆಯ ಬಗ್ಗೆ ಅತಂಕ ಪಡುವ ಅಗತ್ಯವಿಲ್ಲ.ಶಾಂತಿಯುತ ಫ್ರತಿಭಟನೆಗೆ ಯಾವ ಅಬ್ಯಂತರವೂ ಕೂಡ ಇಲ್ಲ ಕಾನೂನನ್ನು ಯಾರೂ ಕೂಡ ಕೈಗೆ ತೆಗೆದುಕೊಳ್ಳಬಾರದು ಎಂದು ಹೇಳಿದರು.